ಹುಬ್ಬಳ್ಳಿ : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ ಡೌನ ಜಾರಿಯಲ್ಲಿದೆ ಆದ್ರೂ ಸಾರ್ವಜನಿಕರು ಅನವಶ್ಯಕವಾಗಿ ಮನೆಯಿಂದ ಹೊರಗಡೆ ಸಂಚರಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಇದ್ದರು ಜನರಿಗೆ ಅದು ನಾಮಕೆವಾಸ್ತೆ ಆಗಿದೆ.
ನಗರದ ಕಿತ್ತೂರು ಚನ್ನಮ್ಮ ಸರ್ಕಲ್ ನಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಕುಟುಂಬ ಸದಸ್ಯರು ಯಾರೊಬ್ಬರು ಮಾಸ್ಕ ಹಾಕಿಕೊಂಡಿರಲಿಲ್ಲ.ಅಷ್ಟೇಯಲ್ಲ ನಾವು ಯಾರು ದಂಡ ಕಟ್ಟೊದಿಲ್ಲ ಅಂತ ಪೋಲಿಸರ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ನಮ್ಮ ಹತ್ತಿರ ದಂಡ ಕಟ್ಟಲು ಹಣವಿಲ್ಲ, ನೀವೆ ಹಣ ಕೊಡಿ ಅಂತ ಪೋಲಿಸರಿಗೆ ಹೇಳಿದರು..
ಕಾರಿನಲ್ಲಿ ಕುಳಿತವರು ಯಾರೊಬ್ಬರು ಮಾಸ್ಕ ಹಾಕಿಕೊಳ್ಳದನ್ನ ಗಮನಿಸಿದ ಪೊಲಿಸರು ಸ್ವತ ತಾವೆ ಮಾಸ್ಕ ಕೊಟ್ಟರು, ಕಾರಿನಲ್ಲಿ ಕುಳಿತವರು ಮಾತ್ರ ಮಾಸ್ಕ ತೆಗೆದುಕೊಳ್ಳಲಿಲ್ಲ..
ಉದ್ಧಟತನ ತೋರಿದವರು ನಗರದ ತಾಡಪತ್ರಿ ಗಲ್ಲಿ ನಿವಾಸಿಗಳು ಎಂದು ತಿಳಿದು ಬಂದಿದೆ. ನಾವು ಮಾಸ್ಕ ಹಾಕಿಕೊಳ್ಳೊದಿಲ್ಲ, ನೀವು ಕೊರೊನಾ ಟೆಸ್ಟ್ ಮಾಡಿಸಿರುವ ರಿಪೋರ್ಟ್ ನ್ನು ನಮಗೆ ತೊರಿಸಿ ಅಂತ ಪೋಲಿಸರ ಜೊತೆ ವಾಗ್ವಾದಕ್ಕೆ ಇಳಿದರು. ಪೊಲಿಸರು ತಮ್ಮ ನೆಗೆಟಿವ್ ವರದಿ ತೋರಿಸಿದ ನಂತರ ದಂಡವನ್ನು ಕಟ್ಟಿದರು..
ಚೆನ್ನಮ್ಮ ಸರ್ಕಲನಲ್ಲಿ ಅರ್ಧ ಘಂಟೆಗೂ ಹೆಚ್ಚು ಸಮಯವಿದ್ದರು ಕಾರಿನಲ್ಲಿ ಇದ್ದವರು ಮಾತ್ರ ಯಾರು ಮಾಸ್ಕ ಹಾಕಿಕೊಳ್ಳಲಿಲ್ಲ. ಪ್ರಜ್ಞಾವಂತ ನಾಗರಿಕರೆ ಈ ರೀತಿ ವರ್ತಿಸಿದ್ರೆ, ನಾವು ಹೇಗೆ ಕರ್ತವ್ಯ ನಿರ್ವಹಿಸಬೇಕು ಅಂತಾರೆ ಪೊಲಿಸರು..