ಹುಬ್ಬಳ್ಳಿ :ಜೈನ ಸಂತರಾದ ಮುನಿಶ್ರೀ ಅಮೋಘಕೀರ್ತಿ ಮತ್ತು ಮುನಿಶ್ರೀ ಅಮರಕೀರ್ತಿ ಮಹಾರಾಜರ ಪ್ರೇರಣೆಯಿಂದ ಮುಂಬಯಿನ ವೀರಶಾಸನ ಪ್ರಭಾವನಾ ಸಮಿತಿಯವರು ನಾಡಿನ ವಿವಿಧ ಭಾಗಗಳಲ್ಲಿ ಕೊರೋನಾ ಪೀಡಿತರಿಗೆ ಅವಶ್ಯಕತೆ ಇರುವಲ್ಲಿ ಉಚಿತವಾಗಿ ಉಪಯೋಗಿಸಲು ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ನೀಡಿದ್ದು
ಅವುಗಳಲ್ಲಿ ಐದು ಹುಬ್ಬಳ್ಳಿಯಲ್ಲಿ ಲಭ್ಯವಿರುವುದಾಗಿ ಹುಬ್ಬಳ್ಳಿ ಜೈನ ಸಮಾಜದ ಉಪಾಧ್ಯಕ್ಷ ವಿಮಲ್ ತಾಳಿಕೋಟಿ ತಿಳಿಸಿದ್ದಾರೆ. ಸಾರ್ವಜನಿಕರು ಈ
ಕುರಿತು ಅವರನ್ನು 9448118460ಕ್ಕೆ ಸಂಪರ್ಕಿಸಬಹುದಾಗಿದೆ. ಈ ಸಂದರ್ಭದಲ್ಲಿ ಹುಬ್ಬಳ್ಳಿ ಜೈನ ಸಮಾಜ ಅಧ್ಯಕ್ಷ ರಾಜೇಂದ್ರ ಬೀಳಗಿ, ಮಾಜಿ ಅಧ್ಯಕ್ಷ ಶಾಂತಿನಾಥ ಹೋತಪೇಟಿ ಉಪಸ್ಥಿತರಿದ್ದರು