ವಿಪರೀತ ಎನ್ನುವಷ್ಟು ಸುರಿಯುತ್ತಿದ್ದ ಮುಂಗಾರು ಮಳೆ, ಕಳೆದೆರಡು ದಿನದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಡುವು ನೀಡಿದೆ. ನಿನ್ನೆ ಹಾಗೂ ಇಂದು ಮಳೆಯೂ ರಾಜ್ಯದ ಜನರಿಗೆ ಅಷ್ಟಾಗಿ ಭಾಧಿಸಿಲ್ಲ.
ಇನ್ನೂ ನಾಳೆ, ನಾಡಿದ್ದು ಮತ್ತೆ ಮಳೆ ಚುರುಕುಗೊಳ್ಳಲಿದೆಯೇ? ಈ ಪ್ರಶ್ನೆಗೆ ಹವಾಮಾನ ತಜ್ಞರು ಕೊಂಚ ನಿರಾಳರಾಗುವಂತಹ ಸುದ್ದಿ ನೀಡಿದ್ದು. ಇನ್ನು ನಾಲ್ಕೈದು ದಿನ ಮಳೆ ಉತ್ತರ ಒಳನಾಡಿನಲ್ಲಿ ಮಳೆ ಬಿಡುವು ನೀಡಲಿದೆ. ಅದಲ್ಲದೆ ಬಿಸಿಲು ಸಹ ಇರಲಿದೆ ಎಂದಿದ್ದಾರೆ.
ಈ ಬಗ್ಗೆ ನಮ್ಮೊಂದಿಗೆ ಮಾತನಾಡಿದ ಹವಾಮಾನ ತಜ್ಞ, ಕೃಷಿ ತಜ್ಞ ಡಾ. ಆರ್ ಎಚ್ ಪಾಟೀಲ ಉತ್ತರ ಒಳನಾಡಿನಲ್ಲಿ ಇನ್ನೂ ನಾಲ್ಕಾರು ದಿವಸ ಬಿಡವು ನೀಡಲಿದೆ. ಮಳೆ ಸುರಿಯುವ ಸಾಧ್ಯತೆ ತೀರಾ ಕಡಿಮೆ ಇದೆ, ಒಳ್ಳೆಯ ಬಿಸಿಲು ಇರುವ ಸಾಧ್ಯತೆ ದಟ್ಟವಾಗಿದೆ ಎಂದರು.
ಮುಂದಿನ ನಾಲ್ಕಾರು ದಿನ ಮಳೆನಾಡಿನಲ್ಲಿ ತುಂತುರು ಮಳೆ ಸಾಧ್ಯತೆ ಇದೆ, ಕರಾವಳಿಯಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ ಎಂದರು.
ರೈತರು ಈ ಮಳೆಯ ಬಿಡುವಿನ ಅವಧಿಯಲ್ಲಿ ಪೋಷಕಾಂಶಗಳನ್ನು ಬೆಳೆಗಳಿಗೆ ನೀಡಬಹುದು. ಇನ್ನಿತರ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಬಹುದು ಎಂದು ಡಾ. ಪಾಟೀಲ ತಿಳಿಸಿದರು.