State News

ಡಾ. ಸತೀಶ ಇರಕಲ್ ಇವರಿಗೆ ಮುಖ್ಯಮಂತ್ರಿಗಳಿಂದ ಗೌರವ

WhatsApp Group Join Now
Telegram Group Join Now

ಧಾರವಾಡ: ಧಾರವಾಡದ ಖ್ಯಾತ ಎಲವು-ಕೀಲು ತಜ್ಞ ಡಾ. ಸತೀಶ ಇರಕಲ್ ಅವರು ಕಳೆದ ೧೧ ವಷ೯ಗಳಿಂದ ಹೊಂಗಾರ್ಡ ಸ್ಟಾಪ್ ಆಫೀಸರ (ಮೆಡಿಕಲ್) ಆಗಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ೨೦೨೦-೨೧ ರಲ್ಲಿ ಸಿವೀಲ್ ಡೀಫೆನ್ಸ ಚೀಫ್‌ ವಾರ್ಡನ್‌ರಾಗಿ ಕರ್ನಾಟಕ ಸರ್ಕಾರದಿಂದ ನೇಮಕವಾಗಿದ್ದಾರೆ. ಅವರಿಗೆ  ೨೦೨೦ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಮಂಗಳವಾರ ವಿಧಾನಸೌಧ ಬೆಂಗಳೂರು ಸಭಾಂಗಣದಲ್ಲಿ ಪ್ರದಾನ ಮಾಡಿದರು.

ಡಾ. ಇರಕಲ್‌ ಇವರು ಕೋವಿಡ್‌ ಮೊದಲ ಹಾಗೂ ಎರಡನೇಯ ಅಲೆಯಲ್ಲಿ ತಮ್ಮ ವೈದ್ಯಕೀಯ ಸೇವೆಯಿಂದ ಜನರ ಜೀವ ಉಳಿಸಿದರಲ್ಲದೇ, ಅಪಘಾತ, ಕಟ್ಟಡ ದುರಂತ, ಪ್ರವಾಹ ಸಂದಭ೯ಗಳಲ್ಲಿ ಜೀವರಕ್ಷಣೆ ಕಾಯ೯ಗಳ ಮೂಲಕ ಗಮನ ಸೆಳೆದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಜನರಿಗೆ ಅನೂಕೂಲವಾಗಲೆಂದು, ಪೋಲಿಸ್ ಇಲಾಖೆಗೆ ರೂ ೪೦ ಲಕ್ಷ ವೆಚ್ಚದ ಹೈಟೆಕ್ ಕಾರ್ಡಿಯಾಕ್ ಕೇರ್‌ ಆಂಬ್ಯೂಲೇನ್ಸ ರೋಟರಿ ಫೌಂಡೇಶನ ಗ್ಲೋಬಲ್‌ ಪ್ರೋಜೆಕ್ಟನೊಂದಿಗೆ ಕೊಡುಗೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ರೋಟರಿ ಕೋವಿಡ್‌  ವಾರ್ಡನ್ನುರೋಟರಿ ಮುಖಾಂತರ ಮಾಡಿಕೊಟ್ಟು ಜನರಿಗೆ ಸಹಾಯ ಮಾಡಿದ್ದಾರೆ.

ಇವರ  ಸೇವಾ ಭಾವನೆ, ಜನರ ಆರೋಗ್ಯದ ಕಾಳಜಿ, ಉಚಿತ ಆರೋಗ್ಯ ತಪಾಸಣೆ ಶಿಬಿರ ಇನ್ನು ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಇವರಿಗೆ ೨೦೨೦ ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದೆ.

 

WhatsApp Group Join Now
Telegram Group Join Now

Related Posts

1 of 104
error: Content is protected !!