Kannada

ರಾಷ್ಟ್ರವೀರ ಶ್ರೀ ಮಹಾರಾಣಾ ಪ್ರತಾಪ್‌ ಸಿಂಹರ ಜಯಂತಿಗೆ ಸಿದ್ದತೆ: ಭಾನುವಾರ ಆಚರಣೆ

WhatsApp Group Join Now
Telegram Group Join Now

ಹುಬ್ಬಳ್ಳಿ: ರವಿವಾರ ( ದಿ.೧೩) ಬೆಳಿಗ್ಗೆ ೯ ಕ್ಕೆ ಶ್ರೀ ಮಹಾರಾಣಾ ಪ್ರತಾಪ್ ಸಿಂಹ ಜಿ ಅವರ ಜನ್ಮಜಯಂತಿ ಕಾರ್ಯಕ್ರಮವನ್ನು ಹುಬ್ಬಳ್ಳಿ ರಾಜಪೂತ ಸಮಾಜದ ವತಿಯಿಂದ ಆಯೋಜಿಸಲಾಗಿದೆ. ಪ್ರತಿವಷ೯ ಅತಿ ಭವ್ಯವಾಗಿ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದ ಜಯಂತಿ ಈ ವಷ೯ ಕೋವಿಡ್‌ ಮಹಾಮಾರಿಯಿಂದಾಗಿ ಕೋವಿಡ್‌ ನಿಯಮಾವಳಿ ಪ್ರಕಾರ ಆಯೋಜಿಸಲು ತೀಮಾ೯ನಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ರಾಷ್ಟ್ರವೀರ ಮಹಾರಾಣಾ ಪ್ರತಾಪ್ ಸಿಂಗ್ ಜಿ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವುದು ಮತ್ತೆ ಹಸಿದವರಿಗಾಗಿ 200 ಫುಡ್(ಪಲಾವ್)ಪಾಕೆಟ್ ಮತ್ತು ಸ್ವೀಟನ್ನು ಸೇವಾ ಕಾರ್ಯವನ್ನು ಆಯೋಜಿಸಲಾಗಿದೆ
ಎಲ್ಲ ರಾಜಪೂತ್ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ
Covid19 ಮಹಾಮಾರಿ ಇದ್ದ ಸಮಯದಲಿ ಎಲ್ಲ ಕಾರ್ಯಕ್ರಮವನ್ನು ನಿಯಮಾವಳಿ ಪ್ರಕಾರ
ಆಯೋಜಿಸಲಾಗಿದೆ ಅದಕ್ಕಾಗಿ ಎಲ್ಲ ಬಂಧುಗಳು ಸಹಕರಿಸಬೇಕೆಂದು ಹುಬ್ಬಳ್ಳಿ ರಾಜಪೂತ್‌ ಸಮಾಜದ ಅಧ್ಯಕ್ಷರು ಶ್ರೀ ಅಶೋಕ್‌ ಸಿಂಗ್‌ ಹಜಾರೆ ತಿಳಿಸಿದ್ದಾರೆ.

ಯುವಕರ ಶ್ರಮದಾನ

ರಾಷ್ಟ್ರವೀರ ಶ್ರೀ ಮಹಾರಾಣಾ ಪ್ರತಾಪ್ ಸಿಂಗ್ ಜಿ ಅವರ ಜನ್ಮ ಜಯಂತಿ ಉತ್ಸವ ಅಂಗವಾಗಿ.
ಹುಬ್ಬಳ್ಳಿ ರಾಜಪೂತ್ ಸಮಾಜ ವತಿಯಿಂದ ಇಂದು ಶ್ರೀ ಮಹಾರಾಣಾ ಪ್ರತಾಪ್ ಸಿಂಗ್ ಜಿ ಅವರ ಮೂರ್ತಿ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಯುವಕರಾದ ಅನಂತಸಿಂಗ್‌ ರಾಜಪೂತ, ಬಲವೀರಸಿಂಗ್‌ ಠಾಕೂರ್‌, ಉಮೇಶಸಿಂಗ್‌ ಅಂಗಡಿ, ಸುರಜೀತ್‌ಸಿಂಗ್‌ ಠಾಕೂರ್‌, ವೆಂಕಟ್‌ಸಿಂಗ್‌ ಜಮಾದಾರ ಮತ್ತಿತರು ಭಾಗವಹಿಸಿ ಶ್ರಮದಾನ ಮಾಡಿದರು.  ಮಹಾರಾಣಾ ಪ್ರತಾಪರ ಮೂತಿ೯ ಸ್ವಚ್ಛಗೊಳಿಸಿ ಸುತ್ತಮುತ್ತಲಿನ ಪರಿಸರವನ್ನು ಅಂದಗೊಳಿಸಿದರು.

 

WhatsApp Group Join Now
Telegram Group Join Now

Related Posts

error: Content is protected !!