The Hubliexpress is now on WhatsApp you can join the group by clicking the link
https://chat.whatsapp.com/JKJecHdlD3X1Q2qkrpv0YT
Follow us on Facebook @HubliExpress
—————————————————————————————————————————–
ಬೆಂಗಳೂರಿನಲ್ಲಿ ನೆಲೆಸಿರುವ ಅನನ್ಯಸಿಂಗ್ ಅವರ ಕವನಗಳು. ಅನನ್ಯಸಿಂಗ್ ಅವರು ಕಳೆದ ಹಲವಾರು ತಿಂಗಳುಗಳಿಂದ ಕವನಗಳನ್ನು ರಚಿಸುತ್ತಿದ್ದು ಅವರ ಕವನಗಳು ನಮ್ಮ ಓದುಗರಿಗಾಗಿ ಕಳುಹಿಸಿಕೊಟ್ಟಿದ್ದಾರೆ.
ಪ್ಲಾಸ್ಟಿಕ್ ಅಂಡ್ ಪರ್ಸನಾಲಿಟಿ
1)ಮಳೆಯಲಿ ನೆಂದೂ ಸೊರಗದೇ
ಬಿಸಿಲಲಿ ಒಣಗಿ ಬಾಡದೆ
ಮಣ್ಣಲಿ ಕೊಳೆತು ಕಳೆಯದೆ
ಕೊನೆಗೆ ಸುಟ್ಟರೂ ಅಳೆಯದೆ
ತನ್ನ ತನವನು ಎಂದಿಗೂ ಬಿಡದೆ
ಇರುವ ಪ್ಲಾಸ್ಟಿಕ್, ಲೋಕಕ್ಕೆ ಮಾರಕ……
ತನ್ನನ್ನು ತಾನು ಮರೆತು ಹೋಗದೆ
ದುಷ್ಟರ ಸಹವಾಸಕ್ಕೆ ಸಿಲುಕದೆ
ದುಶ್ಚಟಗಳ ಗಣಿಯಾ ಗದೆ
ದುಷ್ಪರಿಣಾಮಗಳಿಗೆ ಬಲಿಯಾಗದೆ
ತನ್ನ ತನವನು ಎಂದಿಗೂ ಬಿಡದೆ
ಇರುವ ಆದರ್ಶ ವ್ಯಕ್ತಿತ್ವ ಲೋಕಕ್ಕೆ, ಹರ್ಷದಾಯಕ…..
ನಿರಾಸೆ…
ನಾ ಬೆಳೆದೆ ಸದಾ ಸಂತಸದ ನನ್ನ ಆದರ್ಶದಿ
ಬಯಸಿದೆ ಸಂಗಾತಿ ನೀನೂ ಆಗಬೇಕೆಂದು ಅದರ ಬುನಾದಿ
ಬಲು ಸೋಜಿಗ ನನಗೆ ಏಕೆ ನೀ ಹಿಂಗಾದಿ
ಅಲ್ಲಲ್ಲಾ…. ನೀ ಇರುವುದೇ ಹೀಗೆಂದು ತಿಳಿದೇ ನಾ ನಿಧಾನಾದಿ…..
ನನ್ನದಲ್ಲ…
ಸಿರಿವಂತ ನನಗ್ಯಾಕೆ, ಗುಣವಂತನೇ ಸಾಕೆ
ಬಡಿತದ ಹಂಗಿಲ್ಲ, ಕುಡಿತದ ಬಂಗಿಲ್ಲ
ಪ್ರೀತಿಯೇ ನಮಗೆಲ್ಲ, ಭಾವದ ಸವಿಬೆಲ್ಲ
ನಂದೆಲ್ಲ ನಿನ್ನದಲ್ಲ, ನೀನ್ಯಾಕೆ ಅರಿತಿಲ್ಲ
ಬಾ ಬೇಗ ನನ್ನ ನಲ್ಲ ನೀನೇ ನನಗೆಲ್ಲಾ….
ಪಾದ ಪದ್ಮ
ಸದ್ಭಕ್ತಿಯ ಭಜನಾ, ಆತ್ಮದಾ ಸಮ್ಮಿಲನ..
ನಿತ್ಯದಾ ಸಂಕಲನ, ಜನ್ಮದಾ ವ್ಯವಕಲನ..
ಪ್ರೇಮದ ಸದ್ಭಾವನಾ,
ವಿಶ್ವದಾ ಪರಂಧಾಮನ..
ಸೇರುವ ಆಚರಣಾ,
ಅದುವೇ ಪಾದ ಪರಮಾತ್ಮನ…
ಮುಮುಕ್ಷು ಹೊಂದುವ ಈ ಸುಲಭ ವಿಧಾನ…
ಮರೆಯದಿರಿ ಮಾನವರೇ ಶರಣು ಹೋಗಿರೀ……
ಶ್ರೀ ಪಾದ ಪದ್ಮನಾಭನಾ
ತಂಗಾಳಿ
ತಂಗಾಳಿ ನೀ ಸುಳಿದೆ ತೋರುತಾ ಸ್ನೇಹ…
ಹಿತವಾಗಿ ಮಿತವಾಗಿ ಬೀರುತಾ ಮೋಹ…
ಮೆಲುವಾಗಿ ತಿಳಿಯದೆ ಬಂದೆ ನೀ ಸನಿಹ…
ನಿನ್ನೊಂದಿಗೆ ತೇಲುತಿಹೆ ಆನಂದದಿ ನಾನೂ ಸಹ…
ನನ್ನೊಳಗೆ ಪ್ರೇಮದಲೆಯನ್ನೇಬ್ಬಿಸು ಬಾ ಪುನಃ ಪುನಃ….
ರಾಖಿ
ರಾಖಿ ಎನಲು ಅರಳುವ ಮನ..
ಹಲವು ನೆನಪು ತರುವುದು ಸೋದರನ..
ಪೋಷಿಸುವ ಅಣ್ಣ –ತಂಗಿಯರ ಆತ್ಮಭಿಮಾನ…
ಪ್ರತಿ ಸ್ತ್ರೀ ಗೂ ಸಿಗಬೇಕು ಈ ಸುಭದ್ರಾ ರಕ್ಷಾ ಬಂಧನ…
ಈ ಪವಿತ್ರ ಸಂಬಂಧವೇ
ನಿಸ್ವಾರ್ಥಕ್ಕೆ ಪರಿಪೂರ್ಣ
ಮಗಳು
ನನ್ನ ದೇಹದೊಂದು ಬೆವರು..
ಮೂಡಿತು ಮೊಳಕೆಯೋಡೆ ದೊಂದುಸಿರು…
ಸ್ವಾಭಿಮಾನದ ನನ್ನದೆಂಬ ನೆರಳು..
ನನ್ನ ಹೆಮ್ಮೆ ಅವಳೇ ನನ್ನ ಮಗಳು….
ಕೆಡುಕಿಲ್ಲ ಅವಳಲ್ಲೊಂದ ರಲು…
ನನ್ನ ಬೆರಳಿಗೆ ವಜ್ರದ ಹರಳು…
ನನ್ನ ಬಾಳಿಗೆ ಗರ್ವ ಅವಳು..
ಸುಶೀಲೇ ಸರಳ ಸ್ವರೂಪ ಸುಂದರಳು…