25.1 C
Hubli
Saturday, May 28, 2022
HomeBanking & Financeಸುಕೋ ಬ್ಯಾಂಕಿನಿ0ದ ಸಾಲ ಉತ್ಸವ : ಶೇ. 9 ಬಡ್ಡಿ ದರದಲ್ಲಿ ಒಂದೇ ದಿನದಲ್ಲಿ ಸಾಲ...

ಸುಕೋ ಬ್ಯಾಂಕಿನಿ0ದ ಸಾಲ ಉತ್ಸವ : ಶೇ. 9 ಬಡ್ಡಿ ದರದಲ್ಲಿ ಒಂದೇ ದಿನದಲ್ಲಿ ಸಾಲ ಮಂಜೂರು -ಮೋಹಿತ ಮಸ್ಕಿ

spot_img

ಬಳ್ಳಾರಿ: ರಾಜ್ಯದ ಪ್ರಮುಖ ಸಹಕಾರಿ ಬ್ಯಾಂಕ್ ಆಗಿರುವ ಸುಕೋ ಬ್ಯಾಂಕ್ ಫೆಬ್ರವರಿ 7ರ ಸೋಮವಾರದ
ರಥ ಸಪ್ತಮಿ ದಿನದಿಂದ ಶೇ. 9 ರಿಂದ ಶೇ. 10ರ ಬಡ್ಡಿ ದರದಲ್ಲಿ ಸಾಲಗಳನ್ನು ನೀಡಲು `ಸಾಲ ಉತ್ಸವ’ವನ್ನು ಆರಂಭಿಸಿದೆ. ಈ ಸಾಲ ಉತ್ಸವವು ಫೆಬ್ರವರಿ 28 ರವರೆಗೆ ಜಾರಿಯಲ್ಲಿರುತ್ತದೆ.

ಕೋವಿಡ್ ಕಾರಣದಿಂದ ವ್ಯಾಪಾರ ವಹಿವಾಟುಗಳಿಗೆ ಹಿನ್ನಡೆಯಾಗಿದೆ. ಆರ್ಥಿಕ ಚಟುವಟಿಕೆಗಳು ಕುಂಠಿತಗೊ0ಡಿವೆ ಎಂದು ಕೊಳ್ಳುತ್ತಿರುವಾಗಲೇ ಜನೆವರಿ ತಿಂಗಳ ಜಿಎಸ್‌ಟಿ 1.4 ಕೋಟಿ ರೂಪಾಯಿಯಷ್ಟು ಸಂಗ್ರಹವಾಗಿದೆ. ಈ ಮೊತ್ತವು ಇದುವರೆಗಿನ ದೇಶದ ಜಿಎಸ್‌ಟಿ ಸಂಗ್ರಹದ ಅತಿ ದೊಡ್ಡ ಸಂಗ್ರಹವಾಗಿದೆ. ಇದೇ ಸಮಯದಲ್ಲಿ ಕರೋನಾ 3 ನೇ ಅಲೆ ಬಹಳ ಬೇಗನೇ, ಯಾವುದೇ ಹೆಚ್ಚಿನ ಪರಿಣಾಮ ಬೀರದೆ ಕಡಿಮೆಯಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಸಹಕಾರಿ ಬ್ಯಾಂಕ್ ಆಗಿರುವ ಸುಕೋ ಬ್ಯಾಂಕ್ ತನ್ನ ಗ್ರಾಹಕರಲ್ಲಿ ಮತ್ತು ಉದ್ದಿಮೆದಾರರಲ್ಲಿ ವ್ಯಾಪಾರ ವಹಿವಾಟು ಹೆಚ್ಚಿಸುವ ವಿಶ್ವಾಸ ತುಂಬಲು ಸಾಲ ಉತ್ಸವ ಆಚರಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಮೋಹಿತ ಮಸ್ಕಿ ಅವರು ತಿಳಿಸಿದ್ದಾರೆ.

ಅತಿ ಕನಿಷ್ಟ ಶೇ. 9%ರ ಬಡ್ಡಿದರ

ಈ ಸಾಲ ಮೇಳದ ಸಮಯದಲ್ಲಿ ಸಾಲ ಪಡೆಯುವವರಿಗೆ ಅತಿ ಕನಿಷ್ಟ ಶೇ. 9% ರ ಬಡ್ಡಿ ದರದಿಂದ ಸಾಲ ಮಂಜೂರಾತಿ ಮಾಡಲಾಗುತ್ತದೆ. ಮತ್ತು ಸಾಲಗಳನ್ನು ಅದೇ ದಿನ ಮಂಜೂರಾತಿ ಮಾಡಲಾಗುತ್ತದೆ.

ಸಣ್ಣ ವ್ಯಾಪಾರಿಗಳಿಗಾಗಿ ಸಾಲ, ಜಿಎಸ್‌ಟಿ ಸಾಲ, ಯಂತ್ರೋಪಕರಣಗಳ ಖರೀದಿಗಾಗಿ ಸಾಲ, ನಿವೇಶನ ಖರೀದಿ ಮತ್ತು ಗೃಹ ನಿರ್ಮಾಣ ಸಾಲ, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲಿನ ಸಾಲಗಳು ಸೇರಿದಂತೆ ಇನ್ನೂ ಹಲವು ಸಾಲ ಸೌಲಭ್ಯಗಳು ಈ ಸಾಲ ಮೇಳ ಸಮಯದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಲಭ್ಯ ಇವೆ .

ಈ ಎಲ್ಲಾ ಸಾಲ ಸೌಲಭ್ಯಗಳ ಮಂಜೂರಾತಿ ಒಂದೇ ದಿನದಲ್ಲಿ ಮಾಡಲಾಗುತ್ತದೆ ಎಂದು ಸುಕೋ ಬ್ಯಾಂಕಿನ ಅಧ್ಯಕ್ಷ ಮೋಹಿತ ಮಸ್ಕಿ ಅವರು ತಿಳಿಸಿದ್ದಾರೆ.

ಆಸಕ್ತರು ಸುಕೋ ಬ್ಯಾಂಕಿನ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ 1800 121 5560 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ www.sucobank.com ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳುವ ಮೂಲಕ ಅಥವಾ ಸುಕೋ ಬ್ಯಾಂಕಿನ ಫೇಸ್ ಬುಕ್ ಖಾತೆಗೆ ಭೇಟಿ ನೀಡುವ ಮೂಲಕ ಹಚ್ಚಿನ ಮಾಹಿತಿ ಪಡೆಯಬಹುದು ಮತ್ತು ಅಲ್ಲಿಯೇ ಆನ್ ಲೈನ್ ಅರ್ಜಿಯನ್ನು ಭರ್ತಿ ಮಾಡಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

The Hubli Express is on WhatsApp now, you can join the WhatsApp group by clicking the link 

https://chat.whatsapp.com/C6J8Tg5qnmn3zSkcEKOtAd

You can follow us on Facebook @HubliExpress

 

 

spot_img

ACB nabs notorious duo who conned more than 40 government employees, officials across the state

Hubballi: Anti-Corruption Bureau special team officials nabbed two men who used to dupe government employees and officials by claiming to be from the Anti-Corruption...

Mayoral Election: The BJP gains support of two more independent councillors

Hubballi: On the eve of the mayoral election for HDMC, the Bharatiya Janata Party got the support of two independent candidates. Kishan Belagavi, and Chandrika...

LEAVE A REPLY

Please enter your comment!
Please enter your name here

This is the title of the web page
This is the title of the web page