Kannada

ಅಂಧರ ಬಾಳಿಗೆ ಬೆಳಕಾದ ಪೃಥ್ವಿರಾಜ್ ಸಿಂಗ್: ಸಚಿವ ಆನಂದ್ ಸಿಂಗ್ ಅವರಿಗೆ ಪಿತೃವಿಯೋಗ

WhatsApp Group Join Now
Telegram Group Join Now

ಹೊಸಪೇಟೆ (ವಿಜಯನಗರ): ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರ ತಂದೆ ಪೃಥ್ವಿರಾಜ್ ಸಿಂಗ್ (84) ಭಾನುವಾರ ಇಲ್ಲಿನ ರಾಣಿಪೇಟೆಯ ಅವರ ನಿವಾಸದಲ್ಲಿ ನಿಧನ ಹೊಂದಿದರು.ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಮನೆಗೆ ಮರಳಿದ್ದರು. ಭಾನುವಾರ ಪುನಃ ಅವರ ಆರೋಗ್ಯದಲ್ಲಿ ಏರುಪೇರಾಗಿ ಮಧ್ಯಾಹ್ನ 12ಕ್ಕೆ ನಿಧನರಾದರು. ಸಂಜೆ ನಾಲ್ಕು ಗಂಟೆಗೆ ರಾಣಿಪೇಟೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂದವರು ತಿಳಿಸಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲ್ಲೂಕಿನ ಶಂಕರ್ ಸಿಂಗ್ ಕ್ಯಾಂಪಿನ ನಿವಾಸಿಯಾದ ಪೃಥ್ವಿರಾಜ್ ಸಿಂಗ್ ಅವರು ಸಾರಿಗೆ ಉದ್ಯಮ ನಡೆಸುತ್ತಿದ್ದರು. ಮೃತರ ಮೊದಲ ಪತ್ನಿ ಅನೇಕ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಅವರಿಗೆ ಇಬ್ಬರು ಗಂಡು, ಒಬ್ಬ ಹೆಣ್ಣು ಮಗಳಿದ್ದಾರೆ.  ಎರಡನೇ ಪತ್ನಿ ಹಾಗೂ ಅವರ ಮಗ  ಆನಂದ್ ಸಿಂಗ್ ಇದ್ದಾರೆ.

ತಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಅವರು ಎಲ್ಲ ಕೆಲಸ ಬದಿಗೊತ್ತಿ, ಅನೇಕ ದಿನ ಗಳಿಂದ ಕ್ಷೇತ್ರದಿಂದ ದೂರ ಉಳಿದು ಅವರೊಂದಿಗೆ ಆಸ್ಪತ್ರೆಯಲ್ಲಿಯೇ ಇದ್ದರು.

ಪೃಥ್ವಿರಾಜ್ ಸಿಂಗ್ ಅವರು ಅವರ ಎರಡು ಕಣ್ಣು ಗಳನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ.

WhatsApp Group Join Now
Telegram Group Join Now

Related Posts

1 of 7
error: Content is protected !!