ಧಾರವಾಡ: ಜಿಲ್ಲಾಡಳಿತ ಕೋವಿಡ್ ಲಸಿಕಾ ಅಭಿಯಾನ ನಾಳೆ ಬುಧವಾರವೂ (೨೧/೦೭)ಮುಂದುವರೆಸಿದ್ದು, ಯಾರಾದರೂ ಫಲಾನುಭವಿಗಳು ಇನ್ನೂವರೆಗೂ ಲಸಿಕೆ ತೆಗೆದುಕೊಳ್ಳದೇ ಇದ್ದರೆ, ನಾಳೆ ನಿಮ್ಮ ಸಮೀಪದ ಆರೋಗ್ಯ ಕೇಂದ್ರ, ಆಸ್ಪತ್ರೆ, ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳಬಹುದು.
ಯಾವ ಯಾವ ಲಸಿಕಾ ಕೇಂದ್ರದಲ್ಲಿ ಎಷ್ಟು ವ್ಯಾಕ್ಸಿನ್ ಡೋಸ್ಗಳು ಲಭ್ಯಇವೆ ಎನ್ನುವದರ ಮಾಹಿತಿ ಲಗತ್ತಿಸಲಾಗಿದ್ದು ಸಾವ೯ಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದು. ಮಂಗಳವಾರ (೨೦/೦೭) ಸಂಜೆಯವರೆಗೆ ಒಟ್ಟು ೮,೬೬೦ ಡೋಸ್ಗಳು ಲಭ್ಯವಿದ್ದು ಅವು ಬುಧವಾರ ಲಸಿಕಾಕರಣಕ್ಕೆ ಬಳಕೆಯಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.