ಮಾಜಿ ಸಚಿವ ಜಗದೀಶ ಶೆಟ್ಟರ್ ಸಚಿವ ಸಂಪುಟ ಸೇರದಿರಲು ತೀಮಾ೯ನಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು ನಾನು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯನಾಗಿರುವದರಿಂದ ಸಚಿವ ಸಂಪುಟ ಸೇರದಿರಲು ತೀಮಾ೯ನಿಸಿದ್ದೇನೆ.
ಹಿಂದೆಯೂ ನಾನು ಸಂಪುಟದಲ್ಲಿ ಮಂತ್ರಿಯಾಗಿದ್ದಾಗ ಯಡಿಯೂರಪ್ಪ ಹಿರಿಯರಿದ್ದರು ಅವರ ಜೊತೆ ಕೆಲಸ ಮಾಡಲು ಅಡ್ಡಿಯಾಗಿರಲಿಲ್ಲ, ಈಗ ನಾನು ಹಿರಿಯ ಹಾಗೂ ಮಾಜಿ ಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಹಾಗೂ ನೈತಿಕತೆಯಿಂದ ಈ ನಿಧಾ೯ರ ಮಾಡಿದ್ದೇನೆ ಎಂದರು.
ಈಗ ಪಕ್ಷ ಬಲಪಡಿಸುವ ಕಾಯ೯ದಲ್ಲಿ ತೊಡಗಿಕೊಳ್ಳಲಿದ್ದೇನೆ, ಇತರರಿಗೂ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಸಂಪುಟ ಸೇರದಿರಲು ನಿಧ೯ರಿಸಿದ್ದೇನೆ ಎಂದು ಶೆಟ್ಟರ್ ಹೇಳಿದರು.