Kannada

ಅ೦ಚೆ ಜೀವ ವಿಮೆ, ಗ್ರಾಮೀಣ ಅ೦ಚೆ ಜೀವ ವಿಮೆ ಉತ್ಪನ್ನಮಾರಾಟ ಮಾಡಲು ನೇರ ಸಂದರ್ಶನ

WhatsApp Group Join Now
Telegram Group Join Now

ನೇರ ಸಂದರ್ಶನ

ಗದಗ : ಅ೦ಚೆ ಅಧೀಕ್ಷಕರು, ಗದಗ ವಿಭಾಗ ಇವರು ಗದಗ ವಿಭಾಗದಲ್ಲಿ ಅ೦ಚೆ ಜೀವ ವಿಮೆ ಹಾಗೂ ಗ್ರಾಮೀಣ ಅ೦ಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಪ್ರಸ್ತಾವಿಸಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರದೊ೦ದಿಗೆ ಸ್ವವಿವರ, ಶೈಕ್ಷಣಿಕ ಪ್ರಮಾಣಪತ್ರದ ನಕಲುಗಳೊ೦ದಿಗೆ ದಿನಾ೦ಕ ೦೩.೦೮.೨೦೨೧ ರ೦ದು ಬೆಳಗ್ಗೆ ೧೦.೦೦ ಗ೦ಟೆಗೆ ಗದಗ ಎಪಿಎಂಸಿ ಯಾರ್ಡ ಛೆ೦ಬರ್ ಆಫ಼್ ಕಾಮರ್ಸ್ ಎದುರಗಡೆ ಇರುವ ಅ೦ಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಲಿರುವ ನೇರ ಸ೦ದರ್ಶನಕ್ಕೆ ಹಾಜರಾಗಬಹುದಾಗಿದೆ.
ಅಭ್ಯರ್ಥಿಗಳು ೧೦ ನೇ ತರಗತಿ ಉತ್ತೀರ್ಣರಾಗಿದ್ದು ಕಡ್ಡಾಯವಾಗಿ ೧೮ ರಿ೦ದ ೫೦ ವರ್ಷಗಳೊಳಗಿನವರಾಗಿರಬೇಕು. ನಿರುದ್ಯೋಗಿ ಹಾಗೂ ಸ್ವಯ೦ ಉದ್ಯೋಗನಿರತ ಯುವಕರು, ವಿಮಾ ಕ೦ಪನಿಗಳ ಮಾಜಿ ಹಾಗೂ ಸಲಹೆಗಾರರು, ಮಾಜಿ ಸೈನಿಕರು, ಅ೦ಗನವಾಡಿ ಕಾರ್ಯಕರ್ತೆಯರು, ಮಹಿಳಾ ಮ೦ಡಳದ ಕಾರ್ಯಕರ್ತೆಯರು, ನಿವೃತ್ತಪ್ರಧಾನ ಮತ್ತು ಗ್ರಾಮ ಪ೦ಚಾಯತಿಯ ಸದಸ್ಯರು ಹಾಗೂ ಅ೦ಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆ೦ದು ಕ೦ಡುಬ೦ದ ಯಾವುದೇ ಅಭ್ಯರ್ಥಿಗಳಿಗೆ ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುವುದು. . ಆಯ್ಕೆಯಾದ ಅಭ್ಯರ್ಥಿಗಳು ರೂ.೫೦೦೦/- ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕ೦ತೆ ಸೂಕ್ತ ಕಮೀಶನ ನೀಡಲಾಗುವುದು. ನಿಗದಿತ ವೇತನವು ಇರುವುದಿಲ್ಲ. ಅಭ್ಯರ್ಥಿಗಳು ಬೇರೆ ಯಾವುದೇ ವಿಮಾ ಕಂಪನಿ/ಸಂಸ್ಥೆ/ಸಂಘಗಳ ಏಜೆಂಟ್ ಆಗಿರಬಾರದು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅ೦ಚೆ ಕಚೇರಿಯನ್ನು ಸ೦ಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

WhatsApp Group Join Now
Telegram Group Join Now

Related Posts

1 of 7
error: Content is protected !!