State News

ಹುಬ್ಬಳ್ಳಿ-ಗಂಗಾವತಿ- ಹುಬ್ಬಳ್ಳಿ ಪ್ಯಾಸೆಂಜರ್‌ ರೈಲು ನಾಳೆಯಿಂದ ಪುನರಾರಂಭ

WhatsApp Group Join Now
Telegram Group Join Now

 

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಎಸ್‌.ಎಸ್‌.ಎಸ್‌.  ಹುಬ್ಬಳ್ಳಿ-ಗಂಗಾವತಿ- ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ಪ್ಯಾಸೆಂಜರ್‌ ರೈಲು ಸೇವೆಯನ್ನು ರೈಲು ಸಂಖ್ಯೆ 07381/07382 ಎಸ್‌.ಎಸ್‌.ಎಸ್‌. ಹುಬ್ಬಳ್ಳಿ-ಗಂಗಾವತಿ- ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ಆರಕ್ಷಣಾ ರಹಿತ ಸಾಮಾನ್ಯ ದರದ ಪ್ಯಾಸೆಂಜರ್‌ ವಿಶೇಷ ರೈಲು ಸೇವೆಯಾಗಿ ನಾಳೆಯಿಂದ (05.07) ರಿಂದ ಪುನರಾರಂಭಿಸಲಿದೆ.

ರೈಲು ಸಂಖ್ಯೆ 07381 ಎಸ್‌.ಎಸ್‌.ಎಸ್‌. ಹುಬ್ಬಳ್ಳಿ-ಗಂಗಾವತಿ ಆರಕ್ಷಣಾ ರಹಿತ ಪ್ಯಾಸೆಂಜರ್‌ ವಿಶೇಷ ರೈಲು ಎಸ್‌.ಎಸ್‌.ಎಸ್‌. ಹುಬ್ಬಳ್ಳಿಯಿಂದ 10:00 ಗಂಟೆಗೆ ಹೊರಡಲಿದ್ದು ಗಂಗಾವತಿಯನ್ನು 1:45 ಗಂಟೆಗೆ ತಲುಪಲಿದೆ.

ರೈಲು ಸಂಖ್ಯೆ 07382 ಗಂಗಾವತಿ – ಎಸ್‌.ಎಸ್‌.ಎಸ್‌. ಹುಬ್ಬಳ್ಳಿ ಆರಕ್ಷಣಾ ರಹಿತ ಪ್ಯಾಸೆಂಜರ್‌ ವಿಶೇಷ ರೈಲು ಗಂಗಾವತಿಯಿಂದ ೩:00 ಗಂಟೆಗೆ ಹೊರಡಲಿದ್ದು  ಎಸ್‌.ಎಸ್‌.ಎಸ್‌. ಹುಬ್ಬಳ್ಳಿಯನ್ನು ೭:00 ಗಂಟೆಗೆ ತಲುಪಲಿದೆ.

ಈ ರೈಲಿಗೆ ಶಿಶ್ವಿನಹಳ್ಳಿ, ಅಣ್ಣಿಗೇರಿ, ಹುಲಕೋಟಿ, ಗದಗ, ಹರ್ಲಾಪುರ, ಬನ್ನಿಕೊಪ್ಪ, ಭಾಣಾಪುರ, ಕೊಪ್ಪಳ, ಗಿಣಿಗೇರಾ, ಬೂದಗುಂಪಾ, ಜಬ್ಬಲಗುಡ್ಡ ಮತ್ತು ಚಿಕ್ಕಬೆಣಕಲ್‌ಗಳಲ್ಲಿ ನಿಲುಗಡೆಯನ್ನು ಒದಗಿಸಲಾಗಿದೆ.

ಎಲ್ಲ ಪ್ರಯಾಣಿಕರು ಕೇಂದ್ರ/ರಾಜ್ಯ ಸರ್ಕಾರಗಳು ಸೂಚಿಸಿರುವ ಕೋವಿಡ್‌ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಬೇಕು, ನೈರುತ್ಯ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now

Related Posts

1 of 103
error: Content is protected !!