ದಾಂಪತ್ಯ ಜೀವನಕ್ಕೆ ಕಾಲಿಡಲು ಹರ್ಷಿಕಾ ಪೂಣಚ್ಚ ಹಾಗೂ  ಭುವನ್ ಪೊನ್ನಣ್ಣ ರೆಡಿ ಆಗಿದ್ದಾರೆ. ಆಗಸ್ಟ್ 24ರಂದು ವಿರಾಜಪೇಟೆಯಲ್ಲಿ ಈ ಜೋಡಿ  ಹಸೆಮಣೆ ಏರಲಿದೆ. ದೀರ್ಘ ಕಾಲದವರೆಗೆ ಸ್ನೇಹಿತರಾಗಿದ್ದ ಭುವನ್ ಮತ್ತು ಹರ್ಷಿಕಾ ಈಗ  ತಮ್ಮ ಗೆಳೆತನಕ್ಕೆ ಹೊಸ ಅರ್ಥ ನೀಡುತ್ತಿದ್ದಾರೆ.

ರಾಜ್​ಕುಮಾರ್ ಕುಟುಂಬದ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ಹರ್ಷಿಕಾ ಆಮಂತ್ರಣ ನೀಡಿದ್ದಾರೆ.

ರಾಜ್​ಕುಮಾರ್ ಕುಟುಂಬದ ರಾಘವೇಂದ್ರ ರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ಹರ್ಷಿಕಾ ಆಮಂತ್ರಣ ನೀಡಿದ್ದಾರೆ.

ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರನ್ನು ಹರ್ಷಿಕಾ ಮತ್ತು ಭುವನ್ ಆಮಂತ್ರಿಸಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

ಸಿನಿಮಾ ರಂಗಕ್ಕೂ-ರಾಜಕೀಯಕ್ಕೂ ನಂಟಿದೆ. ಹೀಗಾಗಿ  ಹರ್ಷಿಕಾ-ಭುವನ್ ಅವರು ಸಿಎಂ ಸಿದ್ದಾರಾಮಯ್ಯ ಹಾಗೂ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ  ಮತ್ತು ಬಿಎಸ್ ಯಡಿಯೂರಪ್ಪ ಅವರನ್ನು ಮದುವೆಗೆ ಆಮಂತ್ರಿಸಿದ್ದಾರೆ.

ರಮೇಶ್ ಅರವಿಂದ್ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಹರ್ಷಿಕಾ ಅವರು ಮದುವೆ ಆಮಂತ್ರಣ ನೀಡಿದ್ದಾರೆ.

ಗಣೇಶ್ ಅವರಿಗೂ ಮದುವೆ ಆಮಂತ್ರಣ ಹೋಗಿದೆ. ಗಣೇಶ್ ನಿವಾಸಕ್ಕೆ ತೆರಳಿ ಹರ್ಷಿಕಾ-ಭುವನ್ ಆಮಂತ್ರಣ ನೀಡಿದ್ದಾರೆ.

ದೊಡ್ಡಣ್ಣ ಅವರಿಗೆ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮದುವೆ ಕರೆಯೋಲೆ ನೀಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಸುಧಾರಾಣಿ ಅವರು ಹರ್ಷಿಕಾ-ಭುವನ್ ಜೊತೆ ಪೋಸ್ ಕೊಟ್ಟಿದ್ದಾರೆ.