spot_img
spot_img
28 C
Hubli
Thursday, December 1, 2022
HomeKannadaಸುಚಿರಾಯು ಅಸ್ಪತ್ರೆಗೆ ಪ್ರತಿಷ್ಠಿತ ಎನ್‌ ಎ ಬಿ ಎಚ್‌ ಪ್ರಮಾಣ ಪತ್ರ

ಸುಚಿರಾಯು ಅಸ್ಪತ್ರೆಗೆ ಪ್ರತಿಷ್ಠಿತ ಎನ್‌ ಎ ಬಿ ಎಚ್‌ ಪ್ರಮಾಣ ಪತ್ರ

ಹುಬ್ಬಳ್ಳಿ: ರೋಗಿಗಳ ಸುರಕ್ಷತೆ, ಆಸ್ಪತ್ರೆಯ ಅತ್ಯುತ್ತಮ ಗುಣಮಟ್ಟದ ಸೌಲಭ್ಯದಲ್ಲಿ ಎನ್‌ಎಬಿಎಚ್(ನ್ಯಾಷನಲ್ ಅಕ್ರಿಡೇಷನ್ ಬೋರ್ಡ್ ಫಾರ್ ಹಾಸ್ಪೀಟಲ್‌ ಆ್ಯಂಡ್ ಹೆಲ್ತ್‌ಕೇರ್ ಪ್ರೊವೆಡರ್ಸ್)ನ ಅಂತಿಮ ಘಟ್ಟದ ಮಾನ್ಯತಾ ಪ್ರಮಾಣ ಪತ್ರ ಪಡೆದ ಉತ್ತರ ಕರ್ನಾಟಕದ ಪ್ರಥಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಇಲ್ಲಿಯ ಸುಚಿರಾಯು ಆಸ್ಪತ್ರೆ ಪಾತ್ರವಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡ ಸುಚಿರಾಯು ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮೆದುಳು ಮತ್ತು ನರರೋಗ ತಜ್ಞ ಡಾ. ರಾಜೇಂದ್ರ. ಐ. ದುಗ್ಗಾಣಿ, ಆಸ್ಪತ್ರೆಯ ಉತ್ಕೃಷ್ಟ ಸೌಲಭ್ಯಗಳ ಕುರಿತು 3 ಮೂರು ವರ್ಷಗಳ ಕಾಲ ನಿರಂತರ ಅಧ್ಯಯನ ಮತ್ತು ಆಸ್ಪತ್ರೆಗೆ ಸತತ 12 ಬಾರಿ ಭೇಟಿ ನೀಡಿ ಇಲ್ಲಿಯ ಸೌಲಭ್ಯಗಳ ಕುರಿತು ಪರಿಶೋಧನೆ ನಡೆಸಿ ಸುಚಿರಾಯು ಆಸ್ಪತ್ರೆಗೆ ಅಂತಿಮ ಘಟ್ಟದ ಮಾನ್ಯತಾ ಪ್ರಮಾಣವನ್ನು ಎನ್‌ಎಬಿಎಚ್ ನೀಡಿದೆ. ಈ ಮೂಲಕ ಡಬ್ಲೂಎಚ್‌ಓ ಮಾರ್ಗಸೂಚಿ ಅನ್ವಯ ಗುಣಮಟ್ಟವನ್ನು ಕಾಯ್ದುಕೊಂಡು ರೋಗಿಗಳ ಬಗ್ಗೆ ಕಾಳಜಿ ವಹಿಸುವ ರಾಜ್ಯದ 70ನೇ ಆಸ್ಪತ್ರೆ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

WhatsApp Image 2021 10 11 at 20.45.161

ಆಸ್ಪತ್ರೆಯ ಉತ್ಕೃಷ್ಟ ಸೌಲಭ್ಯಗಳ ಕುರಿತು 3 ಮೂರು ವರ್ಷಗಳ ಕಾಲ ನಿರಂತರ ಅಧ್ಯಯನ ಮತ್ತು ಆಸ್ಪತ್ರೆಗೆ ಸತತ 12 ಬಾರಿ ಭೇಟಿ ನೀಡಿ ಇಲ್ಲಿಯ ಸೌಲಭ್ಯಗಳ ಕುರಿತು ಪರಿಶೋಧನೆ ನಡೆಸಿ ಸುಚಿರಾಯು ಆಸ್ಪತ್ರೆಗೆ ಅಂತಿಮ ಘಟ್ಟದ ಮಾನ್ಯತಾ ಪ್ರಮಾಣವನ್ನು ಎನ್‌ಎಬಿಎಚ್ ನೀಡಿದೆ.
ಡಾ. ರಾಜೇಂದ್ರ, ಐ. ದುಗ್ಗಾಣಿ

ಎನ್‌ಎಬಿಎಚ್ ಎಂಟ್ರಿ, ಮಿಡ್ ಹಾಗೂ ಪೈನಲ್ ಎಂಬ ಮೂರು ಹಂತದಲ್ಲಿ ಪ್ರಮಾಣ ಪತ್ರವನ್ನು ನೀಡುತ್ತದೆ. ಆಸ್ಪತ್ರೆಯ ಬೆಡ್ ಸೌಲಭ್ಯ, ಗುಣಮಟ್ಟದ ಔಷಧಿ, ರೋಗಿಗಳ ಹೆಲ್ತ್‌ಕೇರ್, ಆಸ್ಪತ್ರೆಯಲ್ಲಿ ಇತರೆ ಸೌಲಭ್ಯಗಳನ್ನು ಇದರಲ್ಲಿ ಪರಿಗಣಿಸಲಾಗುತ್ತದೆ. ಈ ಎಲ್ಲ ಸೌಲಭ್ಯಗಳಲ್ಲಿಯೂ ಗುಣಮಟ್ಟದ ಕಾಯ್ದುಕೊಂಡ ಆಸ್ಪತ್ರೆ ಎಂದು ಪರಿಗಣಿಸಿ ಈ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಸುಚಿರಾಯು ಆಸ್ಪತ್ರೆಯು ಪ್ರಥಮ ಪ್ರಯತ್ನದಲ್ಲಿಯೇ ಅಂತಿಮ ಘಟ್ಟದ(ಪೈನಲ್) ಮಾನ್ಯತಾ ಪ್ರಮಾಣ ಪತ್ರ ಪಡೆದುಕೊಂಡಿದೆ ಎಂದರು.
ಪ್ರತಿ ತಿಂಗಳು ಅಥವಾ ಮೂರು ತಿಂಗಳೊಳಗಾಗಿ ಎನ್‌ಎಬಿಎಚ್ ಆಸ್ಪತ್ರೆಯ ಸೌಲಭ್ಯಗಳ ಪರಿಶೋಧನೆ ನಡೆಸುತ್ತದೆ. ಒಂದು ವೇಳೆ ಈ ಪರಿಶೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಅಂಶಗಳು ಕಂಡುಬಂದರೆ ಮಾನ್ಯತೆಯನ್ನು ರದ್ದುಗೊಳಿಸುತ್ತದೆ. ಆದರೆ, ಸುಚಿರಾಯು ಆಸ್ಪತ್ರೆಯಲ್ಲಿ ಈಗಿರುವ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಇದುವರೆಗೂ ರಾಜೀ ಮಾಡಿಕೊಂಡಿಲ್ಲ. ರೋಗಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಅಲ್ಲದೇ, ಸರಕಾರ ಮತ್ತು ಡಬ್ಲೂಎಚ್‌ಒ ನೀಡುವ ನಿಯಮಾನುಸಾರ ಮತ್ತಷ್ಟು ಗುಣಮಟ್ಟವನ್ನು ಹೆಚ್ಚಿಸುತ್ತಾ ಸಾಗಿದೆ ಎಂದರು.
ಎನ್‌ಎಬಿಎಚ್ ಮಾನ್ಯತಾ ಪತ್ರ ಹೊಂದಿದ್ದರಿಂದ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ನಡೆಸಲು ಸುಲಭವಾದಂತಾಗಿದೆ. ಅಲ್ಲದೇ, ಆರ್ಮಿ, ಸಿಆರ್‌ಪಿಎ್, ಬಿಎಸ್‌ಎ್ ಸೇರಿದಂತೆ ದೇಶದ ರಕ್ಷಣಾ ಸಿಬ್ಬಂದಿಯು ಈ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳೊಂದಿಗೆ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗಲಿದೆ. ಈ ಮಾನ್ಯತಾ ಪತ್ರ ದೊರೆತಿರುವುದು ಆಸ್ಪತ್ರೆಯ ಬಲ ಹೆಚ್ಚಿಸಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here

This is the title of the web page
This is the title of the web page