ಹುಬ್ಬಳ್ಳಿ: 2021 – 22 ನೇ ಸಾಲಿನ ಉದ್ಯೋಗಾದಾರಿತ ಮತ್ತು ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಕೋರ್ಸ್ ಗಳ ಶೈಕ್ಷಣಿಕ ಪ್ರವೇಶಕ್ಕೆ ಮೈಸೂರಿನ ಸಿಪೆಟ್ ಸಂಸ್ಥೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) 3 ವರ್ಷ ಹಾಗೂ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೋಸೆಸ್ಸಿಂಗ್ & ಟೆಸ್ಟಿಂಗ್ (PGD-PPT) 2 ವರ್ಷದ ಕೋರ್ಸ್ ಗಳಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ (ವಿಜ್ಞಾನ) ಮತ್ತು ಬಿ.ಎಸ್.ಸ್ಸಿ ತೇರ್ಗಡೆಯಾದವರು ಅಥವಾ ಪರೀಕ್ಷೆಗೆ ಹಾಜರಾದವರು ಜುಲೈ 25 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಜುಲೈ 29 ರಂದು ಕಂಪ್ಯೂಟರ್ ಆಧಾರಿತ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ www.cipet.gov.in ಅಥವಾ ದೂರವಾಣಿ 0821-2510618, 9480253024 ಹಾಗೂ 9141075968 ಸಂಪರ್ಕಿಸಬಹುದು ಎಂದು ಸಿಪೆಟ್ ಸಂಸ್ಥೆ ತಿಳಿಸಿದೆ.
https://okok.hubliexpress.com/%e0%b2%85%e0%b2%aa%e0%b3%8d%e0%b2%b0%e0%b3%86%e0%b2%82%e0%b2%9f%e0%b2%bf%e0%b2%b8%e0%b3%8d-%e0%b2%a4%e0%b2%b0%e0%b2%ac%e0%b3%87%e0%b2%a4%e0%b2%bf%e0%b2%97%e0%b2%be%e0%b2%97%e0%b2%bf-%e0%b2%85%e0%b2%b0/