ನವದೆಹಲಿ : ನವ ದೆಹಲಿಯಿಂದ ಇಂದು ನಡೆದ ವೆಬಿನಾರ್ ಕಾರ್ಯಕ್ರಮದಲ್ಲಿ ಕರ್ನಾಟಕದ ಮೂರು ತೋಟಗಾರಿಕಾ ಬೆಳೆಗಳು ಇಂಡೋ-ಇಸ್ರೇಲ್ ಸಹಭಾಗಿತ್ವದ ಉತ್ಕೃಷ್ಟತೆ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿಷ್ಠಿತ ಕೋಲಾರದ ಮಾವು, ಬಾಗಲಕೋಟೆಯ ದಾಳಿಂಬೆ ಹಾಗೂ ಧಾರವಾಡದ ತರಕಾರಿ ಬೆಳೆಗಳ ಉತ್ಕೃಷ್ಟತೆ ಕೇಂದ್ರಗಳನ್ನು (ಅeಟಿಣಡಿes oಜಿ ಇxಛಿeಟಟeಟಿಛಿe) ಇಂದು ಉದ್ಘಾಟಿಸಲಾಯಿತು. ಒಟ್ಟಾರೆ ಮೂರು ಕೇಂದ್ರಗಳು ಸುಮಾರು ೧೮ ಕೋಟಿ ಮೌಲ್ಯದ ಯೋಜನೆಗಳಾಗಿವೆ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ.
ಭಾರತ ದೇಶದ ಆರ್ಥಿಕ ಹಾಗು ಆಹಾರ ಭದ್ರತೆಯಲ್ಲಿ ತರಕಾರಿಗಳ ಪಾತ್ರ ಮಹತ್ತದ್ದಾಗಿದೆ. ದೇಶದ ತರಕಾರಿ ಉತ್ಪಾದನೆ ಮುಖ್ಯವಾಗಿ ಹವಾಮಾನವನ್ನು ಅವಲಂಬಿಸಿದೆ. ಇದರಿಂದಾಗಿ ತರಕಾರಿಗಳ ಬೆಳೆಗಳು ಕೂಡಾ ಏರಿಳಿತವಾಗುತ್ತವೆ. ತರಕಾರಿ ಬೇಸಾಯವನ್ನು ಒಂದು ಪ್ರಮುಖ ಆರ್ಥಿಕ ಚಟುವಟಿಕೆಯಾಗಿ ರೂಪಿಸುವುದು ಇಂದಿನ ಆಧುನಿಕ ತಂತ್ರಜ್ಞಾನದ ಪ್ರಮುಖ ಸವಾಲಾಗಿದೆ. ನಿಖರ ಬೇಸಾಯ ತಾಂತ್ರಿಕತೆಯ ಮುಖ್ಯ ಉದ್ದೇಶ ತರಕಾರಿಗಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಜಿಸುವುದಾಗಿದೆ.
ಸಂರಕ್ಷಿತ ರಚನೆಗಳು ವಾತಾವರಣವನ್ನು ಬದಲಾವಣೆ ಮಾಡುವುದಲ್ಲದೆ ಗಾಳಿ, ಮಳೆ ಹಾಗೂ ಕೀಟಗಳಿಂದ ರಕ್ಷಣೆಯನ್ನು ಒದಗಿಸುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರ ಸ್ಥಾಪನೆಯಾಗಿದ್ದು, ಸಂರಕ್ಷಿತ ರಚನೆಗಳಲ್ಲಿನ ಬೇಸಾಯ ಉತ್ತಮ ಗುಣಮಟ್ಟ, ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ನೆರವಾಗುವುದಲ್ಲದೇ, ಅಕಾಲಿಕ ವಾತಾವರಣದಲ್ಲಿ ತರಕಾರಿ ಬೇಸಾಯವನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭವನ್ನು ಪಡೆಯಲು ನೆರವಾಗುತ್ತದೆ.
ಧಾರವಾಡದ ತರಕಾರಿ ಉತ್ಕೃಷ್ಟ ಕೇಂದ್ರವು ಕುಂಬಾಪುರ ತೋಟಗಾರಿಕಾ ಕ್ಷೇತ್ರದಲ್ಲಿ ಸ್ಥಾಪನೆಯಾಗಿದ್ದು, ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಸ್ರೇಲ್ ತಂತ್ರಜ್ಞಾನವನ್ನು ರಾಜ್ಯದಲ್ಲಿ ಬಳಕೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಈ ಉತ್ಕೃಷ್ಟತೆ ಕೇಂದ್ರವನ್ನು ಸ್ಥಾಪನೆ ಮಾಡುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ತರಕಾರಿ ಬೆಳೆಯ ಈ ಇಂಡೋ-ಇಸ್ರೇಲ್ ಉತ್ಕೃಷ್ಟತೆ ಕೇಂದ್ರವು ೨೦ ಎಕರೆ ಜಾಗದಲ್ಲಿ ಸುಮಾರು ೭.೬ ಕೋಟಿ ವೆಚ್ಚದಲ್ಲಿ ನಿಮಾಣವಾಗಿದ್ದು, ಸುಸಜ್ಜಿತ ಕಟ್ಟಡದ ನಿರ್ಮಾಣ ಕಾರ್ಯ ಮುಗಿದಿದ್ದು, ಇನ್ನಿತರ ಸೌಲಭ್ಯಗಳ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿನ ಈ ಕೇಂದ್ರದಲ್ಲಿ ೧೫೦೦ ಚ.ಅಡಿ ಕ್ಷೇತ್ರದಲ್ಲಿ ಉತ್ಕೃಷ್ಟ ತಂತ್ರಜ್ಞಾನದಲ್ಲಿ ಪಾಲಿ ಹೌಸ್ (ಸಸಿ ನಿರ್ಮಾಣ ಕಟ್ಟಡ) ರೋಗರಹಿತ ಉತ್ತಮ ಗುಣಮಟ್ಟದ ಮಣ್ಣು ರಹಿತ ಪದ್ದತಿಯಿಂದ ತರಕಾರಿ ಸಸಿಗಳನ್ನು ಉತ್ಪಾದಿಸಲಾಗುವುದು. ಈ ಕೇಂದ್ರವು ವರ್ಷಕ್ಕೆ ಸುಮಾರು ೨೫ ಲಕ್ಷ ಸಸಿಗಳನ್ನು ಬೆಳೆಸುವ ಸಾಮರ್ಥ್ಯ ಹೊಂದಿದೆ.
ನೈಸರ್ಗಿಕ ಹವಾಮಾನದ ಎರಡು ೧೨೦೦ ಚ. ಅಡಿಯ ಪಾಲಿ ಹೌಸ್ ನಿರ್ಮಿಸಲಾಗುವುದು. ಇದರೊಂದಿಗೆ ಎರಡು ೧೦೦೦ ಚ. ಅಡಿಯ ಕೀಟ ವಿರೊಧಿ ನೆಟ್ (ಬಲೆ) ಮನೆಗಳನ್ನು ನಿರ್ಮಿಸಲಾಗುವುದು. ೨೬೪ ಚ. ಅಡಿಯ ೪ ನಡೆದಾಡಬಹುದಾದ ಸುರಂಗಗಳನ್ನು ನಿರ್ಮಿಸುವುದರ ಜೊತೆಗೆ ಹವಾಮಾನ ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಕೇಂದ್ರದಿAದ ಸ್ಥಳೀಯ ಯುವಕರಿಗೆ, ಅಧಿಕಾರಿಗಳಿಗೆ ಹಾಗೂ ಉದ್ಯಮಿಗಳಿಗೆ ವೈಜ್ಞಾನಿಕವಾಗಿ ಸಾಗುವಳಿ ಮಾಡಲು ತರಬೇತಿಯನ್ನು ನೀಡಲಾಗುವುದು.
ಈ ಕೇಂದ್ರದಲ್ಲಿ ಸೆಮಿನಾರ್ (ವಿಚಾರಗೋಷ್ಠಿ) ಭವನ ಹಾಗೂ ತರಬೇತಿಗೆ ಆಯ್ಕೆಯಾದವರಿಗೆ ಊಟ-ವಸತಿಗೆ ಬೇಕಾಗುವ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಎಲ್ಲ ಅನೂಕೂಲತೆಗಳಿಂದ ರೈತರಿಗೆ ರೋಗರಹಿತ ಉತ್ತಮ ಗುಣಮಟ್ಟದ ತರಕಾರಿ ಸಸಿಗಳು ಒದಗಿಸುವ ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ ಎಂದು ಜೋಶಿ ತಿಳಿಸಿದ್ದಾರೆ.
ಈಗಾಗಲೇ ಈ ಕೇಂದ್ರದಿAದ ೫೦೦ ರೈತರು ತರಬೇತಿಯನ್ನು ಪಡೆದುಕೊಂಡಿದ್ದಾರೆ. ಹಾಗೂ ೨೦ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಈ ಉತ್ಕೃಷ್ಟ ಕೇಂದ್ರದಲ್ಲಿ ಕೃಷಿ ಹೊಂಡ, ದನದ ಕೊಟ್ಟಿಗೆ, ಬಯೋ ಡೈಜ್ಜೆಸರ್ ನಿರ್ಮಾಣ ಮಾಡಲಾಗುತ್ತಿದೆ. ಉಚಿzebo ಚಿಟಿಜ hಥಿಜಡಿoಠಿhoಟಿiಛಿs ಘಟಕ ಪ್ರಗತಿಯ ಹಂತದಲ್ಲಿದೆ. ತೆರೆದ ಪ್ರದೇಶದಲ್ಲಿ Weಚಿಣheಡಿ Sಣಚಿಣioಟಿ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಗೋಡಂಬಿ ತಾಕಿಗೆ ಬೋರ್ ವೆಲ್ ನಿಂದ ಪೈಪ್ ಲೈನ್ ಅಳವಡಿಕೆ ಮಾಡಲಾಗಿದೆ.
ಈ ಕೇಂದ್ರದ ಪ್ರಯೋಜನವನ್ನು ಜಿಲ್ಲೆಯ ರೈತರು ಪಡೆದುಕೊಳ್ಳಲು ಜೋಶಿ ಕೋರಿದ್ದಾರೆ.
ಈಗಾಗಲೇ ರಾಷ್ಟಿçÃಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ಇಂಡೋ-ಇಸ್ರೇಲ್ ಸಹಭಾಗಿತ್ವದಲ್ಲಿ ಹಣ್ಣು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರಗಳ ಪ್ರಾರಂಭದಿAದ ಕೋಲಾರ ಭಾಗದಲ್ಲಿ ಮಾವು ಉತ್ಕೃಷ್ಟ ಕೇಂದ್ರ, ಬಿಜಾಪುರ, ಬಾಗಲಕೋಟೆ ಭಾಗದಲ್ಲಿ ದಾಳಿಂಬೆ ಉತ್ಕೃಷ್ಟ ಕೇಂದ್ರ ಸ್ಥಾಪಿಸಿ ಉತ್ತಮ ಗುಣಮಟ್ಟದ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲು ರೈತರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ರೈತರ ಬದುಕನ್ನು ಹಸನಾಗಿಸಲು, ಅವರ ಬಾಳಿನಲ್ಲಿ ಚೈತನ್ಯ ತುಂಬಲು ಈ ಕೇಂದ್ರಗಳು ವರದಾನವಾಗಲಿದೆ ಎಂದೂ ಜೋಶಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಸ್ಥಾಪನೆಯಾಗಲಿರುವ ಈ ಕೇಂದ್ರವು ಅಂತರಾಷ್ಟಿçÃಯ ಮಟ್ಟದಲ್ಲಿ ನಿರ್ಮಾಣವಾಗಿದ್ದು, ಇದರಿಂದ ಜಿಲ್ಲೆಯ ರೈತರಿಗೆ ತೊಟಗಾರಿಕಾ ಆಸಕ್ತಿ ಹೊಂದಿರುವ ಯುವಕರಿಗೆ ಉದ್ದಿಮೆದಾರರಿಗೆ ಅನುಕೂಲವಾಗಲಿದ್ದು, ರಾಷ್ಟçದಲ್ಲಿಯೇ ಅತ್ಯಂತ ಪ್ರಮುಖ ಕೇಂದ್ರವಾಗಲಿದೆ. ರಾಜ್ಯಕ್ಕೆ ಮೂರು ಉತ್ಕೃಷ್ಟತೆ ಕೇಂದ್ರಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಾಗೂ ಈ ಯೊಜನೆಯ ಸಹಭಾಗಿತ್ವ ಹೊಂದಿದ ಇಸ್ರೇಲ್ ಅಧಿಕಾರಿಗಳಿಗೆ ಹಾಗೂ ಇಸ್ರೇಲ್‌ನ ಭಾರತದ ರಾಯಭಾರಿ, ಶ್ರೀ ರೋನ್ ಮಾಲ್ಕಾ ಹಾಗೂ ರಾಜ್ಯ ತೋಟಗಾರಿಕಾ ಸಚಿವ. ಶಂಕರ್, ಇವರುಗಳಿಗೆ ಸಚಿವ ಶ್ರೀ ಜೋಶಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಇಸ್ರೇಲ್‌ನ ಅಂತರಾಷ್ಟಿçÃಯ ಸಂಸ್ಥೆ ಮಶಾವ್‌ನ ಮಾರ್ಗದರ್ಶಕರು, ಕರ್ನಾಟಕದ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಮತ್ತು ಇಲಾಖೆಯ ಮುಖ್ಯ ಕಾರ್ಯದರ್ಶಿಗಳೂ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.