ಹುಬ್ಬಳ್ಳಿ,21ಮೇ (ಹಿ.ಸ): ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮೊದಲ ಸುದ್ದಿಗೋಷ್ಠಿಯಲ್ಲಿ ರಾಜ್ಯಕ್ಕೆ ಬರಬೇಕಿರುವ ಅನುದಾನದ ಬಗ್ಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಕಿಡಿಕಾರಿದ್ದರು. ಇದಕ್ಕೆ ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳಿಗೆ ಪ್ರಿತಿಕ್ರಿಯಿಸಿದ್ದು, ರಾಜ್ಯಕ್ಕೆ ಹಣ ಕಮ್ಮಿ ಬಂದಿದೆ ಅಂತಾರೆ. 2009 ರಿಂದ 2014ರ ಡೆವಲ್ಯೂಷನ್ ಫಂಡ್ ನಲ್ಲಿ ಶೇಖಡಾ 148 ರಷ್ಟು ಜಾಸ್ತಿ ಆಗಿದೆ ಎಂದು ತಿರುಗೇಟು ನೀಡಿದರು.
2014 ರಿಂದ 2019ರ ಅವಧಿಯಲ್ಲಿ ಶೇಖಡಾ 129 ರಷ್ಟು ಜಾಸ್ತಿ ಆಗಿದೆ. ಯಾವ ಯಾವ ವರ್ಷದಲ್ಲಿ ಎಷ್ಡು ಹಣ ಬಂದಿದೆ ಎನ್ನುವುದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಮೊದಲು 700-800 ಕೋಟಿ ರೂ. ಡೆವಲ್ಯೂಷನ್ ಫಂಡ್ ಬರುತ್ತಿತ್ತು. ನಮ್ಮ ಕಾಲದಲ್ಲಿ 5000-7000 ಕೋಟಿ ರೂ, ಹಣ ಬಂದಿದೆ. 2009-10 ರಲ್ಲಿ 2476 ಕೋಟಿ ರೂ. ಹಣ ಬರುತ್ತಿತ್ತು. ಇದ್ರೆ 2019-20 ರಲ್ಲಿ 7578 ಕೋಟಿ ರೂ. ಬಂದಿದೆ. 2021-22 ರಲ್ಲಿ 7862 ಕೋಟಿ ರೂ. ಬಂದಿದೆ. ಪ್ರತಿ ವರ್ಷ ಡೆವಲ್ಯೂಷನ್ ಫಂಡ್ ನಲ್ಲಿ ಜಾಸ್ತಿ ಆಗುತ್ತಿದೆ ಎಂದು ಅಂಕಿ-ಅಂಶಗಳ ಮೂಲಕ ಸಿದ್ದರಾಮಯ್ಯ ಆರೋಪಗಳಿಗೆ ಉತ್ತರಿಸಿದರು.
ತಾವು ಕೊಟ್ಟ ಭರವಸೆಗಳನ್ನು ಈಡೇರಿಸುವುದರ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಚುನಾವಣೆ ಕಾರಣಕ್ಕಾಗಿ ಭರವಸೆಯನ್ನು ಕೊಟ್ಟಿದ್ದರು. ಮೊದಲನೇ ಕ್ಯಾಬಿನೆಟ್ನಲ್ಲಿ ಜಾರಿಗೆ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಮೊದಲ ಕ್ಯಾಬಿನೆಟ್ ಸಭೆ ಆಗಿದ್ದು, ಈಗೇನು ಹೇಳುತ್ತಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.
The Hubli Express is on WhatsApp now, you can join the WhatsApp group by clicking the link >>>>> https://chat.whatsapp.com/Hrmohnx3bkrEJRIv9kQsyD >>>>>>> You can follow us on Facebook @HubliExpress