ಧಾರವಾಡದ ಕೆಲಗೇರಿಯಲ್ಲಿ ನೆಲೆಸಿರುವ ಕರಿಯಮ್ಮನ ದೇವಸ್ಥಾನದಲ್ಲಿ ಶ್ರೀ ದೇವಿಗೆ ನವರಾತ್ರಿಯ ಎಂಟನೇಯ ದಿನ ಅನ್ನಪೂಣೆ೯ಯ ಅಲಂಕಾರ ಮಾಡಲಾಗಿತ್ತು.
ನವರಾತ್ರಿ ಪ್ರಥಮ ದಿನದಿಂದಲೇ ವಿವಿಧ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಅದರಲ್ಲಿಯೂ ವಿಶೆಷವಾಗಿ ಪದ್ಮಾವತಿ, ಅಂಭಾಭವಾನಿ, ಯೋಗನಿದ್ರಾ ದೇವಿಯಾಗಿ, ಕಾತ್ಯಾಯಿನಿ ಯಾಗಿ, ತಾಯಿ ಕರಿಯಮ್ಮ ಗಮನಸೆಳೆದರು. ನವರಾತ್ರಿಯ ಈ ವಿಶೇಷ ಸಂಧಭ೯ದಲ್ಲಿ ಕರಿಯಮ್ಮನ ದೇವಿಯ ವಿಶೇಷ ಅಲಂಕಾರ ಜನ ಮನ ಸೆಳೆಯಿತು. ಭಕ್ತಾಧಿಗಳು ತಾಯಿಯ ದಶ೯ನ ಪಡೆದು ಪುನೀತರಾದರು.
ಅನ್ನಪೂಣೆ೯ಯಾದ ಕರಿಯಮ್ಮ ತಾಯಿಗೆ ವಿವಿಧ ಭಕ್ಷ್ಯ ಭೋಜನಗಳ ನೈವಿದ್ಯ ಅಪ೯ಣೆ ಮಾಡಲಾಯಿತು.
ಶ್ರೀ ದೇವಿ ಕರಿಯಮ್ಮ ತಾಯಿಯ ಕಳೆದ ಎಂಟು ದಿನಗಳ ಅಲಂಕಾರ ಒಂದು ನೋಟ.