ಗದಗ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಲಾಕಡೌನ್ ಜಾರಿಯಲ್ಲಿದ್ದರಿಂದ, ಗದಗ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ದಿನಾಂಕ: ಜೂನ್ 03 ರಂದು ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿರುವ ಕುರ್ತಕೋಟಿ ಕ್ರಾಸ್‌ನಲ್ಲಿ ರಸ್ತೆಕಾವಲು ನಿರ್ವಹಿಸುತ್ತಿರುವಾಗ ಎರಡು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 12.285 ಲೀಟರ್ ಮದ್ಯ ಹಾಗೂ 4.5 ಲೀಟರ್ ಬಿಯರ್ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, (ಅಂದಾಜು ಮೌಲ್ಯ : 136296) ವಾಹನ ಹಾಗೂ ಮದ್ಯ,/ ಬಿಯರ್‌ನ್ನು ಜಪುö್ತಪಡಿಸಿಕೊಂಡು ಎರಡು ಪ್ರತ್ಯೇಕ ಪ್ರಕರಣಗಳನ್ನು ಗದಗ ಉಪ ವಿಭಾಗದ ಅಧಿಕಾರಿಗಳು ದಾಖಲಿಸಿರುತ್ತಾರೆ. ಮಂಜುನಾಥ ಮಾಲಿಪಾಟೀಲ ಅಬಕಾರಿ ಉಪ ಅಧೀಕ್ಷಕರು ಗದಗ ಉಪ ವಿಭಾಗ ರವರು ದಾಳಿಯ ನೇತೃತ್ವ ವಹಿಸಿದ್ದರು. ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ,ಅಬಕಾರಿ ಉಪ ನಿರೀಕ್ಷಕರು ವಾಯ್ ಬಿ ಗಜಾಕೋಶ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ದಾಳಿಯಲ್ಲಿ ಅಬಕಾರಿ ಕಾನ್ಸಟೇಬಲ್ ಗಳಾದ ಚಂದ್ರು ರಾಠೋಡ ಹಾಗೂ ಜಿ ಎಸ್ ವಸ್ತದ ಭಾಗವಹಿಸಿದ್ದರು.