ಇಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ರಾಣಿಚೆನ್ನಮ್ಮ ಬ್ಲಾಕ್ ಹಾಗೂ ನವನಗರ ಬ್ಲಾಕ ಕಾಂಗ್ರೆಸ್ ನೇತೃತ್ವದಲ್ಲಿ ಧಾರವಾಡ ಟೋಲ್ ನಾಕಾದಿಂದ ಎಲ್ಲ ಮಾರ್ಕೆಟ್ ನಲ್ಲಿ ಸುತ್ತಿ ಕಲಾಭವನದ ವರೆಗೆ ಸೈಕಲ್ ತುಳಿಯುವುದರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಇಸ್ಮಾಯಿಲ್ ತಮಟಗಾರ, ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ನಾಗರಾಜ ಗೌರಿ, ಪಾಲಿಕೆಯ ಮಾಜಿ ಮಹಾಪೌರ ದೀಪಕ್ ಚಿಂಚೋರೆ, ದೇವಕಿ ಯೋಗಾನಂದ, ಬ್ಲಾಕ್ ಅಧ್ಯಕ್ಷರುಗಳಾದ ಬಸವರಾಜ್ ಮಲಕಾರಿ, ಬಸವರಾಜ ಕಿತ್ತೂರು, ಚಿದಾನಂದ್ ಶೀಶನಲ್ಲಿ, ಹೇಮಂತ ಗುರ್ಲಿಹೊಸೂರ್, ಪಿ ಹೆಚ್ ನೀರಲಕೇರಿ, ಮಹಾವೀರ್ ಶಿವಣ್ಣವರ್, ಮಂಜುನಾಥ್ ಕಟ್ಟಿ, ಮಜುನಾಥ ಬಡಕುರಿ, ಪರಶುರಾಮ್ ಮಾನೆ, ಮುತ್ತು ರಾಯನಾಯ್ಕರ್ , ವೆಂಕಟೇಶ್ ವೇರ್ಣೇಕರ್ ,ಅಶೋಕ ತುರೈದಾರ್, ಸ್ವಾತಿ ಮಳಗಿ, ಅಬ್ದುಲ್ ದೇಸಾಯಿ , ಆತ್ಮನಂದ್ ತಳವಾರ, ಆನಂದ ಸಿಂಗನಾಥ್, ವಸಂತ ಅರ್ಕಾಚಾರಿ, ಶ್ರೀಧರ್ ಶೇಟ್ ,ದಾದಾಪೀರ್ ಹಂಚಿನಮನಿ ಇನ್ನಿತರರು ಉಪಸ್ಥಿತರಿದ್ದರು