State News

3 % ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

WhatsApp Group Join Now
Telegram Group Join Now

3 % ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದ ಅಧಿಕಾರಿ

ಸಕಾ೯ರಿ ಕೆಲಸ ದೇವರ ಕೆಲಸ ಅಂತ ಹೇಳುತ್ತಾರೆ, ಈ ಕೆಲಸ ಮಾಡೋದಕ್ಕು ಸಹಾಯಕ ಅಭಿಯಂತರರೊಬ್ಬರು ಲಂಚದ ಬೇಡಿಕೆ ಇಟ್ಟು ಲಂಚದ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಗದಗ-ಬೆಟಗೇರಿ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವರ್ಧಮಾನ.ಎಸ್. ಹುದ್ದಾರ ಎಂಬುವವರೇ ಲಂಚ ಸ್ವೀಕರಿಸಲು ಹೋಗಿ ಎಸಿಬಿಗೆ ಸಿಕ್ಕಿಬಿದ್ದವರು.

ಎಸಿಬಿ ಅಧಿಕಾರಗಳ ಪ್ರಕಾರ ಅಬ್ಬಿಗೇರಿ ಕಾಲೋನಿ ಗದಗ ನಿವಾಸಿ ಸಿವಿಲ್‌ ಗುತ್ತಿಗೆದಾರ ಅಬ್ದುಲ್‌ಸಲಾಮ್ ಅಬ್ದುಲ್‌ಗನಿ ಮನಿಯಾರ್ ಇವರು ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಗದಗ ಬೆಟಗೇರಿ ನಗರಸಭೆಯ ೧೩೫ ಪೌರ ಕಾರ್ಮಿಕರಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡುವುದಕ್ಕೆ ಸಂಬಂದಿಸಿದಂತೆ ಬೆಟಗೇರಿ ಸರ್ವೆ ನಂ:೬೧೩/೧+೨+೩, ೬ ಎಕರೆ ನೇದ್ದರಲ್ಲಿ ಮಣ್ಣನ್ನು ಹೊರಸಾಗಿಸುವ ಕಾಮಗಾರಿಯ ಗುತ್ತಿಗೆಯನ್ನು ಟೆಂಡರ್ ಮೂಲಕ ವಹಿಸಿಕೊಂಡಿದ್ದುನಗರಸಭೆಯ ಕಾಮಗಾರಿ ನಿರ್ವಹಿಸಿದ್ದು ಆ ಬಾಬ್ತು ಬಿಲ್ಲಿನ ಮೊತ್ತರೂ, ೧೨,೯೬,೨೯೬ ಮತ್ತು ತೆರಿಗೆ ಮಂಜೂರಾಗಬೇಕಾಗಿದ್ದು ಈ ಮೊತ್ತ ಮಂಜೂರಾತಿ ಬಗ್ಗೆ ಆರೋಪಿತಅಧಿಕಾರಿ  ವರ್ಧಮಾನ.ಎಸ್. ಹುದ್ದಾರ ಬಿಲ್ಲಿನ ಮೊತ್ತದ ೩% ಅಂದರೆ ರೂ, ೪೦,೦೦೦ ಲಂಚದ ಮೊತ್ತಕ್ಕೆ ಬೇಡಿಕೆಇಟ್ಟಿದ್ದರು.

ಈ ಒಳಗಾಗಿ ಮನಿಯಾರ್‌ ಅವರಿಂದ ರೂ, ೧೫,೦೦೦ ಲಂಚದ ಹಣ ಪಡೆದುಕೊಂಡಿದ್ದು, ದಿನಾಂಕ:೦೫-೦೭-೨೦೨೧ ರಂದು ಅನೀಲ ಮುದ್ದಾ ಕಾಯಾ೯ಪಾಲಕ ಅಭಿಯಂತರ ಜಿಲ್ಲಾ ನಗರಾಭಿವೃದ್ದಿ ಕೋಶ ಗದಗ ಇವರು ೧೦,೦೦೦ ರೂಗಳನ್ನು ಪಡೆದುಕೊಂಡಿದ್ದು ಮತ್ತು ಕಾಮಗಾರಿ ಮೊತ್ತದ ಪೈಕಿ ೧೦,೧೮,೯೯೬ ರೂಗಳ ಚೆಕ್ ಕೊಡುವ ಪೂರ್ವದಲ್ಲಿ ನಗರಸಭೆ ಆಯುಕ್ತರಾದ  ರಮೇಶ ಪಾಂಡುರಂಗ ಜಾಧವ ಇವರು೧,೫೦,೦೦೦-೦೦ ರೂಗಳ ಲಂಚವನ್ನು ನೀಡಲು ಕೇಳಿದ್ದರು ಎಂದು ಎಸಿಬಿ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹುದ್ದಾರ್‌ ಇವರು ಬುಧವಾರ ೨೫,೦೦೦-೦೦ ರೂಲಂಚದ ಹಣವನ್ನು ಸ್ವೀಕರಿಸುವಾಗ ದಾಳಿ ಆಗಿರುತ್ತದೆ, ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಬಿ ಎಸ್ಪಿ ಬಿ.ಎಸ್‌.ನೇಮಗೌಡ ಈ ಮೂವರ ಅಧಿಕಾರಿಗಳು ಬೇರೆ ಬೇರೆ ಸಂದಭ೯ದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟದ್ದರು ಎಂಬುದರ ಬಗ್ಗೆ ಫಿಯಾ೯ದಿ ಸಾಕ್ಷ್ಯ ಸಮೇತ ದೂರು ನೀಡಿದ್ದರು ಆದರೆ ಹುದ್ದಾರ್‌ ಒಬ್ಬರೆ ಟ್ರ್ಯಾಪ್‌ ಆಗಿದ್ದಾರೆ. ಇನ್ನು ಈ ಉಳಿದ ಇಬ್ಬರ ಬಗ್ಗೆ ಕೇಳಿ ಬಂದಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದ್ದು. ಈ ಇಬ್ಬರು ಅಧಿಕಾರಿಗಳ ಮೇಲೆACBಯೂ ಸಹ ದೂರು ದಾಖಲಿಸಿಕೊಳ್ಳಲಾಗಿದೆ ಎಂದರು.

 

 

 

WhatsApp Group Join Now
Telegram Group Join Now

Related Posts

1 of 103
error: Content is protected !!