ಹುಬ್ಬಳ್ಳಿ: ನೇತ್ರ ತಜ್ಞ, ಕಿಮ್ಸ್‌ನ ವೈದ್ಯಕೀಯ ಉಪಅಧೀಕ್ಷಕ ಡಾ. ರಾಜಶೇಖರ್ ದ್ಯಾಬೇರಿ ಅವರ ತಂದೆ ಪಿ.ಬಿ ವಾಲಿಕಾರ ಸಾ| ದ್ಯಾಬೇರಿ, ವಿಜಯಪುರ ಜಿಲ್ಲೆ, ಅವರು ನಿನ್ನೆ(೦೪/೦೮/೨೦೨೧) ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾದರು.
ಅವರ ಅಂತ್ಯಕ್ರಿಯೆ ಇಂದು ನೇರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ದ್ಯಾಬೇರಿ ಸರ್ ಎಂದೇ ಪ್ರಖ್ಯಾತರಾಗಿದ್ದ ಪಿಬಿ ವಾಲಿಕಾರ ಅವರು ಲಕ್ಷಾಂತರ ಮಕ್ಕಳ ಬಾಳಲ್ಲಿ ಅಕ್ಷರ ಹಣತೆ ಬೆಳಗಿದವರು. ಸಂಗನಬಸವ ಪ್ರೌಢಶಾಲೆ ತಾಂಬಾ ದಲ್ಲಿ ಮುಖ್ಯ ಶಿಕ್ಷಕ ನಿವೃತ್ತರಾಗಿದ್ದ ಇವರಿಗೆ ಡಾ.ರಾಜಶೇಖರ್ ದ್ಯಾಬೇರಿ ಸೇರಿದಂತೆ ಇನ್ನೂ ನಾಲ್ಕು ಜನ ಮಕ್ಕಳಿದ್ದಾರೆ. ದ್ಯಾಬೇರಿ ಸರ್ ಅವರು ಅಪಾರ ಬಂಧುಬಳಗ, ಶಿಷ್ಯವೃಂದ ವನ್ನು ಅಗಲಿದ್ದಾರೆ.