ಬೆಂಗಳೂರು: ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಇಂದು ಸಕಾ೯ರಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಭೆ ಪ್ರಾರಂಭಗೊಂಡಿದ್ದು ಸಭೆಯ ತೀಮಾ೯ನಗಳು ಮುಖ್ಯಮಂತ್ರಿಗಳು ಬಹಿರಂಗ ಪಡಿಸಲಿದ್ದಾರೆ.
ಡಾ. ದೇವಿಶೆಟ್ಟಿ ನೇತೃತ್ವದ ೧೬ ಜನರ ತಜ್ಞರು ಸಂಭಾವ್ಯ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ತನ್ನ ವರದಿ ಸಕಾ೯ರಕ್ಕೆ ಸಲ್ಲಿಸಲಿದೆ. ಈ ಸಮಿತಿ ಈಗಾಗಲೇ ೯೨ ಪುಟಗಳ ಮಧ್ಯಂತರ ವರದಿಯನ್ನು ಸಕಾ೯ರಕ್ಕೆ ಸಲ್ಲಿಸಿದೆ.
ಸಂಭಾವ್ಯ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಭಾದಿತರಾಗುವರೆಂದು ಈಗಾಗಲೇ ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಜುಲೈ ನಿಂದ ಪ್ರಾರಂಭಿಸಬೇಕೋ ಅಥವಾ ಮತ್ತೆ ಆನ್‌ಲೈನ್ ತರಗತಿಗಳಲ್ಲಿಯೇ ಮಕ್ಕಳಿಗೆ ಭೋದನೆ ಮುಂದುವರೆಯ ಬೇಕೋ ಅಥವಾ ಯಾವ ರೀತಿಯಲ್ಲಿ ಆಫ್‌ಲೈನ್ ತರಗತಿ ತೆಗೆದುಕೊಳ್ಳಬೇಕು ಎನ್ನುವುದು ಕುತೂಹಲ ಮೂಡಿಸಿದೆ.