ಪ್ಯಾನ್ ಕಾಡ್‌೯ ಕಳೆದುಹೋದ್ರೆ ಹುಷಾರ್..
ಕಳೆದು ಹೋದ ಪ್ಯಾನ್ ಕಾರ್ಡ ಉಪಯೋಗಿಸಿಕೊಂಡು ತಾನೇ ಫಿರ್ಯಾದಿದಾರರಂತೆ ನಟಿಸಿ ಆನ್‌ಲೈನ್ ಮುಖಾಂತರ ಕ್ರೇಡಿಟ್ ಕಾರ್ಡಗೆ ಅಪ್ಲೆಮಾಡಿ ಸಿಟಿ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್‌ಗಳ ಕ್ರೇಡಿಟ್ ಕಾರ್ಡಗಳನ್ನು ಪಡೆದುಕೊಂಡು, ನಿಗದಿತ ಅವಧಿಯಲ್ಲಿ ಕ್ರೇಡಿಟ್ ಲೋನ್ ಪಾವತಿ ಮಾಡದೇ ಫಿರ್ಯಾದಿದಾರರ ಕ್ರೇಡಿಟ್ ಸ್ಕೋರ್ ಕಡಿಮೆ ಬರುವಂತೆ ಮಾಡಿ ಮೋಸ ಮಾಡಿದ ವ್ಯಕ್ತಿಯನ್ನು ಸಿಇಎನ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿಯ ಆರೋಪಿತನ ಪತ್ತೆ ಮಾಡುವ ಸಲುವಾಗಿ ಕೆ. ರಾಮರಾಜನ್ ಉಪ ಪೊಲೀಸ ಆಯುಕ್ತರು (ಕಾವಸು) ಹುಬ್ಬಳ್ಳಿ-ಧಾರವಾಡ, ರವರ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಎಮ್. ಎಸ್. ಹೂಗಾರ ರವರ ನೇತೃತ್ವದ ತಂಡವು ಖಚಿತ ಬಾತ್ಮಿ ಆಧಾರದ ಮೇಲೆ ಹಾಗೂ ತಾಂತ್ರಿಕ ವಿಧಾನದಿಂದ ತಪಾಸಣೆ ಕೈಗೊಂಡು ಕೃತ್ಯದಲ್ಲಿ ಭಾಗಿಯಾದ ಒಬ್ಬ ವ್ಯಕ್ತಿಯನ್ನು ದಸ್ತಗಿರಿ ಮಾಡಿ, ಆತನ ತಾಬಾದಲ್ಲಿಂದ ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್ ಫೋನ್ ಮತ್ತು ಒಂದು ಸಿಟಿ ಬ್ಯಾಂಕ್ , ಒಂದು ಇಂಡಸ್ ಇಂಡ್ ಬ್ಯಾಂಕ್ ಕ್ರೇಡಿಟ್ ಕಾರ್ಡಗಳನ್ನು ವಶಪಡಿಸಿಕೊಂಡು, ಆರೋಪಿತನಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿರುತ್ತಾರೆ. ಆರೋಪಿತನು ಸಧ್ಯ ನ್ಯಾಯಾಂಗ ಬಂಧನದಲ್ಲಿದಾನೆ. ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಎಮ್. ಎಸ್. ಹೂಗಾರ ಮತ್ತು ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತ ಲಾಭೂರಾಮ್ ಶ್ಲಾಘಿಸಿದ್ದಾರೆ.
https://okok.hubliexpress.com/%e0%b2%95%e0%b3%81%e0%b2%a1%e0%b2%bf%e0%b2%a4%e0%b2%a6-%e0%b2%9a%e0%b2%9f-%e0%b2%a8%e0%b2%bf%e0%b2%9c%e0%b2%b5%e0%b2%be%e0%b2%97%e0%b2%bf%e0%b2%af%e0%b3%82-%e0%b2%ac%e0%b2%bf%e0%b2%a1%e0%b2%b2/