ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ ೨೭ ರಷ್ಟು ಕೊರತೆ ಮಳೆಯಾಗಿದೆ, ಪ್ರಕೃತಿಯ ಕೋಪಕ್ಕೆ ಗುರಿಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಆಗಿದ್ದು ಸಾಮಾನ್ಯ ಮಳೆ. ಹೌದು ಕೃಷಿ ವಿಜ್ಞಾನಿ ಪ್ರಕಾರ ಇದು ನಿಜ.
ಉತ್ತರ ಕನಾ೯ಟಕದ ಹಲವೆಡೆ ಕಳೆದ ಕೆಲವು ದಿನಗಳಿಂದ ಮಳೆ ತನ್ನ ಪ್ರತಾಪ ತೋರದಿರುವುದು ರೈತರಿಗೆ ಸಮಾಧಾನದ ವಿಷಯ, ಮಳೆಯಿಂದ ಕೊಂಚ ಬಿಡುವು ಸಿಕ್ಕಿದೆ ಎನ್ನಬಹುದು.
ಆದರೆ ಮುಂದಿನ ಐದು ದಿನ ಮಳೆ ಕಡಿಮೆ ಇರಲಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಕೃಷಿ ವಿಜ್ಞಾನಿ, ಹವಾಮಾನ ತಜ್ಞ ಡಾ. ಆರ್ ಎಚ್ ಪಾಟೀಲ, ಮುಂದಿನ ಐದು ದಿನ ಮಳೆ ಕಡಿಮೆ ಇರಲಿದೆ. ಕರಾವಳಿ, ಹಾಗೂ ಮಳೆನಾಡಿನಲ್ಲಿ ಹಗುರ ಹಾಗೂ ಕೊಂಚ ತೀವ್ರ ಮಳೆಯಾಗಲಿದೆ.
ಮಲೆನಾಡಿನ ಸೆರಗಿನಲ್ಲಿ ತುಂಬಾ ಹಗುರ ದಿಂದ ಹಗುರ ಚದುರಿದಂತೆ ಮಳೆಯಾಗಲಿದೆ ಆದರೆ ಮೋಡಕವಿದ, ತಂಪಾದ ವಾತಾವರಣ ಇರಲಿದೆ.
ಉಳಿದಂತೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ಹಾಗೂ ಬೆಚ್ಚಗಿನ ವಾತಾವರಣ ಇರಲಿದೆ. ಆದರೆ ಚದುರಂತೆ ಮಳೆಯಾಗುವ ಸಂಭವ ಕಡಿಮೆ ಇದೆ ಎಂದು ಡಾ. ಪಾಟೀಲ ತಿಳಿಸಿದರು.
ಇದುವರೆಗಿನ ಮಳೆಯ ಸ್ಥಿತಿಗತಿ
೧೧ ಜಿಲ್ಲೆಗಳಲ್ಲಿ ಅತಿಹೆಚ್ಚು ಮಳೆಯಾಗಿದೆ, ೦೮ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಸಾಮಾನ್ಯ ಮಳೆ ೧೦ ಜೆಲ್ಲೆಯಲ್ಲಿಯಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕೊರತೆಯ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ -೨೩ ಪ್ರತಿಶತ ಮಳೆ ಕೊರತೆಯಾಗಿದೆ ಎಂದು ಡಾ. ಪಾಟೀಲ ಮಾಹಿತಿ ನೀಡಿದರು.
ಉತ್ತರ ಒಳನಾಡಿನ ಜಿಲ್ಲೆಗಳಿಗೆ ಬರೋದಾದರೆ, ಮೂರು ಜಿಲ್ಲೆಗಳು ಧಾರವಾಡ, ಗದಗ ಹಾಗೂ ಕೊಪ್ಪಳ ದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಬೀದರ, ಕಲ್ಬುಗಿ೯, ರಾಯಚೂರು, ಬಾಗಲಕೋಟೆ, ಬೆಳಗಾವಿ, ಹಾವೇರಿ ಹಾಗೂ ಬಳ್ಳಾರಿಯಲ್ಲಿ ಹೆಚ್ಚು ಮಳೆಯಾಗಿದೆ. ವಿಜಯಪುರ, ಯಾದಗೀರ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ, ಜೂನ್ ೧ ರಿಂದ ಅಗಸ್ಟ್ ೨ ರವರೆಗೆ ೩೫೮ ಮಿಮಿ ಮಳೆಯಾಗಿದ್ದು ಸಾಮಾನ್ಯ ಮಳೆ(೨೪೦ ಮಿಮಿ) ಗಿಂತ ೪೯ ಪ್ರತಿಶತ ಹೆಚ್ಚಿಗೆ ಮಳೆಯಾಗಿದೆ ಎಂದು ಪಾಟೀಲರು ತಿಳಿಸಿದರು. ಉತ್ತರ ಒಳನಾಡಿನಲ್ಲಿ ವಾರದಲ್ಲಿ ಸುರಿದ ಮಳೆಯ ಲೆಕ್ಕಾಚಾರ ನೋಡಿದರೆ, ಜೂನ್ ೨ ರಂದು ಅಂತ್ಯವಾದ ಹಾಗೂ ಜುಲೈ ೭ ರಂದು ಅಂತ್ಯವಾದ ವಾರಗಳನ್ನುಬಿಟ್ಟರೆ ಸಾಮಾನ್ಯ ಮಳೆಯಾಗಿದೆ ಅಥವಾ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಿದೆ ಎಂದು ಅವರು ತಿಳಿಸಿದರು.