spot_img
spot_img
21 C
Hubli
Friday, October 7, 2022
HomeStateವಾ.ಕ.ರ.ಸಾ. ಸಿಬ್ಬಂದಿಗಳ ವಗಾ೯ವಣೆ: ಪದೇ ಪದೇ ಅರ್ಜಿಗಳನ್ನು ಸಲ್ಲಿಸಿದಂತೆ ಗುರುದತ್ತ ಹೆಗಡೆ ಮನವಿ

ವಾ.ಕ.ರ.ಸಾ. ಸಿಬ್ಬಂದಿಗಳ ವಗಾ೯ವಣೆ: ಪದೇ ಪದೇ ಅರ್ಜಿಗಳನ್ನು ಸಲ್ಲಿಸಿದಂತೆ ಗುರುದತ್ತ ಹೆಗಡೆ ಮನವಿ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇತ್ತೀಚಿನ ದಿನಗಳಲ್ಲಿ ಚಾಲನಾ ಸಿಬ್ಬಂದಿಗಳ ಕೋರಿಕೆ ವರ್ಗಾವಣೆಗಳನ್ನು ಕಾರಣಾಂತರಗಳಿಂದ ಮಾಡಲಾಗಿರಲಿಲ್ಲ. ಪ್ರಸ್ತುತ ಕಾರ್ಮಿಕರ ಬಹು ದಿನಗಳ ಕೋರಿಕೆಯಂತೆ ವರ್ಗಾವಣೆಗಳನ್ನು ಪರಿಗಣಿಸುವುದು ಸೂಕ್ತ ಎಂದು ನಿರ್ಣಯಿಸಿ, ಅರ್ಹ ಚಾಲನಾ ಸಿಬ್ಬಂದಿಗಳ ಮತ್ತು ಸಂಚಾರ ಶಾಖೆಯ 195 ಸಿಬ್ಬಂದಿಗಳ ಕೋರಿಕೆಗಳನ್ನು ಪರಿಗಣಿಸಿ ಸಂಸ್ಥೆಯ ವರ್ಗಾವಣೆಯ ಮಾರ್ಗಸೂಚಿಗಳನ್ವಯ ಪಾರದರ್ಶಕವಾಗಿ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ.

ವರ್ಗಾವಣೆಗೆ ಅರ್ಹರಿರುವ ಸಿಬ್ಬಂದಿಗಳ ಕೋರಿಕೆ, ಪತಿ/ಪತ್ನಿ ಪ್ರಕರಣ ಹಾಗೂ ಪರಸ್ಪರ ಕೋರಿಕೆ, ವಿಧವೆ/ವಿಧುರ ಪ್ರಕರಣಗಳನ್ನು ವರ್ಗಾವಣೆಗೆ ಪರಿಗಣಿಸಲಾಗಿದೆ. ಸಾಮಾನ್ಯ ಕೋರಿಕೆ ಅರ್ಜಿಗಳಲ್ಲಿ ಉತ್ತರ ಕನ್ನಡ ವಿಭಾಗದಲ್ಲಿ ಅತೀ ಹೆಚ್ಚಿನ ಚಾಲನಾ ಸಿಬ್ಬಂದಿಗಳ ಕೊರತೆ ಇರುವುದರಿಂದ, ಸದರಿ ವಿಭಾಗದಿಂದ ಬೇರೆ ವಿಭಾಗಗಳಿಗೆ ವರ್ಗಾವಣೆ ಕೋರಿದ ಸಿಬ್ಬಂದಿಗಳ ಕೋರಿಕೆಗಳನ್ನು ಹಾಗೂ ಬಾಗಲಕೋಟೆ ವಿಭಾಗದಲ್ಲಿ ಪ್ರಸ್ತುತ ಚಾಲನಾ ಸಿಬ್ಬಂದಿಗಳ ಅವಶ್ಯಕತೆ ಇಲ್ಲದಿರುವುದರಿಂದ ಬಾಗಲಕೋಟೆ ವಿಭಾಗಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ ಸಿಬ್ಬಂದಿಗಳ ಅರ್ಜಿಗಳನ್ನು ಪರಿಗಣಿಸಿರುವುದಿಲ್ಲ.

ಇನ್ನುಳಿದ ವಿಭಾಗಗಳಿಂದ ಬೇರೆ ವಿಭಾಗಗಳಿಗೆ ವರ್ಗಾವಣೆ ಕೋರಿ ಕೇಂದ್ರ ಕಛೇರಿಯಲ್ಲಿ ಸ್ವೀಕೃತಿಯಾದ ಅರ್ಹರಿರುವ 195 ಸಂಚಾರ ಮತ್ತು ಚಾಲನಾ ಸಿಬ್ಬಂದಿಗಳ ವರ್ಗಾವಣೆಗಳನ್ನು ಪರಿಗಣಿಸಿ ದಿನಾಂಕಃ 08-11-2021 ರಂದು ಆದೇಶಗಳನ್ನು ಹೊರಡಿಸಲಾಗಿದೆ. ಮೇಲೆ ತಿಳಿಸಿದ ಕಾರಣಗಳಿಂದ ಕೋರಿಕೆ ವರ್ಗಾವಣೆಗೆ ಪರಿಗಣಿಸದಿರುವ ಸಿಬ್ಬಂದಿಗಳ ವರ್ಗಾವಣೆ ಕೋರಿಕೆಗಳನ್ನು ಮುಂಬರುವ ದಿನಗಳಲ್ಲಿ ಚಾಲನಾ ಸಿಬ್ಬಂದಿಗಳ ಸ್ಥಿತಿಗತಿಗಳನ್ನು ಪರಿಗಣಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಆದ್ದರಿಂದ ಸಿಬ್ಬಂದಿಗಳು ಪ್ರಸ್ತುತ ವರ್ಗಾವಣೆಗಾಗಿ ಪದೇ ಪದೇ ಅರ್ಜಿಗಳನ್ನು ಸಲ್ಲಿಸದಿರುವಂತೆ ಮತ್ತು ಮುಂದಿನ ಸಾಮಾನ್ಯ ವರ್ಗಾವಣೆಯ ಅವಧಿಯವರೆಗೆ ಕಾಯಲು ಸೂಚಿಸಿದೆ, ಮತ್ತು ಈ ಕುರಿತಾಗಿ ಸಿಬ್ಬಂದಿಗಳು ಸಹಕರಿಸಬೇಕೆಂದು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆ,ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

spot_img

Unanimous decision to hike reservation for Scheduled Castes to 17 per cent, Scheduled Tribes to 7 per cent: CM Bommai

Bengaluru, Oct.7:It has been unanimously decided to hike reservation for the Scheduled Castes from 15 per cent to 17 per cent and the Scheduled...

SURYADEVOBHAVA: Sunlight is a ray of hope for “Vitamin D” deficiency

In the fast-paced life and humdrum of modern life, pretending a lack of time, the current generation is not attending to basic bodily needs...

LEAVE A REPLY

Please enter your comment!
Please enter your name here

This is the title of the web page
This is the title of the web page