spot_img
spot_img
25.5 C
Hubli
Friday, October 7, 2022
HomeTechnologyಮನಸ್ಸು ಬಿಚ್ಚಿ ಮಾತಾಡಿ: ವಿಶೇಷ ಅಭಿಯಾನದೊಂದಿಗೆ ಮಹಿಳಾ ದಿನ ಆಚರಿಸಿದ ‘ಕೂ’

ಮನಸ್ಸು ಬಿಚ್ಚಿ ಮಾತಾಡಿ: ವಿಶೇಷ ಅಭಿಯಾನದೊಂದಿಗೆ ಮಹಿಳಾ ದಿನ ಆಚರಿಸಿದ ‘ಕೂ’

ದೈನಂದಿನ ಜೀವನದಿಂದ ಮಹಿಳೆಯರನ್ನು ಒಳಗೊಂಡಂತೆ ಈ ಉತ್ತೇಜಕ ಅಭಿಯಾನವು ಲಿಂಗ ಆಧಾರಿತ ಸ್ಟೀರಿಯೊ ಮಾದರಿಯನ್ನು ಹೊರತುಪಡಿಸಿ ಮಹಿಳೆಯರಲ್ಲಿ ಮುಕ್ತ ಮನೋಭಾವದ ಸಂಭಾಷಣೆಗಳನ್ನು ಉತ್ತೇಜಿಸುವ ಅಗತ್ಯತೆಯನ್ನು ಪುನರುಚ್ಛರಿಸುತ್ತದೆ.

ಬೆಂಗಳೂರು: ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಗೆ ಅತಿ ದೊಡ್ಡ ವೇದಿಕೆಯಾದ ಕೂ ಮಹಿಳಾ ದಿನದ ಪ್ರಯುಕ್ತ #BejhijhakBol (ಮನಸ್ಸು ಬಿಚ್ಚಿ ಮಾತಾಡಿ) ಎಂಬ ಒಂದು ಅರ್ಥ ಪೂರ್ಣ ಅಭಿಯಾನವನ್ನು ಆಯೋಜಿಸಿದೆ.

ಈ ಅಭಿಯಾನದಲ್ಲಿ ಮಹಿಳೆಯರು ಭಯ ಅಥವಾ ಯಾವುದೇ  ಹಿಂಜರಿಕೆಯಿಲ್ಲದೆ ಸ್ಫೂರ್ತಿದಾಯಕ ವೀಡಿಯೊ ಮೂಲಕ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿಸಬಹುದಾಗಿದೆ. ಎಲ್ಲಾ ವಯೋಮಾನದ ಮಹಿಳೆಯರು ಈ ಮೂಲಕ ಭಾವನೆಗಳನ್ನು ಮುಕ್ತವಾಗಿಸುವ ಮತ್ತು ತೆರೆದಿಡುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ.

ಅಂತರರಾಷ್ಟ್ರೀಯ ಮಹಿಳಾ ದಿನದಂದು ಪ್ರಾರಂಭಿಸಲಾಗಿರುವ ಈ ಅಭಿಯಾನವು 2022 ರ ಥೀಮ್ ಗೆ ಅನುಗುಣವಾಗಿದೆ- ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ – ಅನಿಯಂತ್ರಿತ ಅಭಿವ್ಯಕ್ತಿಯನ್ನು ಸಕ್ರಿಯಗೊಳಿಸುವ ಮತ್ತು ಪ್ರೋತ್ಸಾಹಿಸುವ ಮೂಲಕ ಅಂತರ್ಸಂಪರ್ಕಿತ ಜಗತ್ತಿನಲ್ಲಿ ಲಿಂಗ ಸಮಾನತೆಯನ್ನು ಬೆಳೆಸುವ ಅಗತ್ಯವನ್ನು ಸಾರುತ್ತಿದೆ.

ಕೂ ವೇದಿಕೆಯ ಪ್ರಮುಖವಾಗಿ ಪ್ರತಿಪಾದಿಸುವ ಭಾಷಾ ಪ್ರಧಾನ ಸ್ವಯಂ ಅಭಿವ್ಯಕ್ತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿರುವ ಈ ಅಭಿಯಾನವು, ನಿಮ್ಮ ಹೃದಯದ ಮಾತು ಏನೇ ಇರಲಿ, ನಿರ್ಭಿಡೆಯಿಂದ ಮಾತಾಡಿ ಎಂಬ ಅಡಿಬರಹದ ಮೂಲಕ ಎಲ್ಲ ಬಂಧಗಳನ್ನು ಕಳಚಿ ಮಾತಾಡಿ ಎಂದು ಹೇಳುತ್ತಿದೆ.

dolon

ಡಿಜಿಟಲ್ ಜಗತ್ತಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೆನಪಿಸಿ ಭಾಷೆಯಂತೆಯೇ ಲಿಂಗ ಅಡೆತಡೆಗಳನ್ನು ಹಿಮ್ಮೆಟ್ಟಿ ನಿಲ್ಲುವ, ಅಳಿಸಿ ಹಾಕುವ ಕೂ ವೇದಿಕೆಯ ತತ್ವವನ್ನು ಇದು ಪುನರುಚ್ಚರಿಸುತ್ತದೆ. ಆನ್ಲೈನ್ ನಲ್ಲಿ ಸ್ಥಳೀಯ ಭಾಷೆಯಲ್ಲಿ ಅಭಿವ್ಯಕ್ತಪಡಿಸುವಿಕೆಯನ್ನು ಸಕ್ರಿಯಗೊಳಿಸುವ ಮೂಲಕ ಪ್ರತಿಯೊಬ್ಬ ಭಾರತೀಯನನ್ನು ಸಬಲೀಕರಣಗೊಳಿಸುವ ಉದ್ದೇಶದೊಂದಿಗೆ ಕೂ ನಿರ್ಮಾಣವಾಗಿದೆ.

ನಗರಗಳು, ಸಂಸ್ಕೃತಿಗಳು ಮತ್ತು ಸಮಾಜಗಳಾದ್ಯಂತ ಇರುವ ಸಾಮಾನ್ಯ ಮಹಿಳೆಯರನ್ನು (ಸೆಲೆಬ್ರಿಟಿಗಳಲ್ಲ) ಚಿತ್ರಿಸುವ ಮೂಲಕ ವೀಡಿಯೊ ಈ ಭಾವನೆಯನ್ನು ಪ್ರತಿಬಿಂಬಿಸುತ್ತದೆ, ಅವರ ದೈನಂದಿನ ಜೀವನದಲ್ಲಿ ಅವರು ತಮ್ಮ ಆಯ್ಕೆಯ ಸಂಭಾಷಣೆಗಳನ್ನು ವ್ಯಕ್ತಪಡಿಸುವ ಮತ್ತು ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಶೇ 40ರಷ್ಟು ಸಕ್ರಿಯ ಮಹಿಳಾ ಬಳಕೆದಾರರನ್ನು ಹೊಂದಿರುವ ಕೂ  ಒಂದು ಸುರಕ್ಷಿತ, ವಿಶ್ವಾಸಾರ್ಹ ವೇದಿಕೆಯಾಗಿ ಗುರುತಿಸಿಕೊಂಡಿದೆ. ವೈದ್ಯರು, ವಕೀಲರು, ವೃತ್ತಿಪರರು, ವಾಣಿಜ್ಯೋದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು, ನಟರು, ಬರಹಗಾರರು, ಕವಿಗಳು ಮತ್ತು ಗೃಹಿಣಿಯರು.. ಹೀಗೆ ಎಲ್ಲ ವರ್ಗಕ್ಕೆ ಸೇರಿರುವ ಮಹಿಳೆಯರು ಈ ವೇದಿಕೆಯನ್ನು ಬಳಸುತ್ತಿದ್ದು ಆರೋಗ್ಯಕರ ಚರ್ಚೆಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ.  ತಮ್ಮ ಬರಹಗಳ ಮೂಲಕ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದಾರೆ.

ತಮ್ಮದೇ ಮಾತೃ ಭಾಷೆಯಲ್ಲಿ ಮನಸ್ಸಿನ ಮಾತು ವ್ಯಕ್ತಪಡಿಸಬಹುದಾದ ಈ ವೇದಿಕೆಯನ್ನು ಇನ್ನೂ ಬಳಸದೆ ಇರುವವರು, ಇಲ್ಲಿನ ವೈವಿದ್ಯತೆಯನ್ನು ಅನುಭವಿಸದಿರುವವರು ಮಹಿಳಾ ದಿನದಂದು #BejhijhakBol ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ನಿಮ್ಮ ಮಾತುಗಳನ್ನು ಜಗತ್ತಿಗೆ ಕೇಳಿಸಿ.

‘ಅಂತರ್ಜಾಲದಲ್ಲಿ ತಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಬಯಸುವ ಎಲ್ಲರಿಗೂ ಅಭಿವ್ಯಕ್ತಿಸುವ  ಸ್ವಾತಂತ್ರ್ಯವನ್ನು ಕೂ ಪ್ರೋತ್ಸಾಹಿಸುತ್ತದೆ. ಬಹುಭಾಷಾ ಇಂಟರ್ ಫೇಸ್ ಸಕ್ರಿಯಗೊಳಿಸುವುದರ ಮೂಲಕ ಭಾಷೆಯ ಅಡೆತಡೆಗಳನ್ನು ನಿವಾರಿಸುವುದರ ಜೊತೆಗೆ, ಸ್ವಯಂ ಅಭಿವ್ಯಕ್ತಿಯ ವಿಷಯ ಬಂದಾಗ, ತನಗೆ ತಡೆಯೊಡ್ಡುವ ಪರದೆಯನ್ನು ಸರಿಸುವ ಮಹಿಳೆಯರಿಗೆ ನಾವು ಶಕ್ತಿ ನೀಡುತ್ತೇವೆ. #BejhijhakBol ಅಭಿಯಾನವು ತಮ್ಮ ಆಲೋಚನೆಗಳನ್ನು ಅನಿರ್ಬಂಧಿತ ರೀತಿಯಲ್ಲಿ, ಮತ್ತು ತಮ್ಮ ಸ್ಥಳೀಯ ಭಾಷೆಯಲ್ಲಿ ಹಂಚಿಕೊಳ್ಳಲಿಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಲು ಮಹಿಳೆಯರನ್ನು ಪ್ರೇರೇಪಿಸುತ್ತದೆ. ಡಿಜಿಟಲ್ ಪರಿವರ್ತನೆಯ ಜಗತ್ತಿನಲ್ಲಿ ಭಾಷೆ ಅಥವಾ ಲಿಂಗ ಅಡ್ಡಿಯಾಗಬಾರದು. ಈ ಅಭಿಯಾನವು ನಮ್ಮ ವೇದಿಕೆಯನ್ನು ಜನರ ಡಿಜಿಟಲ್ ಬದುಕಿನ ಅವಿಭಾಜ್ಯ ಅಂಗವಾಗುವುದಕ್ಕೆ ಹಾಗೂ ಕೂ ಪ್ರಯಾಣಕ್ಕೂ ಹೆಚ್ಚಿನ ವೇಗ ನೀಡಲಿದೆ’ ಎಂದು ಕೂ ವಕ್ತಾರರು ಹೇಳಿದರು

spot_img

SURYADEVOBHAVA: Sunlight is a ray of hope for “Vitamin D” deficiency

In the fast-paced life and humdrum of modern life, pretending a lack of time, the current generation is not attending to basic bodily needs...

Veteran Actor Arun Bali passes away

Arun Bali, known for his roles in television series such as Swabhimaan and the hit film 3 Idiots, died on Friday at the age...

LEAVE A REPLY

Please enter your comment!
Please enter your name here

This is the title of the web page
This is the title of the web page