Hubballi / Dharwad

ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆ: ಮತದಾರರ ಯಾದಿಯ ಕರಡು ಪ್ರತಿ ಬಿಡುಗಡೆ

WhatsApp Group Join Now
Telegram Group Join Now

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ೭೧ ಧಾರವಾಡ (ಭಾಗಶಃ), ೭೨ ಹುಬ್ಬಳ್ಳಿ-ಧಾರವಾಡ ಪೂರ್ವ, ೭೩ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಹಾಗೂ ೭೪ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತದಾರರ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಆಧರಿಸಿ, ಪಾಲಿಕೆಯ ವ್ಯಾಪ್ತಿಯಲ್ಲಿ ಒಟು ್ಟ ೮೨ ವಾರ್ಡುಗಳನ್ನು ರಚಿಸಲಾಗಿದೆ. ದಿನಾಂಕ: ೧೦.೦೪.೨೦೨೧ ರ ಮಿತಿಗೆ ೭೧ ಧಾರವಾಡ (ಭಾಗಶಃ), ೭೨ ಹುಬ್ಬಳ್ಳಿ-ಧಾರವಾಡ ಪೂರ್ವ, ೭೩ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಹಾಗೂ ೭೪ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತದಾರರ ಕ್ಷೇತ್ರಗಳಲ್ಲಿ ಒಟ್ಟು ೪,೦೪,೫೯೩ ಗಂಡು, ೪,೦೮,೫೮೪ ಹೆಣ್ಣು ಮತು ್ತ ೭೦ ಇತರೆ ಮತದಾರರು ದಾಖಲಿದ್ದು, ಒಟು ್ಟ ೮,೧೩,೨೫೭ ಮತದಾರರು ಇರುತ್ತಾರೆ. ಪಾಲಿಕೆಯ ೮೨ ವಾರ್ಡುಗಳಲ್ಲಿ ಒಟ್ಟು ೮೩೪ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ.

ವಾರ್ಡುಗಳ ಪ್ರಕಾರ ತಯಾರಿಸಲಾದ ವಾರ್ಡವಾರು ಕರಡು ಮತದಾರರ ಪಟ್ಟಿಗಳನ್ನು ದಿನಾಂಕ: ೨೮.೦೬.೨೦೨೧ ರಂದು ಪ್ರಕಟಿಸಲಾಗಿದ್ದು, ಸದರಿ ಮತದಾರರ ಪಟ್ಟಿಗಳಿಗೆ ಸಂಬಂಧಿಸಿದಂತೆ, ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಕಚೇರಿ ಅವಧಿಯಲ್ಲಿ ದಿನಾಂಕ: ೦೧.೦೭.೨೦೨೧ ರೊಳಗೆ

ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಥವಾ ಧಾರವಾಡ ತಹಶೀಲ್ದಾರ ಕಛೇರಿಯಲ್ಲಿ ಅಥವಾ ಮಹಾನಗರ ಪಾಲಿಕೆಯ ಎಲ್ಲ ವಲಯ ಕಚೇರಿಗಳಲ್ಲಿ ಅಥವಾ ನನ್ನ ಕಚೇರಿಯಲ್ಲಾಗಲಿ (ಹುಧಾಮಪಾ ಆಯುಕ್ತರ) ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಾಗಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ, ಎಂದು ಪ್ರಕಟಿಸಲು ತಿಳಿಸಲಾಗಿದೆ.

WhatsApp Group Join Now
Telegram Group Join Now

Related Posts

1 of 106
error: Content is protected !!