Technology News

ಸುಕೋ ಬ್ಯಾಂಕ್ ; ಬ್ಯಾಟರಿ ರೀ-ಲೈಫ್ ಘಟಕ ಪ್ರಾರಂಭ

WhatsApp Group Join Now
Telegram Group Join Now

 

ಬಳ್ಳಾರಿ: ವಿಶ್ವದಲ್ಲೇ ವಿಶೇಷವಾಗಿರುವ ಬ್ಯಾಟರಿ ಪುನಃಶ್ಚೇತನದ ಪರಿಸರ ಸ್ನೇಹಿ ತಂತ್ರಜ್ಞಾನದ `ರೀ-ಲೈಫ್’ ಘಟಕವನ್ನು ಸುಕೋ ಬ್ಯಾಂಕ್‌ನ ಆರ್ಥಿಕ ನೆರವಿನೊಂದಿಗೆ ಬಳ್ಳಾರಿಯಲ್ಲಿ ಶನಿವಾರ ಪ್ರಾರಂಭಿಸಲಾಗುತ್ತಿದೆ ಎಂದು ಸುಕೋ ಬ್ಯಾಂಕ್‌ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ತಿಳಿಸಿದ್ದಾರೆ.

ವಿಧಾನಪರಿಷತ್‌ನ ಮಾಜಿ ಸದಸ್ಯರು, ಸುಕೋ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರೂ ಆಗಿರುವ ಮನೋಹರ ಮಸ್ಕಿ ಅವರು `ರೀ-ಲೈಫ್’ ಘಟಕವನ್ನು ಜುಲೈ 24ರ ಶನಿವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ನ ಕಾರ್ಯದರ್ಶಿ ಯಶವಂತ್ ಅವರು ಮುಖ್ಯ ಅತಿಥಿಗಳಾಗಿದ್ದಾರೆ.

ಬ್ಯಾಟರಿ ಪುನಃಶ್ಚೇತನ ತಂತ್ರಜ್ಞಾನದ ವಿಶೇಷತೆ ಏನು?

ವೆಟ್ ಅಂಡ್ ಡ್ರೈ ರೀಚಾರ್ಜ್ ಬ್ಯಾಟರಿಗಳನ್ನು ಬಳಕೆಯ ನಂತರ ನಿರುಪಯುಕ್ತಗೊಳಿಸುವುದು ಸಹಜ. ಅಂಥಹ ನಿರುಪಯುಕ್ತ ಬ್ಯಾಟರಿಗಳನ್ನು ಪುನಃಶ್ಚೇತನಗೊಳಿಸಿ ಪುನರ್ ಬಳಕೆ ಮಾಡುವ ವಿಶೇಷವಾದ ತಂತ್ರಜ್ಞಾನ ಇದು. ಬೆಂಗಳೂರು ಮೂಲದ ಯು. ಚಂದ್ರಮೋಹನ್ ಅವರು ಬಿ.ಟೆಕ್ ಓದಿದ ನಂತರ ಆಸ್ಟ್ರೇಲಿಯಾದಲ್ಲಿ ಎಂಎಸ್ ಅಧ್ಯಯನ ನಡೆಸಿ, ನಿರುಪಯುಕ್ತ ಬ್ಯಾಟರಿಗಳ ಪುನರ್ ಬಳಕೆ ಕುರಿತು ಸಂಶೋಧನೆ ನಡೆಸಿ, ವಿಶೇಷವಾದ ರಾಸಾಯನಿಕವನ್ನು ಸಿದ್ಧಪಡಿಸಿದ್ದಾರೆ. ಈ ರಸಾಯನಿಕಕ್ಕೆ ಚೆನೈನ ಐಐಟಿಯಿಂದ ಅನುಮೋದನೆ ಪಡೆದು, ಪೇಟೆಂಟ್ ಪಡೆಯಲಾಗಿದೆ.

ಈ ತಂತ್ರಜ್ಞಾನದ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗಿ ಹೊಸ ಉದ್ಯೋಗ ಸೃಷ್ಟಿಯ ಅವಕಾಶಗಳು ಹೆಚ್ಚಾಗಲಿವೆ. ಎಲೆಕ್ಟ್ರಿಕಲ್ ವಾಹನಗಳ ಬಳಕೆಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ತಂತ್ರಜ್ಞಾನ ಯಶಸ್ವಿಯಾಗಿ ಉದ್ಯೋಗ ಕೈಗೊಂಡವರಿಗೆ ಉತ್ತಮ ಆರ್ಥಿಕ ಸಂಪನ್ಮೂಲಗಳನ್ನು ತರಲಿದೆ.

ಈ ನಿಟ್ಟಿನಲ್ಲಿ ಈ ಸಂಶೋಧನೆಯ ಮಹತ್ವವನ್ನು ತಿಳಿದ ಸುಕೋ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ ಮನೋಹರ್ ಮಸ್ಕಿ ಅವರು ಯುವಶಕ್ತಿಗೆ ಉದ್ಯೋಗ ಮತ್ತು ಸ್ವಾವಲಂಬನೆಯ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಯು. ಚಂದ್ರಮೋಹನ್ ಅವರ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಆಸಕ್ತರಿಗೆ ಸುಕೋ ಬ್ಯಾಂಕ್ ಸ್ವ ಉದ್ಯೋಗ ಯೋಜನೆ ಅಡಿಯಲ್ಲಿ ಸಾಲದ ನೆರವು ನೀಡಲಿದೆ.

ಸಾಲ ಸೌಲಭ್ಯ:-

ಈ ಘಟಕ ಪ್ರಾರಂಭಕ್ಕೆ 6 ಲಕ್ಷ ರೂಪಾಯಿ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಂಎಸ್‌ಎAಇ ಯೋಜನೆಯ ಸಬ್ಸಿಡಿ ಅಡಿಯಲ್ಲಿ ಈ ತಂತ್ರಜ್ಞಾನ ಗುರುತಿಸಿಕೊಂಡಿದ್ದು, ಸುಕೋ ಬ್ಯಾಂಕ್ ಗರಿಷ್ಟ 5 ಲಕ್ಷ ರೂಪಾಯಿವರೆಗೆ ಸಾಲದ ನೆರವು ನೀಡಲಿದೆ. ಆಸಕ್ತರು ಬ್ಯಾಂಕ್‌ನ ಅಧಿಕಾರಿಗಳನ್ನು ಬ್ಯಾಂಕ್‌ನ ವ್ಯವಹಾರದ ಸಮಯದಲ್ಲಿ ಭೇಟಿ ಮಾಡಿ, ಮಾಹಿತಿ ಪಡೆಯಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ವಾಟ್ಸ್ಯಾಪ್ ಸಂಖ್ಯೆ : 8197944402 ಗೆ ಮಾಹಿತಿ ಸಲ್ಲಿಸಲು ಕೋರಲಾಗಿದೆ.

WhatsApp Group Join Now
Telegram Group Join Now

Related Posts

1 of 9
error: Content is protected !!