ಗದಗ : ರಾಜ್ಯ ಸರ್ಕಾರ , ಶಾಸಕರ ಅನುದಾನ ಹಾಗೂ ವಿವಿಧ ದಾನಿಗಳಿಂದ ಜಿಲ್ಲಾಡಳಿತಕ್ಕೆ ಪೂರೈಕೆಯಾಗಿದ್ದ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಗಳನ್ನು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಸಾಂಕೇತಿಕವಾಗಿ ವಿವಿಧ ತಾಲೂಕುಗಳಿಗೆ ವಿತರಣೆ ಮಾಡಿದರು.
ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರ , ಶಾಸಕರ ಅನುದಾನ ಹಾಗೂ ವಿವಿಧ ದಾನಿಗಳಿಂದ ಜಿಲ್ಲಾಡಳಿತಕ್ಕೆ 200 ಕಾನ್ಸನ್ ಟ್ರೇಟರ್ ಲಭ್ಯವಾಗಿದೆ. ಇವುಗಳನ್ನು ಆದ್ಯತೆ ಮೇರೆಗೆ ಜಿಮ್ಸ್ ಸೇರಿದಂತೆ ವಿವಿದ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಲಾದ ಆಕ್ಸಿಜನ್ ಕಾನ್ಸ್ನಟ್ರೇಟರ್‌ಗಳನ್ನು ಬಳಸಿಕೊಂಡು ಕೋವಿಡ್ ಸೋಂಕಿತರ ಜೀವಹಾನಿ ತಪ್ಪಿಸಬೇಕೆಂದು ತಿಳಿಸಿದರು.
ವೈದ್ಯಕೀಯ ಸುರಕ್ಷತಾ ಪರಿಕರಗಳನ್ನು ಅಗತ್ಯ ಸಂದರ್ಭಗಳಲ್ಲಿ ಆಶಾ ಹಾಗೂ ಎ ಎನ್ ಎಂ ಗಳು ಬಳಸುವ ಮೂಲಕ ಸೋಂಕಿನಿAದ ರಕ್ಷಿಸಿಕೊಳ್ಳಬೇಕು. ಸೋಂಕಿನ ಹರಡುವಿಕೆ ತಡೆಗಟ್ಟುವಲ್ಲಿ ಸುರಕ್ಷತಾ ಕ್ರಮಗಳನ್ನುಎಲ್ಲರೂ ಪಾಲಿಬೇಕೆಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ನರಗುಂದ , ಮುಂಡರಗಿ, ರೋಣ ತಾಲೂಕಾ ಆಸ್ಪತ್ರೆಗಳಿಗೆ 10 ಲೀಟರ್‌ಗಳ ತಲಾ 3 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ನೀಡಲಾಯಿತು. ಅದರಂತೆ ಬೆಟಗೇರಿ, ಲಕ್ಷ್ಮೇಶ್ವರ , ಗಜೇಂದ್ರಗಡ, ಶಿರಹಟ್ಟಿ ಆಸ್ಪತ್ರೆಗಳಿಗೆ 10 ಲೀಟರ್ ಸಾಮರ್ಥ್ಯದ ತಲಾ 2 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನು ವಿತರಿಸಲಾಯಿತು. ಜಿಲ್ಲೆಯ 38 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 5 ಲೀಟರ್ ಸಾಮರ್ಥ್ಯದ ತಲಾ ಒಂದೊAದು ಆಕ್ಸಿಜನ್ ಕಾನ್ಸನ್‌ಟ್ರೇಟರ್ ನೀಡಲಾಗಿದೆ. ಜೊತೆಗೆ 2000 ಕೋವಿಡ್ ಮೆಡಿಸಿನ್ ಕಿಟ್ ಹಾಗೂ 1000 ಫೇಸ್ ಶೀಲ್ಡ್ ಗಳನ್ನು ಆಶಾ ಹಾಗೂ ಎ.ಎನ್.ಎಂ.ಓಗಳಿಗೆ ನೀಡಲು ಹಂಚಿಕೆ ಮಾಡಲಾಗಿದೆ. ಇದರೊಟ್ಟಿಗೆ ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಿಗೆ ಡಾಕ್ಸಿಸೈಕ್ವಿನ್ , ಝಿಂಕೋವಿಟ್ ಹಾಗೂ ವಿಟಾಮಿನ್ ಸಿ ಮಾತ್ರೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ, ಜಿಲ್ಲಾ ಆರ್.ಸಿ.ಎಚ್. ಡಾ.ಬಿ.ಎಂ.ಗೊಜನೂರ, ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ.ಕೆ. ಭಜಂತ್ರಿ, ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ ಕರಮುಡಿ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು
ಆಕ್ಸಿಜನ್ ಕಾನ್ಸನ್‌ಟ್ರೇಟರ್ ವಿತರಿಸಿದ ಗದಗ ಜಿಲ್ಲಾಧಿಕಾರಿ
