spot_img
spot_img
20.8 C
Hubli
Saturday, October 8, 2022
HomeHubballi / Dharwadಕೃಷಿ ಯಂತ್ರಗಳ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿ ಅವರಿಗೆ ಪದ್ಮಶ್ರೀ ಸಂದಿರುವುದು ಸಂತಸ ಹಾಗೂ ಹೆಮ್ಮೆಯ...

ಕೃಷಿ ಯಂತ್ರಗಳ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿ ಅವರಿಗೆ ಪದ್ಮಶ್ರೀ ಸಂದಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯ :ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಹುಬ್ಬಳ್ಳಿ: ಬಿತ್ತನೆ ಯಂತ್ರ ನಡಕಟ್ಟಿನ ಕೂರಿಗೆ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿ ಅವರಿಗೆ ಪದ್ಮಶ್ರೀ ಸಂದಿರುವುದು ಸಂತಸದ ವಿಷಯವಾಗಿದೆ. ನವಲಗುಂದ ಮತಕ್ಷೇತ್ರ ವ್ಯಾಪ್ತಿಯ ನಡಕಟ್ಟಿಯವರ ಸಾಧನೆ ಹೆಮ್ಮೆಯ ವಿಷಯವಾಗಿದೆ ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಅಣ್ಣಿಗೇರಿಯ ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಅಬ್ದುಲ್ ಖಾದರ್ ನಡಕಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ನಡಕಟ್ಟಿಯವರ ಕೃಷಿ ಯಂತ್ರಗಳ ಸಂಶೋಧನೆಯ ಹಾದಿ ಕಠಿಣವಾಗಿತ್ತು. ಸಹಾಯಕ್ಕಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಬಳಿ ನೆರವು ಕೇಳುತ್ತಿದ್ದರು. ಹಲವು ವರ್ಷಗಳ ಹಿಂದೆ ಸಹಾಯ ಅರಸಿ ನನ್ನ ಬಳಿಯೂ ಬಂದಿದ್ದರು. ಆ ವೇಳೆಯಲ್ಲಿ ನಿಮ್ಮ ಸಂಶೋಧನೆಯನ್ನು ರೈತರ ನಡುವೆ ಪ್ರಚುರ ಪಡಿಸಿ, ರೈತರು ನಿಮ್ಮ ಯಂತ್ರದಿಂದ ಆದ ಲಾಭವನ್ನು ನೋಡಿ‌ ಪ್ರೋತ್ಸಾಹಿಸುತ್ತಾರೆ. ಶ್ರೇಷ್ಠ ಪ್ರಶಸ್ತಿಗಳು ನಿಮ್ಮನ್ನು ಅರಿಸಿ ಬರುತ್ತೆ ಎಂದು ಹೇಳಿದ್ದೆ. ಭಗವಂತ ಹಾಗೂ ಅಲ್ಲಾನ ದಯೆಯಿಂದ ಆ ಸುದಿನ ಬಂದಿದೆ. ಕೇಂದ್ರ‌ ಸರ್ಕಾರ
ಧರ್ಮ, ಜಾತಿ, ಶಿಫಾರಸ್ಸು ನೋಡದೆ ನಿಜವಾದ ಸಮಾಜ ಸೇವಕರಿಗೆ‌ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಅಬ್ದುಲ್ ಖಾದರ್ ನಡಕಟ್ಟಿ ಮುಂದಿನ ಸಂಶೋಧನೆಗಳು ಜಾಗತಿಕವಾಗಿ ಮನ್ನಣೆಗಳಿಸಲಿ ಎಂದು ಅವರು ಹಾರೈಸಿದರು.

Nadakattin

WhatsApp Image 2022 01 31 at 20.32.57

ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ, ಸಂಶೋಧನೆ, ಅವಿರತ ಶ್ರಮ ಹಾಗೂ ಸಾಮರ್ಥ್ಯ ಇದ್ದವರು ಯಾವುದೇ ಮೂಲೆಯಲ್ಲಿ ಇದ್ದರು ಗುರುತಿಸಲ್ಪಡುತ್ತಾರೆ. ಇದಕ್ಕೆ ಅಬ್ದುಲ್ ಖಾದರ್ ನಡಕಟ್ಟಿ ಉದಾಹರಣೆ. ಕೇಂದ್ರ ಸರ್ಕಾರ ನಡಹಟ್ಟಿ ಅವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. ಗುಣ ಹಾಗೂ ಅರ್ಹತೆಗೆ ಸಂದ ಪ್ರಶಸ್ತಿಯಾಗಿದೆ. ಕೇಂದ್ರ ಸರ್ಕಾರ ಸಮಾಜಮುಖಿಯಾಗಿ ಕೆಲಸ ಮಾಡುವವರನ್ನು ಗುರುತಿಸಿ ಪ್ರಶಸ್ತಿ ಆಯ್ಕೆ ಮಾಡುತ್ತಿದೆ. ಲಾಬಿ ಹಾಗೂ ಶಿಫಾರಸ್ಸು ಇಲ್ಲದೆ ಪ್ರಶಸ್ತಿ ನೀಡಿದೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೃಷಿಕರಿದ್ದಾರೆ. ಕೃಷಿಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಇದಕ್ಕೆ ಪೂರಕವಾಗಿ ನಡಕಟ್ಟಿಯವರು ಕೃಷಿ ಯಂತ್ರಗಳ ಸಂಶೋಧನೆ ಮಾಡಿದ್ದಾರೆ. ಸರ್ಕಾರ ಹಾಗೂ ಕೃಷಿ ಇಲಾಖೆ ನಡಕಟ್ಟಿಯವರಿಗೆ ಬೆಂಬಲವಾಗಿ ನಿಲ್ಲುವುದು. ನಡಕಟ್ಟಿಯವರನ್ನು ಕಳೆದ 20 ವರ್ಷಗಳಿಂದ ನೋಡಿದ್ದೇನೆ. ನಡಕಟ್ಟಿಯವರ ಕೃಷಿ ಸಂಶೋಧನೆ ಕುರಿತು ಸದನದಲ್ಲಿ ಕೂಡ ಮಾತನಾಡಿದ್ದೇನೆ. ನಡಕಟ್ಟಿ ಅವರ ಸಂಶೋಧನೆ ಅವರ ಕುಟುಂಬಕ್ಕೆ ಅಷ್ಟೇ ಸೀಮಿತವಲ್ಲ. ಸಮಸ್ತ ಕೃಷಿ ಕುಟುಂಬಗಳಿಗೆ ಇದರಿಂದ ಅನುಕೂಲವಾಗಿದೆ. ಅವರ ಸಂಶೋಧನೆಗಳು ಮುಂದುವರಿಯಲಿ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬ್ದುಲ್ ಖಾದರ್ ನಡಕಟ್ಟಿ, ಕೇಂದ್ರ ಸರ್ಕಾರ ನನ್ನ ಸಂಶೋಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಅತೀವ ಸಂತಸ ತಂದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

The Hubli Express is on WhatsApp now, you can join the WhatsApp group by clicking the link 

https://chat.whatsapp.com/C6J8Tg5qnmn3zSkcEKOtAd

You can follow us on Facebook @HubliExpress

 

 

spot_img

SWR renames the Tipu Express 

Hubballi: The South Western Railway (SWR) on Friday stated that they have decided to rename the Mysuru-Bengaluru Tipu Express train and the Talaguppa-Mysuru Express...

Unanimous decision to hike reservation for Scheduled Castes to 17 per cent, Scheduled Tribes to 7 per cent: CM Bommai

Bengaluru, Oct.7:It has been unanimously decided to hike reservation for the Scheduled Castes from 15 per cent to 17 per cent and the Scheduled...

LEAVE A REPLY

Please enter your comment!
Please enter your name here

This is the title of the web page
This is the title of the web page