spot_img
spot_img
25 C
Hubli
Saturday, December 10, 2022
HomeHubballi / Dharwadಹುಬ್ಬಳ್ಳಿಯ ವಿವಿಧ ನಿಲ್ದಾಣಗಳಿಂದ ಕಾರ್ಯಾಚರಣೆಗೊಳ್ಳುವ ಸಾರಿಗೆಗಳ ಮಾಹಿತಿ ಪ್ರಕಟಿಸಿದ ವಾಕರಸಾ ಸಂಸ್ಥೆ(NWKRTC)

ಹುಬ್ಬಳ್ಳಿಯ ವಿವಿಧ ನಿಲ್ದಾಣಗಳಿಂದ ಕಾರ್ಯಾಚರಣೆಗೊಳ್ಳುವ ಸಾರಿಗೆಗಳ ಮಾಹಿತಿ ಪ್ರಕಟಿಸಿದ ವಾಕರಸಾ ಸಂಸ್ಥೆ(NWKRTC)

NWKRTC ಹುಬ್ಬಳ್ಳಿ-ಧಾರವಾಡ (Hubballi-Dharwad) ಅವಳಿ ನಗರಗಳ ವ್ಯಾಪ್ತಿಯು ದಿನೇ-ದಿನೇ ಹೆಚ್ಚಾದಂತೆ ಪ್ರಯಾಣಿಕರ ಸಂಚಾರದಲ್ಲಿಯೂ ಸಹ ಹೆಚ್ಚಳವಾಗಿರುತ್ತದೆ. ಹಾಗೂ ನಗರ ವ್ಯಾಪ್ತಿಯಲ್ಲಿ ಹಳೇ ಬಸ್ ನಿಲ್ದಾಣವನ್ನು ನಿರ್ಮಿಸುವ ಕಾರ್ಯವು ಸ್ಮಾರ್ಟ ಸಿಟಿ ಯೋಜನೆಯಡಿಯಲ್ಲಿ ಕೆಲಸ ಪ್ರಗತಿಯಲ್ಲಿರುವದರಿಂದ ಹಳೇ ಬಸ ನಿಲ್ದಾಣದಿಂದ ಕಾರ್ಯಾಚರಣೆಯಾಗುತ್ತಿರುವ ಕೆಲವು ಮಾರ್ಗಗಳನ್ನು ಹೊಸೂರ ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣಗಳಿಗೆ ಸ್ಥಳಾಂತರಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.

  • ಹೊಸೂರ (Hosur) ಬಸ್ ನಿಲ್ದಾಣದಿಂದ ನವಲಗುಂದ ಮಾರ್ಗವಾಗಿ ಔರಂಗಾಬಾದ್, ಸೊಲ್ಲಾಪುರ, ಬಾರ್ಸಿ, ತುಳುಜಾಪೂರ, ವಿಜಯಪುರ, ಬಾಗಲಕೋಟೆ (Bagalkote), ಬದಾಮಿ, ಇಲಕಲ್, ಬೀದರ್ ಸಾರಿಗೆಗಳು ಮತ್ತು ಗದಗ (Gadag) ಮಾರ್ಗವಾಗಿ ಕಲಬುರ್ಗಿ, ಕೊಪ್ಪಳ, ಬಳ್ಳಾರಿ, ಹೊಸಪೇಟೆ, ರಾಯಚೂರ ಸಾರಿಗೆಗಳು ಮತ್ತು ಕುಂದಗೋಳ ಮಾರ್ಗವಾಗಿ ಲಕ್ಮೇಶ್ವರ ಸಾರಿಗೆಗಳು ಹಾಗೂ ಸಾಮಾನ್ಯ ಮತ್ತು ಉಪ-ನಗರ ಸಾರಿಗೆಗಳನ್ನು ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗೊಳಿಸಲಾಗುತ್ತಿದೆ.
  • ಗದಗ ಕಡೆಗೆ ಹೋಗುವ ಬಸ್‌ಗಳು ಹೊಸೂರು ವಾಣಿ-ವಿಲಾಸ ಸರ್ಕಲ್-ಭಗತಸಿಂಗ ಸರ್ಕಲ್-ನ್ಯೂ ಕಾಟನ್ ಮಾರ್ಕೆಟ-ಚೆನ್ನಮ್ಮಾ ಸರ್ಕಲ್-ರೇಲ್ವೆ ಅಂಡರ ಬ್ರೀಜ್ ಮುಖಾಂತರ ಕಾರ್ಯಾಚರಣೆಯಾಗುತ್ತವೆ. ನವಲಗುಂದ ಮಾರ್ಗವಾಗಿ ಕಾರ್ಯಾಚರಣೆಯಾಗುವ ಸಾರಿಗೆಗಳು ಹೊಸೂರು ವಾಣಿ-ವಿಲಾಸ ಸರ್ಕಲ್-ಭಗತಸಿಂಗ ಸರ್ಕಲ್-ನ್ಯೂ ಕಾಟನ್ ಮಾರ್ಕೆಟ-ಚೆನ್ನಮ್ಮಾ ಸರ್ಕಲ್-ಹಳೇ ಕೋರ್ಟ ಸರ್ಕಲ್ ಕೇಶ್ವಾಪುರ ಸರ್ವೋದಯ ಸರ್ಕಲ್ ಮಾರ್ಗವಾಗಿ ಕಾರ್ಯಾಚರಣೆಯಾಗುತ್ತವೆ.
  • ಕುಂದಗೋಳ ಮಾರ್ಗವಾಗಿ ಕಾರ್ಯಾಚರಣೆಯಾಗುವ ವೇಗದೂತ ಸಾರಿಗೆಗಳು ಹೊಸೂರು ವಾಣಿ-ವಿಲಾಸ ಸರ್ಕಲ್-ಭಾರತ ಮಿಲ್ ಸರ್ಕಲ್-ಇಂಡಿ ಪಂಪ ಸರ್ಕಲ್-ಗಬ್ಬೂರ ಟೋಲ್ ಮುಖಾಂತರ ಕಾರ್ಯಾಚರಣೆಯಾಗುತ್ತವೆ.
  • ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ-4 ಮಾರ್ಗವಾಗಿ ಕಾರ್ಯಾಚರಣೆಯಾಗುವ ಹಾವೇರಿ-ರಾಣೇಬೆನ್ನೂರು-ದಾವಣಗೇರೆ-ಬೆಂಗಳೂರು-ಹಾನಗಲ್-ಶಿವಮೊಗ್ಗ-ಶಿರಸಿ-ಮಂಗಳೂರು-ಧರ್ಮಸ್ಥಳ- ಇತ್ಯಾದಿ ಸಾರಿಗೆಗಳು, ಧಾರವಾಡ ಮೂಲಕ ಕಾರ್ಯಾಚರಣೆಯಾಗುವ ಬೆಳಗಾವಿ-ಮೀರಜ-ಕೊಲ್ಲಾಪುರ-ಪುಣೆ-ಮುಂಬೈ-ಶಿರಡಿ-ನಾಸೀಕ-ಪಣಜಿ-ವಾಸ್ಕೋ-ಗೋಕಾಕ-ಜಮಖಂಡಿ-ಅಥಣಿ-ಸಾರಿಗೆಗಳು ಮತ್ತು ಕಾರವಾರ ರಸ್ತೆ ಮಾರ್ಗವಾಗಿ ಕಾರ್ಯಾಚರಣೆಯಾಗುವ ಕಾರವಾರ-ಅಂಕೋಲಾ-ಮಂಗಳೂರು-ಧರ್ಮಸ್ಥಳ ಈ ಎಲ್ಲಾ ಸಾರಿಗೆಗಳು ಕಾರ್ಯಾಚರಣೆಯಾಗುತ್ತವೆ.
  • ರಾಷ್ಟ್ರೀಯ ಹೆದ್ಚಾರಿ ಮೂಲಕ ಕಾರ್ಯಾಚರಣೆಯಾಗುವ ಸಾರಿಗೆಗಳು ವಾಣಿ-ವಿಲಾಸ ಸರ್ಕಲ್-ಭಾರತ ಮಿಲ್ ಸರ್ಕಲ್-ಇಂಡಿ ಪಂಪ-ಗಬ್ಬೂರ ಟೋಲ್ ಮುಖಾಂತರ ಕಾರ್ಯಾಚರಣೆಯಾಗುತ್ತವೆ.
  • ಕಾರವಾರ ರಸ್ತೆ ಮೂಲಕ ಕಾರ್ಯಾಚರಣೆಯಾಗುವ ಸಾರಿಗೆಗಳು ವಾಣಿ-ವಿಲಾಸ ಸರ್ಕಲ್-ಭಾರತ ಮಿಲ್ ಸರ್ಕಲ್-ಇಂಡಿ ಪಂಪ ಮುಖಾಂತರ ಕಾರ್ಯಾಚರಣೆಯಾಗುತ್ತವೆ.
  • ಧಾರವಾಡ ಮೂಲಕ ಕಾರ್ಯಾಚರಣೆಯಾಗುವ ಸಾರಿಗೆಗಳು ತಾರಿಹಾಳ ಬೈ-ಪಾಸ್ ಮೂಲಕ ಕಾರ್ಯಾಚರಣೆಯಾಗುತ್ತವೆ.
  • ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರುವ ಚನ್ನಮ್ಮ ವೃತ್ತದ ಬಳಿ ಬಸ್ ನಿಲ್ದಾಣದ ಕಾಮಗಾರಿಯು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಪ್ರಗತಿಯಲ್ಲಿದ್ದು, ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಿರುವದರಿಂದ ಹಾಗೂ ನಗರದಲ್ಲಿ ಪ್ಲೈ-ಓವರ್ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವು ಸಾರಿಗೆಗಳನ್ನು ಮಾರ್ಗ ಬದಲಾಯಿಸಿ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಕೆಲ ದಿನಗಳ ಮಟ್ಟಿಗೆ ಸಾರ್ವಜನಿಕ ಪ್ರಯಾಣಿಕರಿಗೆ ಸಹಕರಿಸುವಂತೆ ಕೋರುತ್ತಾ, ನಿಲ್ದಾಣದ ಕಾಮಗಾರಿ ಮುಗಿದ ನಂತರ ನಗರ ಸಾರಿಗೆ ವ್ಯಾಪ್ತಿಯಲ್ಲಿ ಹಿಂದಿನಂತೆ ಮಾರ್ಗ ಕಾರ್ಯಾಚರಣೆ ಮುಂದುವರೆಯಲಿದೆ. ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವದರಿಂದ ನಗರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿರುತ್ತದೆ. ಹಾಗೂ ಹೊಸೂರ ಬಸ್ ನಿಲ್ದಾಣದಿಂದ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣಕ್ಕೆ ಪ್ರತಿ 10 ನಿಮಿಷಕ್ಕೊಮ್ಮೆ ಬೆಳೆಗ್ಗೆ 06:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

 ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಬರುವ ವಾ.ಕ.ರ.ಸಾ.ಸಂಸ್ಥೆಯ (NWKRTC) ಎಲ್ಲ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವಂತೆ, ಹಾಗೂ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಮೇಲ್ವಿಚಾರಣೆ ಕೈಗೊಳ್ಳುವಂತೆ ಸಂಬಂಧಪಟ್ಟ ನಿಲ್ದಾಣಾಧಿಕಾರಗಳಿಗೆ ಈಗಾಗಲೇ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು

ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ ಹುಬ್ಬಳ್ಳಿ ಸಂಖ್ಯೆ: 7760991685/7760991662

ಗೋಕುಲ್ ರಸ್ತೆ ಹೊಸ ಬಸ್ ನಿಲ್ದಾಣ ಹುಬ್ಬಳ್ಳಿ ಸಂಖ್ಯೆ: 7760991682/0836-2221037

The Hubli Express is on WhatsApp now, you can join the WhatsApp group by clicking the link >>>>>  https://chat.whatsapp.com/Hrmohnx3bkrEJRIv9kQsyD  >>>>>>> You can follow us on Facebook @HubliExpress

 

Karnataka-Maharashtra Border Row: Karnataka MPs to Meet Amit Shah

Bengaluru: Following the Maharashtra MPs' meeting with Union Home Minister Amit Shah in Delhi, the Karnataka MPs will meet him in Delhi on Monday...

A gang attacks bakery workers in Bengaluru; video goes viral

Bengaluru: Around Thursday midnight, a gang assaulted two bakery workers over a minor dispute outside Kundalahalli Gate in the HAL Police Station limits. The incident...

LEAVE A REPLY

Please enter your comment!
Please enter your name here

This is the title of the web page
This is the title of the web page