ಬೆಂಗಳೂರು : ಶೇಖಡ ೫ ಪ್ರತಿಶತ ಕ್ಕಿಂತ ಕಡಿಮೆ ಪ್ಯಾಸಿಟಿವಿಟಿ ದರ ವಿರುವ ರಾಜ್ಯದ ೧೬ ಜಿಲ್ಲೆಗಳಲ್ಲಿಲಾಕ್ ಡೌನ್ ನಿಯಮಗಳಲ್ಲಿ ಸಡಲಿಕೆ ನೀಡಲಾಗಿದೆ.
ಸೋಮವಾರ ದಿಂದ ಗದಗ್ , ರಾಯಚೂರು,ಕಲಬುರಗಿ ,ಬೆಳಗಾವಿ ಸೇರಿದಂತೆ ೧೬ ಜಿಲ್ಲೆಗಳಲ್ಲಿ ಅಂಗಡಿ ಮುಂಗಟ್ಟು ಬೆಳಿಗ್ಗೆ ಯಿಂದ ಸಂಜೆ ೫ರ ವರೆಗೆ ತೆರೆಯಬಹುದು. ಇದರಲ್ಲಿಯೂ ಸಹ ಕೆಲವು ಷರತ್ತು ಗಳು ಇರಲಿವೆ.
ಈ ಹೊಸ ನಿಯಮ ಜುಲೈ ೫ ರ ವರೆಗೆ ಇರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ವಿಜಯಪುರ, ಉಡುಪಿ, ದಕ್ಷಿಣ ಕನ್ನಡ, ಸೇರಿದಂತೆ 13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ.