ಉತ್ತರ ಕನಾ೯ಟಕದ ಹಲವೆಡೆ ಕೆಲವು ದಿನಗಳಿಂದ ಮಳೆಯೂ ಬಿಟ್ಟು ಬಿಡದೇ ಸುರಿಯುತ್ತಿದ್ದು ಗುರುವಾರ ರಾತ್ರಿಯಿಂದ ಮಳೆ ಮತ್ತೆ ತೀವ್ರತೆ ಪಡೆದುಕೊಂಡಿದ್ದು ಶುಕ್ರವಾರ ಬೆಳಿಗ್ಗೆಯಿಂದ ಹಲವು ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರಿ ಮಳೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಟ್ಟುಬಿಡದೇ ವ್ಯಾಪಕ ಮಳೆಯಾಗುತ್ತಿದೆ.
ಹವಾಮಾನ ಇಲಾಖೆ ಶುಕ್ರವಾರವೂ ಸಹ ಮಳೆ ಮುಂದುವರೆಯಲಿದೆ ಎಂದು ತಿಳಿಸಿದೆ. ಆದರೆ ನಾಳೆಯಿಂದ ಮೋಡ ಕವಿದ ಹಾಗೂ ತಂಪಾದ ವಾತಾವರಣ ಮುಂದುವರೆಯಲಿದ್ದು ಮುಂದಿನ ಮೂರ್ನಾಲ್ಕು ದಿನ ಜಿಟಿ ಜಿಟಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.
ಹುಬ್ಬಳ್ಳಿ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಕೃಷಿ ಹಾಗೂ ಹವಾಮಾನ ತಜ್ಞ ಡಾ. ಆರ್ ಎಚ್ ಪಾಟೀಲ ಕಳೆದ ೧೫ ದಿನದಿಂದ ಮೋಡಕವಿದ, ತಂಪಾದ ವಾತಾವರಣ ಹಾಗೂ ಸತತ ಮಳೆಯಿಂದಾಗಿ ರೈತರು ಆತಂಕಕ್ಕೆ ಈಡಾಗಿದ್ದಾರೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದಲ್ಲಿಯೂ ಕೂಡಾ ಮೋಡಗಳು ಅಲ್ಲಿಯೇ ನಿಂತು ಮುಂದುವರೆಯದೇ ಇರುವದರಿಂದ ವ್ಯಾಪಕವಾದ ಮಳೆಯಾಗುತ್ತಿದೆ.
ಆದರೆ ಇದು ನಾಳೆಯಿಂದ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಡಾ. ಪಾಟೀಲ ಹೇಳಿದ್ದಾರೆ. ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ, ಹಾವೇರಿ, ಬಾಗಲಕೋಟ, ವಿಜಯಪುರ ಹಾಗೂ ಕಲ್ಬುಗಿ೯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಡಾ. ಆರ್ ಎಚ್ ಪಾಟೀಲ ಅವರು ರೈತರನ್ನು ಉದ್ದೇಶಿಸಿ ಮಾತನಾಡಿದ್ದು ಮುಂದಿನ ಮೂರ್ನಾಲ್ಕು ದಿನ ಮಳೆ ಹೇಗಿರಲಿದೆ ಎಂದು ಹೇಳಿದ್ದಾರೆ ಅವರು ಏನು ಹೇಳಿದ್ದಾರೆಂದು ನೋಡೋಣ.