Health & Fitness

ಕುಡಿತದ ಚಟ ನಿಜವಾಗಿಯೂ ಬಿಡಲು ಅಥವಾ ಬಿಡಿಸಲು ಸಾದ್ಯವೇ..?

WhatsApp Group Join Now
Telegram Group Join Now

[sg_popup id=”7216″ event=”inherit”][/sg_popup]ರಮೇಶ( ಹೆಸರು ಬದಲಾಯಿಸಲಾಗಿದೆ), ೩೨ ವಯಸ್ಸು, ೨ ಮಕ್ಕಳ ತಂದೆ ಸಂಸಾರದ ಬಂಡಿಯನ್ನು ಹಾಗೂ ಹೀಗೂ ತಳ್ಳುತ್ತಿದ್ದ ದುಡಿದ ಸಂಪಾದನೆಯಲ್ಲಿ ಸ್ವಲ್ಪಪಾಲು ಸರಾಯಿಗಾಗಿ ಮೀಸಲು ಕೆಲವೊಮ್ಮೆ ವಿಪರೀತ ಎನ್ನುವಷ್ಟರ ಮಟ್ಟಿಗೆ ಕುಡಿಯುತ್ತಿದ್ದ. ಒಂದು ದಿನ ಕುಡಿದ ನಶೆಯಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಒಳಗಾದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ.

ಇನ್ನೂ ಆ ಕುಟುಂಬಕ್ಕೆ ಯಾರು ಆಧಾರವೇ ಇಲ್ಲ, ದುಡಿಯುತ್ತಿದ್ದ ವ್ಯಕ್ತಿಯೇ ಅಕಾಲಿಕವಾಗಿ ಮೃತಪಟ್ಟ. ತಂದೆ, ತಾಯಿ, ಹೆಂಡ್ತಿ, ಇಬ್ಬರು ಮಕ್ಕಳು ನಡು ನೀರಿನಲ್ಲಿ ರಮೇಶ ಬಿಟ್ಟು ಹೋದ.

ಇನ್ನೊಂದು ಉದಾಹರಣೆ, ಚಂದನ್‌ (ಹೆಸರು ಬದಲಾಯಿಸಲಾಗಿದೆ) ವಯಸ್ಸು ಸುಮಾರು ೩೦ ವಷ೯, ಫಿಟ್ಟರ್‌ ಕೆಲಸ ಮಾಡುತ್ತಿದ್ದ, ಈತನ ದಿನ ಪ್ರಾರಂಭವಾಗುತ್ತಿದ್ದೆ ನೈಂಟಿ ಏರಿಸುವದರ ಮೂಲಕ. ವಿಪರೀತ ಕುಡಿತ, ಪರಿಣಾಮ ಕಾಮಣಿಯಾಯಿತು, ಹೆಚ್ಚಿನ ಚಿಕಿತ್ಸೆ ನೀಡುತ್ತಿರಬೇಕಾದರೆ ಬೆಳಕಿಗೆ ಬಂದ ಅಂಶ ಲೀವರ್‌ ಸಮಸ್ಯೆಯಾಗಿದೆ. ಚಿಕಿತ್ಸೆಗೆ ಲಕ್ಷಾಂತರ ಖಚು೯ಮಾಡಿದ ಕುಟುಂಬ ಕೊನೆಗೂ ಆತನಿಗೆ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ ಕುಟುಂಬ ಜೀವನ ಸಾಗಿಸುವದಕ್ಕೂ ಹೆಣಗಾಡುತ್ತಿದೆ. ಹೆಂಡ್ತಿ ಕಾಯಿಪಲ್ಲೆ ಮಾರಿ ಬಂದ ದುಡ್ಡಿನಲ್ಲಿ ಜೀವನ ನಡೆಸೋದು ದುಸ್ತರವಾಗಿ ಪರಿಣಮಿಸಿದೆ. ಜೊತೆಗೆ ಎರಡು ಚಿಕ್ಕಮಕ್ಕಳು, ವಯಸ್ಸಾದ ತಾಯಿ ಮನೆಯಲ್ಲಿ.

ನಮ್ಮ ನಿಮ್ಮ ನಡುವೆ ಇಂತಹ ಸಾವಿರಾರು ರಮೇಶ ಹಾಗೂ ಚಂದನ ಇರಬಹುದು ಕುಡಿತದ ಚಟದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ. ಈಗಲೂ ಹಲವಾರು ಕುಟುಂಬಗಳು ತಮ್ಮ ಕುಟುಂಬದ ಸದಸ್ಯನ/ರ ಕುಡಿತದ ಚಟದಿಂದ ತೊಂದರೆ, ಮಾನಸಿಕ ಕಿರುಕುಳ, ಆಥಿ೯ಕ ಸಂಕಷ್ಟ ಅನುಭವಿಸುತ್ತಿರಬಹುದು.

ಪ್ರತಿಯೊಂದು ಸಮಸ್ಯೆಗೆ ಪರಿಹಾರ ಅನ್ನೊದು ಇದ್ದೇ ಇರುತ್ತೆ ಆ ಪರಿಹಾರ ಎಲ್ಲಿದೆ, ಆ ಪರಿಹಾರ ಏನು ಅನ್ನೊದು ತಿಳಿಬೇಕಿರುದು ಜಾಣ್ಮೆ.

ಬಹುಷಃ ಬಹಳಷ್ಟು ಜನರಿಗೆ ಮಾನಸಿಕ ರೋಗ ತಜ್ಞರು ಕುಡಿತ ಹಾಗೂ ಇನ್ನಿತರ ಚಟಗಳು ಅಂದರೆ ಬೀಡಿ, ಸಿಗರೇಟ್‌, ಗಾಂಜಾ ಹಾಗೂ ಇನ್ನಿತರ ಮಾದಕವಸ್ತುಗಳ ಚಟಗಳನ್ನು ಬಿಡಿಸುವಲ್ಲಿ ಪಳಗಿರುತ್ತಾರೆ ಅವರ ಸಹಾಯದಿಂದ ಈ ಚಟದ ಸುಳಿಯಿಂದ ಹೊರಬರಬಹುದು ಎನ್ನುವುದು ತಿಳಿದಿರಲಿಕ್ಕಿಲ್ಲ.

ಈ ನೊಂದ ಕುಟುಂಬಗಳು ಒಮ್ಮೆ ಮಾನಸಿಕ ರೋಗ ತಜ್ಞರನ್ನು ಭೇಟಿಯಾದರೆ ತಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು. ಎಲ್ಲಿಯೋ, ಯಾರೋ ಹೇಳಿದರು ಅಂತ ಯಾವುದೋ ಪುಡಿಯನ್ನ ನೀರಿನಲ್ಲಿ, ಆಹಾರದಲ್ಲಿ ಬೇರಿಸಿ ನೀಡಿ ಪರಿಹಾರ ಸಿಗದೇ ಮತ್ತೆಲ್ಲೂ ಯಾರೋ ಏನೋ ಹೇಳಿದರು ಅಂತ ವಿವಿಧ ಉಪಾಯ ಹಾಗೂ ತಂತ್ರಗಳ ಮೊರೆ ಹೋಗಿ ವ್ಯಕ್ತಿಯ ದುಷ್ಚಟ ಬಿಡಿಸಲಾಗದೇ ಇವನೇನೂ ಬದಲಾವಣೆ ಆಗುವದಿಲ್ಲ ಎಂದು ಅಸಾಯಕರಾಗಿ ಕೈ ಚೆಲ್ಲುವ ಮುನ್ನ, ಕೈಯಲ್ಲಿರುವ ದುಡ್ಡನ್ನು ಕಳೆದುಕೊಳ್ಳುವ ಮುನ್ನ, ದುರಂತಗಳು ಸಂಭವಿಸುವ ಮುನ್ನ, ಮಾನಸಿಕ ರೋಗ ತಜ್ಞರನ್ನು ಭೇಟಿಯಾದರೆ ಬಹಳಷ್ಟು ಧನಾತ್ಮಕ ಪರಿಣಾಮಗಳು ಲಭ್ಯವಾಗುದರಲ್ಲಿ ಸಂಶಯವೇ ಬೇಡ.

ಧಾರವಾಡ ಇನ್ಸಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ ಅಂಡ್‌ ನ್ಯೂರೋಸೈನ್ಸ್‌ (ಡಿಮಾನ್ಸ್‌ ) ನಿದೇ೯ಶಕ ಡಾ. ಮಹೇಶ ದೇಸಾಯಿ ಅವರ ಪ್ರಕಾರ ಕುಡಿತ ಅನ್ನೊದು ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಸಾವಿರಾರು ಕುಟುಂಬಗಳು ಈ ಸಮಸ್ಯೆಯಿಂದ ನರಳುತ್ತಿವೆ. ಇದಕ್ಕೆ ಪರಿಹಾರ ಕುಡಿತದ ಚಟಕ್ಕೆ ಒಳಗಾದ ವ್ಯಕ್ತಿಯನ್ನು ವ್ಯಸನ ಮುಕ್ತನನ್ನಾಗಿಸೋದು, ಒಬ್ಬ ಪಳಗಿದ ಮಾನಸಿಕ ರೋಗ ತಜ್ಞ ವಿವಿಧ ಔಷಧಿ, ಉಪಚಾರಗಳಿಂದ ಅದರೊಟ್ಟಿಗೆ ಬೇರೆ ಬೇರೆ ಥೆರಪಿಗಳ ಸಹಾಯದಿಂದ ಈ ವಿಷ ವತು೯ಲದಿಂದ ವ್ಯಸನಿಯನ್ನು ಹೊರಬರುವಂತೆ ಮಾಡುವದಕ್ಕೆಸಾಧ್ಯವಿದೆ.

ಅದಕ್ಕೆ ಕುಟುಂಬ ಸದಸ್ಯರು ವ್ಯಸನಕ್ಕೆ ಒಳಗಾದ ವ್ಯಕ್ತಿಯನ್ನು ಮನವೊಲಿಸಿ ತಜ್ಞರ ಬಳಿ ಕರೆ ತರುವುದು ಮುಖ್ಯ, ಒಮ್ಮೆ ತಜ್ಞರು ಪರಿಶೀಲಿಸಿದ ನಂತರ ಉಪಚಾರ ತೆಗೆದುಕೊಳ್ಳಲು ಪ್ರಾರಂಭಿಸಿದರೇ  ಸಮಸ್ಯೆಗೆ ಪರಿಹಾರ ಆರಂಭವಾಗಿದೆ ಎಂಧಥ೯ ಎನ್ನುತ್ತಾರೆ ಡಾ. ದೇಸಾಯಿ.

ಕುಡಿತದ ಚಟ ಬಿಡಿಸುವುದು ತುಂಬಾ ಕಠಿಣವಾದದ್ದು, ರೋಗಿಯು ವೈದ್ಯಕೀಯ ಉಪಚಾರ ಪ್ರಾರಂಭವಾದ ಬಳಿಕವೂ ಮತ್ತೆ ಕುಡಿಯಬೇಕೆಂಬ ಆಸೆ ಉಂಟಾಗಬಹುದು. ಆದ್ದರಿಂದ ಕುಟುಂಬದ ಸದಸ್ಯರು ಆದಷ್ಟು ಜಾಗೃತೆಯಿಂದ ವ್ಯಕ್ತಿಗೆ ಸಹಕಾರ ನೀಡುತ್ತಾ ಮನೋಬಲ ತುಂಬುತ್ತ ದೈನಂದಿನ ಮಾತ್ರೆ, ಔಷಧಿಗಳನ್ನು ನೀಡಬೇಕು, ಕೆಲವು ವಿಶೇಷ ಸಂಧಭ೯ ಗಳಲ್ಲಿ ಚಿಕಿತ್ಸೆ ಸುಮಾರು ಎರಡು ವಷ೯ದವರೆಗೂ ಮುಂದುವರೆಯುತ್ತದೆ ಎಂದರು.

ಧಾರವಾಡದ ಡಿಮಾನ್ಸ್‌ನಲ್ಲಿ ಇದಕ್ಕೆ ಚಿಕಿತ್ಸೆ ಲಭ್ಯವಿದೆ, ಇದನ್ನು ಬಾಧಿತ ಕುಟುಂಬದವರು ಸದುಪಯೋಗ ಪಡೆಸಿಕೊಳ್ಳಬಹುದು ಎಂದರು.

ಡಾ.ಅಜಿತಾ ದೇಸಾಯಿ, ಹುಬ್ಬಳ್ಳಿಯ ಕಾಟನ್‌ ಮಾಕೆಟ್‌೯ನಲ್ಲಿ ದೇಸಾಯಿ ನ್ಯೂರೋಸೈಕಿಯಾಟ್ರಿ ಕ್ಲಿನಿಕ್‌ ನಡೆಸುತ್ತಿರುವ ಅವರು ಹೇಳಿದ್ದು ಕುಡಿತದ ಚಟ ೧೦೦ ಪ್ರತಿಶತ ಆಶ್ವಾಸನೆಯಿಂದ ಬಿಡಿಸಲು ಸಾಧ್ಯವಿದೆ ಎಂದು ಹೇಳಲು ಸಾಧ್ಯವಿಲ್ಲ ಆದರೆ ಪ್ರತಿಶತ ೮೦ ರಷ್ಟು ಸಾಧ್ಯವಿದೆ.

ಆದರೆ ಇದಕ್ಕೆ ವ್ಯಸನಕ್ಕೆ ಒಳಗಾದ ವ್ಯಕ್ತಿ ಹಾಗೂ ಆತನ ಕುಟುಂಬದ ಸದಸ್ಯರ ಸಹಕಾರ ಸಹ ಅಗತ್ಯ. ಸರಿಯಾದ ಟ್ರಿಟ್‌ಮೆಂಟ್‌, ವೈದರು ಹೇಳಿದ ಸಮಯಕ್ಕೆ ನಿಗದಿತ ಭೇಟಿ, ವೈದ್ಯರೊಂದಿಗೆ ಸತತ ಸಮಾಲೋಚನೆ ಇವೆಲ್ಲವೂ ಬಹಳ ಮುಖ್ಯ ಎನ್ನುಯತ್ತಾರೆ ಅವರು.

ಬಹಳಷ್ಟು ಜನ, ಒಬ್ಬ ವ್ಯಕ್ತಿ ಕುಡಿತ ಬಿಟ್ಟನಂತರ ಮತ್ತೆ ವೈದ್ಯರನ್ನು ಭೇಟಿಯಾಗುವುದೇ ಇಲ್ಲ, ಅ ವ್ಯಕ್ತಿ ಮತ್ತೆ ಕುಡಿಯಲು ಪ್ರಾರಂಭಿಸಿದಾಗ ಮತ್ತೆ ವೈದ್ಯರ ಬಳಿ ಬರುತ್ತಾರೆ ಎನ್ನುತ್ತಾರೆ ಡಾ. ಅಜಿತಾ ದೇಸಾಯಿ.

ಡಾ. ಅಜಿತಾ ಅವರು ಹೇಳುತ್ತಾರೆ, ಒಬ್ಬವ್ಯಕ್ತಿ ಸಂಪೂಣ೯ವಾಗಿ ಕುಡಿತದಿಂದ ವಿಮುಖನಾಗಬೇಕಾದರೆ ರಿಹ್ಯಾಬ್‌ ಸೆಂಟರ್‌ಗೆ ದಾಖಲು ಮಾಡುವುದು ಉತ್ತಮ ಎಂದು.

ಡಾ. ಅಜಿತಾ ದೇಸಾಯಿ ಅವರದೇ ಆದ ಕುಶಲಂ ರಿಹ್ಯಾಬ್‌ ಸೆಂಟರ್‌ ನಲ್ಲಿ ನುರಿತ ಸೈಕಿಯಾಟ್ರಿಸ್ಟ್‌ಗಳು, ಸೈಕಾಲಿಜಿಸ್ಟ್‌ಗಳು, ದಾದಿಯರು, ಥೆರಪಿ ನೀಡುವವರು ಇದ್ದಾರೆ. ಉತ್ತಮ ಊಟ, ವಸತಿ, ಚಿಕಿತ್ಸೆ ಇಲ್ಲಿ ಲಭ್ಯ. ಕುಶಲಂ ಬಗ್ಗೆ ಮಾಹಿತಿಗಾಗಿ  94498-07489 ಸಂಪಕಿ೯ಸಬಹುದು.

ಡಾ. ದೇಸಾಯಿಯವರ ಕ್ಲೀನಿಕ್‌ ಭೇಟಿಗಾಗಿ  0836-2357040 ಗೆ ಸಂಪಕಿ೯ಸಬಹುದು.

ಮುಂದಿನ ಸಂಚಿಕೆಯಲ್ಲಿ ಕುಡಿತದ ಚಟದ ಬಗ್ಗೆ ಮತ್ತೊಬ್ಬ ತಜ್ಞ ವೈದ್ಯರು ತಮ್ಮ ಅನುಭವ ಹೇಳಲಿದ್ದಾರೆ.

WhatsApp Group Join Now
Telegram Group Join Now

Related Posts

error: Content is protected !!