ಚಿಕ್ಕಮಗಳೂರು,14ಮೇ (ಹಿ.ಸ) : ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಒಳಒಪ್ಪಂದ ಮತ್ತು ಪಕ್ಷದ ತತ್ವ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು ತಮ್ಮ ಸೋಲಿಗೆ ಕಾರಣ ಎಂದು ಬಿಜೆಪಿ ನಾಯಕ ಸಿಟಿ ರವಿ (CT Ravi)ಹೇಳಿದರು.
ಚಿಕ್ಕಮಗಳೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರವಿ, ಕಳೆದ ಬಾರಿಗಿಂತ 9,000 ದಷ್ಟು ಹೆಚ್ಚು ಮತ ಪಡೆದಿದ್ದರೂ ಸೋಲುವ ಪ್ರಸಂಗ ಎದುರಾಗಿದೆ, ತನ್ನಿಂದ ತಪ್ಪುಗಳಾಗಿರಬಹುದು ಮತ್ತು ಸಂಘಟನೆ ವಿಷಯದಲ್ಲೂ ಕೊರತೆ ಉಂಟಾಗಿರಬಹುದು, ಎಲ್ಲವನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ ಎಂದರು. ಜನರು ನೀಡಿರುವ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುವುದಾಗಿ ಸಿಟಿ ರವಿ ಹೇಳಿದರು.
The Hubli Express is on WhatsApp now, you can join the WhatsApp group by clicking the link >>>>> https://chat.whatsapp.com/Hrmohnx3bkrEJRIv9kQsyD >>>>>>> You can follow us on Facebook @HubliExpress