ಧಾರವಾಡ: ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್ ಚುಚ್ಚುಮದ್ದು ನೀಡುವ ಕಾಯ೯ ಮುಂದುವರೆಸಿದ್ದು, ಲಸಿಕಾಕರಣದಲ್ಲಿ ಗಮನಾಹ೯ ಪ್ರಗತಿ ಸಾಧಿಸಲಾಗಿದೆ. ನಿನ್ನೆ (ಭಾನುವಾರ) ಸಂಜೆ ೬.೪೦ ರ ನಂತರ ಒಟ್ಟು೧೬,೧೬೦ ವ್ಯಾಕ್ಸಿನ್‌ಗಳ ದಾಸ್ತಾನಿದ್ದು ಇಂದು ಅವುಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಭಾನುವಾರ ಸಂಜೆ ನೀಡಿರುವ ಪತ್ರಿಕಾ ಹೇಳಿಕೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೪,೯೦೯ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಹಾಗೂ ಒಟ್ಟಾರೆ ಜಿಲ್ಲೆಯಲ್ಲಿ ೩,೮೧,೫೬೫ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ.
ಯಾವ ಯಾವ ಲಸಿಕಾ ಕೇಂದ್ರದಲ್ಲಿ ಯಾವ ಲಸಿಕೆ ಎಷ್ಟು ಪ್ರಮಾಣದಲ್ಲಿದೆ, ಯಾರಿಗೆ ನೀಡಲಾಗುವುದು ಇನ್ನಿತರ ಮಾಹಿತಿ ಒಳಗೊಂಡ ಪ್ರತಿ ಲಗತ್ತಿಸಲಾಗಿದೆ.