ಒಂದೇ ಕುಟುಂಬದ ಆರು ಜನ ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೊರನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ತಂದೆ, ತಾಯಿ, ನಾಲ್ವರು ಮಕ್ಕಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೀಮರಾಯ ಸುರಪುರ(೪೫), ಆತನ ಪತ್ನಿ ಶಾಂತಮ್ಮ (೩೬), ಮಕ್ಕಳಾದ ಸುಮಿತ್ರಾ (೧೨), ಶ್ರೀದೇವಿ (೧೪), ಲಕ್ಷ್ಮಿ(೪), ಶಿವರಾಜ (೯) ಮೃತಪಟ್ಟವರು.
ಸುರಪುರ ಡಿವೈಎಸ್‌ಪಿ ವೆಂಕಟೇಶ ಹೋಗಿಬಂಡಿ ಪತ್ರಿಕೆಯೊಂದಿಗೆ ಮಾತನಾಡಿ ಈ ನತದೃಷ್ಟರು ಸೋಮವಾರ ಬೆಳಿಗ್ಗೆಯೇ ಬಾವಿಯಲ್ಲಿ ಬಿದ್ದಿರಬಹದು, ಮೃತದೇಹಗಳು ಸಂಜೆ ನೀರಿನಲ್ಲಿ ತೇಲಾಡುತ್ತಿರುವದನ್ನು ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ಸ್‌ಪೆಕ್ಟರ್ ಚನ್ನಯ್ಯ ಹಿರೇಮಠ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಅಗ್ನಿಶಾಮಕ ಇಲಾಖೆಯ ಸಹಕಾರದೊಂದಿಗೆ ಮೃತದೇಹ ಹೊರತೆಗೆದಿದ್ದಾರೆ. ಸಾಲಭಾದೆ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಪ್ರಗತಿಯಲ್ಲಿದೆ.