ತುರ್ತು ಆಂಬ್ಯುಲೆನ್ಸ್ ಸೇವೆಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ
ಹುಬ್ಬಳ್ಳಿ: ಜೆ.ಎಸ್.ಡಬ್ಲೂ ಸ್ಟೀಲ್ ಹಾಗೂ ಹುಬ್ಬಳ್ಳಿಯ ಕಮಲ್‌ಟ್ರೇಡಿಂಗ್ ಕಾರ್ಪೋರೇಷನ್ ವತಿಯಿಂದ ಆರಂಭಿಸಲಾಗಿರುವ ತುರ್ತು ಆಂಬ್ಯಲೆನ್ಸ್ ಸೇವೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಧುರಾ ಕಾಲೋನಿಯ ಗೃಹ ಕಚೇರಿ ಬಳಿ ಚಾಲನೆ ನೀಡಿದರು.
ಹುಬ್ಬಳ್ಳಿ ಸುತ್ತಮತ್ತಲಿನ 30 ರಿಂದ 40 ಕಿ.ಮೀ. ವ್ಯಾಪ್ತಿಯಲ್ಲಿ ಆಂಬ್ಯಲೆನ್ಸ್ ಸೇವೆ ಕರ್ತವ್ಯ ನಿರ್ವಹಿಸುವುದು. ಧಾರವಾಡ ಜಿ್ಲಲ್ಲಾಡಳಿತದೊಂದಿಗೆ ಕೈ ಜೋಡಿಸಿರುವ ಸಂಸ್ಥೆ ಅಗತ್ಯವಿರುವ ಸಾರ್ವಜನಿಕರಿಗೂ ಆಂಬ್ಯುಲೆನ್ಸ್ ಸೇವೆ ಒದಗಿಸಲಿದೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಉಚಿತ ಆಂಬ್ಯುಲೆನ್ಸ್ ಸೇವೆ ಲಭ್ಯವಿರುವುದು. ಸಾರ್ವಜನಿಜರು ಆಪತ್ಕಾಲದಲ್ಲಿ ಮೊಬೈಲ್ ಸಂಖ್ಯೆಗಳಾದ 9742420611, 8496083312 ಹಾಗೂ 9988058136 ಕರೆ ಮಾಡಬಹದು.
ಆಂಬ್ಯುಲೆನ್ಸ್‌ಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಹೇಂದ್ರ ವಿಜಯ್‌ವರ್ಗೀಯ, ಶ್ರೀನಿವಾಸ ಕುಲಕರ್ಣಿ, ಕಮಲ್ ಕೆ ಮೆಹ್ತಾ, ಅಮೋಲ್ ಎಂ ಮೆಹ್ತಾ, ರೋಹನ್ ಮೆಹ್ತಾ ಸೇರಿದಂತೆ ಮತ್ತಿತರರು ಇದ್ದರು.