Kannada

ಮಿನಿ ವಿಧಾನಸೌಧದಲ್ಲಿ ಮಾಸ್ಕ್ ಮಾರಾಟ ಯಂತ್ರ ಸದ್ಭಳಕೆ

WhatsApp Group Join Now
Telegram Group Join Now

೧೨ ಯಂತ್ರದಿಂದ ದಿನಕ್ಕೆ ೨ ಸಾವಿರ ಮಾಸ್ಕ್ ಮಾರಾಟ
ಹುಬ್ಬಳ್ಳಿ. ಜುಲೈ ೦೮: ವಾಯ್.ಐ, (ಯಂಗ್ ಇಂಡಿಯನ್ಸ್) ಸಿಐಐ, (ಕಾನ್ಫೇಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ) ಹಾಗೂ ಅರಿವು ಹೆಲ್ತ್‌ಕೇರ್‌ ಇವರುಗಳು ಸಹಯೋಗದಲ್ಲಿ ಹುಬ್ಬಳ್ಳಿಯ ಮನೋವೈದ್ಯ ಸಲಹೆಗಾರರಾದ ಡಾ. ಸಚಿನ್ ಬಿ.ಎಸ್ ಅವರು ದಾನವಾಗಿ ನೀಡಿರುವ ಮಾಸ್ಕ್ ವೆಂಡಿಂಗ್ ಮಶಿನ್‌ನ್ನು ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಅಳವಡಿಸಲಾಗಿದ್ದು,ಉತ್ತಮವಾಗಿ ಸದ್ಭಳಕೆಯಾಗುತ್ತಿದೆ.

 

ಗಂಗಾಧರ ಯಲಿವಾಳ
ಅಪ್ರೆಂಟಿಸ್ ಪ್ರಶಿಕ್ಷಣಾರ್ಥಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆ, ಹುಬ್ಬಳ್ಳಿ.

೨ ರೂ. ಮಾಸ್ಕ್ಗಳು ಸಾರ್ವಜನಿಕರಿಗೆ ಸಿಗುವುದರಿಂದ ಅನುಕೂಲವಾಗಿದೆ. ಹಾಗೂ ಜಿಲ್ಲೆಯಾದ್ಯಂತ ೧೨ ಯಂತ್ರದಲ್ಲಿ ದಿನಕ್ಕೆ ೨ ಸಾವಿರದಷ್ಟು ಮುಖಗವಸು ಮಾರಾಟವಾಗುತ್ತಿವೆ.
ಯಂಗ್ ಇಂಡಿಯನ್ಸ್ ಸಂಸ್ಥೆಯು ಜನರಿಗೆ ಅನುಕೂಲವಾಗಲಿ ಎಂದು ಮಹಾನಗರ ಪಾಲಿಕೆ, ಕಿಮ್ಸ್, ದುರ್ಗದಬೈಲ್, ಎಂ.ಜಿ ಮಾರ್ಕೆಟ್, ಎಪಿಎಂಸಿ, ಧಾರವಾಡ ಸೇರಿದಂತೆ ವಿವಿಧ ೧೨ ಮುಖ್ಯ ಸ್ಥಳಗಳಲ್ಲಿ ಮಾಸ್ಕ್ ಮಾರಾಟ ಯಂತ್ರವನ್ನು ನಿರ್ಮಿಸಿ ಜನರಿಗೆ ಮಾದರಿಯಾಗಿದೆ.
ಎಲ್ಲರೂ ಮಾಸ್ಕುಗಳನ್ನು ಧರಿಸಲಿ, ಕೊರೊನಾ ತಡೆಗಟ್ಟಬೇಕು. ಮಾರುಕಟ್ಟೆಯಲ್ಲಿ ೫ ರಿಂದ ೧೦ ರೂ. ಗೆ ಈ ಮಾಸ್ಕ್ ಸಿಗುತ್ತವೆ. ಕಡಿಮೆ ದರದಲ್ಲಿ ಕೊಡುವುದರಿಂದ ಹೆಚ್ಚು ಹೆಚ್ಚು ಜನರು ಮಾಸ್ಕ್ ಹಾಕುವಂತಾಗಲಿ ಎಂಬುವುದು ಸಂಸ್ಥೆಯ ಧ್ಯೇಯವಾಗಿದೆ. ಇವರ ಈ ಕಾರ್ಯ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಯಂತ್ರದ ಬೆಲೆ ಸುಮಾರು ರೂ.೧೩ ಸಾವಿರ ಇದರಲ್ಲಿ ೧೦೦ ಮಾಸ್ಕುಗಳನ್ನು ಹಾಕಲಾಗುತ್ತಿದ್ದು, ಒಂದರಿಂದ ಎರಡು ಗಂಟೆಗಳಲ್ಲಿ ಅವುಗಳು ಖಾಲಿಯಾಗುತ್ತಿವೆ.
ಮಾಸ್ಕ್ ವೆಂಡಿAಗ್ ಮಶಿನ್ ನಿರ್ವಹಣೆಗಾಗಿ ನಿರ್ವಹಣೆಗಾರರನ್ನು ನೇಮಿಸಲಾಗಿದ್ದು, ಅವರುಗಳು ದಿನಕ್ಕೆ ಎರಡು ಬಾರಿ ಮಾಸ್ಕುಗಳ ಸ್ಟಾಕ್‌ನ್ನು ವೀಕ್ಷಿಸುತ್ತಾರೆ. ದಿನಕ್ಕೆ ೨ ರಿಂದ ೩ ಸಲ ಯಂತ್ರದಲ್ಲಿ ಮಾಸ್ಕುಗಳನ್ನು ಹಾಕಿ ಅದು ಕಾರ್ಯಾಚರಣೆಯಲ್ಲಿರುವಂತೆ ಅವರು ನೋಡಿಕೊಳ್ಳುತ್ತಾರೆ.

ಯಂತ್ರದ ಬಳಕೆ ಸುಲಭವಾಗಿದ್ದು, ೨ ರೂಪಾಯಿ ಕಾಯಿನ್ ಹಾಕಿದರೆ ಒಂದು ಮಾಸ್ಕ್ ಬರುತ್ತದೆ. ದಿನನಿತ್ಯ ಮಿನಿ ವಿಧಾನಸೌಧದಲ್ಲಿ ಸಾಕಷ್ಟು ಜನರು ಅವರ ಕೆಲಸಗಳಿಗಾಗಿ ಬರುವುದುಂಟು. ಕೆಲವರು ಮುಖಗವಸು ಧರಿಸಿದರೆ ಇನ್ನು ಕೆಲವರು ಧರಿಸದೇ ಇರುವುದರಿಂದ ಕೋವಿಡ್ ನಿಯಮಗಳ ಪಾಲನೆಯಾಗುವುದಿಲ್ಲ. ಸೋಂಕು ಹೆಚ್ಚಳಕ್ಕೆ ಜನಗಳೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅದಕ್ಕಾಗಿ ಕಛೇರಿ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ಜನರಿಗೆ ಈ ಮಾಸ್ಕ್ ಮಾರಾಟ ಯಂತ್ರದಿಂದ ಕಡಿಮೆ ಬೆಲೆಗೆ ಮಾಸ್ಕ್‌ಗಳು ಸಿಗುವುದರಿಂದ ಅನುಕೂಲವಾಗಿದೆ ಹಾಗೂ ಕೋವಿಡ್ ನಿಯಮಗಳ ಪಾಲನೆಯು ಕೂಡ ಮಾಡಿದಂತಾಗುತ್ತದೆ.
ಈ ಯಂತ್ರದ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಇದರ ಬಳಕೆ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಇನ್ನು ಹೆಚ್ಚಿನ ಸ್ಥಳಗಳಲ್ಲಿ ಯಂತ್ರಗಳನ್ನುಅಳವಡಿಸಲು ಯಂಗ್‌ ಇಂಡಿಯನ್ಸ್ ಸಂಸ್ಥೆ ಚಿಂತನೆ ನಡೆಸಿದೆ.

WhatsApp Group Join Now
Telegram Group Join Now

Related Posts

1 of 7
error: Content is protected !!