ಹುಬ್ಬಳ್ಳಿ ವಿಜಯ್ ನಗರ ಬಡಾವಣೆಯ ಖ್ಯಾತ ಸಾಹಿತಿ ಹಾಗೂ ಸುಶಿಲ್ ಪತ್ರಿಕೆ ಸಂಪಾದಕ ಎಮ್ ಎಮ್ ಕನಕೇರಿ ಇಂದು (04-07) ಬೆಳಿಗ್ಗೆ ತಮ್ಮ ೯೦ ನೇ ವಯಸ್ಸಿನಲ್ಲಿ ನಿಧನರಾದರು.
ಮೃತರು ಪತ್ನಿ, ನಾಲ್ಕು ಜನ ಪುತ್ರಿಯರು, ಒಬ್ಬ ಸೊಸೆ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಎಮ್ ಎಮ್ ಕನಕೇರಿ ಅವರು ಸುಶೀಲ್ ಪತ್ರಿಕೆಯನ್ನು ಕಳೆದ ೫೦ ವರ್ಷಗಳಿಂದ ಬಹಳಷ್ಟು ಕಷ್ಟ ಪಟ್ಟು ಪ್ರಿಂಟ್ ಮಾಡಿಸಿ ಎಲ್ಲ ಸಾಹಿತ್ಯ ಹಾಗೂ ಅವರ ಸ್ನೇಹಿತರಿಗೆ ತಲುಪಿಸುತ್ತಾ ಬಂದಿದ್ದರು. ಹುಬ್ಬಳ್ಳಿ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು.ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಿತು. ( ೧೦-೬-೨೦೧೮ ಶ್ರೀ ರಂಭಾಪುರೀ ಕಲ್ಯಾಣ ಮಂಟಪದಲ್ಲಿ)
ಎಮ್ ಎಮ್ ಕನಕೇರಿ ತಮ್ಮನ್ನು ಸಾಹಿತ್ಯ- ಪತ್ರಿಕಾ ವೃತ್ತಿಯಲ್ಲಿ ಅದ್ಭುತವಾಗಿ ತೊಡಗಿಸಿಕೊಡಿರುವ ಹುಬ್ಬಳ್ಳಿಯ ಹಿರಿಯರು. ಅವರ ಸುಶೀಲ್ ಮಾಸ ಪತ್ರಿಕೆ ಈಗ ೫೧ ದ ವಸಂತಗಳ ಸಂಭ್ರಮ.ಓರ್ವ ವ್ಯಕ್ತಿಯ ಸಾಹಿತ್ಯ ತಪಸ್ಸು ನಿಷ್ಟೆಯಿಂದ ನಡೆದ ಉಜ್ವಲ ಉದಾಹರಣೆ ಕನಕೇರಿ ಈ ಕಾಯಕ .
ಧಾರವಾಡ ದಲ್ಲಿ ಡಿ ಟಿ ಪಿ – ಮುದ್ರಣ. ಮರಳಿ ಹುಬ್ಬಳ್ಳಿ ಗೆ ಗಂಟು. ನಂತರ ವಿಳಾಸ ಲಗತ್ತಿಸಿ ಸುಶೀಲ್ ಪೋಸ್ಟ್ ಆಫೀಸ್ ನೆತ್ತ ರವಾನೆ. ಎಲ್ಲವನ್ನೂ ಓರ್ವರೇ ನಿಷ್ಠೆಯಿಂದ ಮಾಡುತಿದ್ದ ಕನಕೇರಿ ಅವರು ನಮ್ಮನ್ನು ಆಗಲಿದ್ದು ತುಂಬಲಾರದ ನಷ್ಟ.
ಈ ತಿಂಗಳ ಸಂಚಿಕೆಯಲ್ಲಿ ನನ್ನ ಬಗ್ಗೆ ಸಹಿತ ಬರೆದಿದ್ದರು. ಇವತ್ತು ಅವರ ಸಾವಿನ ಸುದ್ದಿ ತಿಳಿದು ಮನಸ್ಸಿಗೆ ಬಹಳ ದುಃಖವಾಯಿತು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಡಾ. ಲಿಂಗರಾಜ ಅಂಗಡಿ, ಪ್ರೊ.ಕೆ ಎಸ್ ಕೌಜಲಗಿ, ಡಾ. ಜಿನದತ್ ಹಡಗಲಿ, ಪ್ರೊ ಎಸ್ ಎಸ್ ದೊಡಮನಿ, ಪ್ರೊ ಕೆ ಎ ದೊಡಮನಿ , ಬಿ ಎಸ್ ಮಾಳವಾಡ, ಮೃತ್ಯುಂಜಯ ಮಟ್ಟಿ, ಉದಯಚಂದ ದಿಂಡವಾರ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.