ಹುಬ್ಬಳ್ಳಿ: ಕೋರೋನಾದ ಸಂಕಷ್ಟದ ಸಮಯದಲ್ಲಿ ರೈತರು ಸೇರಿದಂತೆ ಬಡವರು, ಕೂಲಿ ಕಾಮಿ೯ಕರು ಹೀಗೆ ಅನೇಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಇಂತಹ ಸಂಕಷ್ಟದ ಸಮಯದಲ್ಲಿ ನಗರದ ಕಾಂಗ್ರೆಸ್ ಯುವ ನಾಯಕ ನಾಗರಾಜ ಗೌರಿ ಅನೇಕ ಮಾನವೀಯ ಕಾಯ೯ಗಳ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಧಾರವಾಡದಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದಿಂದ ವಿವಿಧ ಓಣಿಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರ ಆದೇಶದಂತೆ ರಾಯಪುರ, ನವಲೂರ ನಲ್ಲಿ ರೈತರು ಬೆಳೆದ ಕಾಯಿಪಲ್ಲೇಗಳನ್ನು ನೇರವಾಗಿ ಖರೀದಿಸಿ ಬಡವರಿಗೆ ಉಚಿತವಾಗಿ ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ದೀಪಾ ಗೌರಿ, ಮಲ್ಲಿಕಾರ್ಜುನ್ ತಾವಶಿ, ವಸಂತ್ ಹೊನ್ನಳ್ಳಿ. ಜೇಮ್ಸ್ ಸುಜನ್ ಕಾಕೆ, ಜಯಶ್ರೀ ದೇಶಮಾನ್ಯ್, ಲಕ್ಶ್ಮೀ ಗುತ್ತೆ,
ತ್ರಿಶಿಲ ಎಂ ಇನ್ನಿತರರು ಉಪಸ್ಥಿತರಿದ್ದರು