spot_img
spot_img
spot_img
spot_img
22 C
Hubli
Friday, September 30, 2022
HomeStateಗದಗ ಜಿಲ್ಲೆಯಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆ ಹೋಗಿ ಬಂದವರಿಗೆ ಕೋವಿಡ್ ತಪಾಸಣೆ: ಡಿಸಿ ಸುಂದರೇಶಬಾಬು

ಗದಗ ಜಿಲ್ಲೆಯಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆ ಹೋಗಿ ಬಂದವರಿಗೆ ಕೋವಿಡ್ ತಪಾಸಣೆ: ಡಿಸಿ ಸುಂದರೇಶಬಾಬು

 

ಗದಗ : ದಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ಕಳೆದ 15 ದಿನದಲ್ಲಿ ಚಿಕಿತ್ಸೆಗೆ ಹೋಗಿ ಬಂದ ಜಿಲ್ಲೆಯ ರೋಗಿಗಳ ಪಟ್ಟಿಯನ್ನು ಪಡೆದು ಅವರ ಆರೋಗ್ಯ ತಪಾಸಣೆ ನಡೆಸಬೇಕು. ಜೊತೆಗೆ ರೋಗಿಗಳೊಂದಿಗೆ ಆಸ್ಪತ್ರೆಗೆ ತೆರಳಿದವರಿಗೂ ಮತ್ತು ಕುಟುಂಬದ ಸದಸ್ಯರೆಲ್ಲರಿಗೂ ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು ಅವರು ಸೂಚಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ  ಕೋವಿಡ್ ನಿಯಂತ್ರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧಾರವಾಡ ಜಿಲ್ಲೆಯ ಎಸ್.ಡಿ.ಎಂ. ಆಸ್ಪತ್ರೆಯ ಓಪಿಡಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಜಿಲ್ಲೆಯ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಅಲ್ಲಿಗೆ ದಾಖಲೆ ಮಾಡಬಾರದು ಎಂದರು.

 

ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಇತ್ತೀಚಿನ ಮಾರ್ಗಸೂಚಿಗಳ ಕಡ್ಡಾಯ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಕೇರಳ ಮತ್ತು ಮಹಾರಾಷ್ಟç ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಮೇಲೆ ನಿಗಾ ವಹಿಸಬೇಕು ಹಾಗೂ ಎರಡು ಡೋಸ್ ಲಸಿಕೆಯಾಗಿರುವ ಬಗ್ಗೆ ಮತ್ತು ಕೋವಿಡ್ ಪರೀಕ್ಷೆಗೆ ಒಳಪಟ್ಟಿರುವ ಕುರಿತು ಪ್ರಮಾಣ ಪತ್ರ  ಹೊಂದಿರಬೇಕು.  ಹೊರರಾಜ್ಯದಿಂದ ಆಗಮಿಸಿದವರು ಕಡ್ಡಾಯವಾಗಿ  ಕ್ವಾರಂಟೈನ್ ಗೆ ಒಳಗಾಗುವಂತೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು.

 

ಜಿಲ್ಲೆಗೆ ಕಳೆದ 16 ದಿನಗಳ ಹಿಂದೆ ಕೇರಳದಿಂದ ಆಗಮಿಸಿದ ವಿದ್ಯಾರ್ಥಿಗಳನ್ನು  ಗುರುತಿಸಿ  ಅವರಿಗೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್.ಪರೀಕ್ಷೆಗೆ ಒಳಪಡಿಸಬೇಕು ಮತ್ತು ಹಾಸ್ಟೆಲ್‌ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ  ನೆಗೆಟಿವ್ ರಿಪೋರ್ಟ ಬಂದ ನಂತರ ಏಳನೇ ದಿನಕ್ಕೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಬೇಕು ಎಂದು ತಿಳಿಸಿದರು.

 

ಹೋಟೆಲ್, ರೆಸ್ಟೋರೆಂಟ್, ಸಿನೆಮಾ ಹಾಲ್ , ಈಜುಗೊಳ, ಸಾರ್ವಜನಿಕ ಗ್ರಂಥಾಲಯ, ಮೃಗಾಲಯ, ಉದ್ಯಾನವನಗಳಲ್ಲಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು.  ಲಸಿಕೆ ಪಡೆಯದವರನ್ನು ಶೀಘ್ರ ಗುರುತಿಸಿ ಲಸಿಕೆ ನೀಡುವಂತೆ ನಿರ್ದೇಶನ ನೀಡಿದರು. ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು ಹಾಗೂ ಅಧಿಕ ವಿದ್ಯಾರ್ಥಿಗಳಿರುವ  ಶಿಕ್ಷಣ ಸಂಸ್ಥೆಗಳಲ್ಲಿ ಅರ್ಹರಿಗೆ  ಲಸಿಕಾಕರಣ ನಿರ್ವಹಿಸುವಂತೆ ಹೇಳಿದರು.

 

ಅರ್ಹ ಎಲ್ಲರಿಗೂ ಲಸಿಕಾಕರಣ ನೀಡಲು ವಿಶೇ಼ಷ ಶಿಬಿರಗಳನ್ನು ಮಾಡಬೇಕು. ಮೊದಲ ಡೋಸ್ ಪಡೆದು ಎರಡನೇ ಡೋಸ್‌ಗೆ ಅರ್ಹರಿರುವವರನ್ನು ಗುರುತಿಸಿ  ನಿಗದಿತ ಅವಧಿಯೊಳಗೆ  ಲಸಿಕೆ ನೀಡಬೇಕು.   ಜಿಲ್ಲೆಯ ಜಿಮ್ಸ್ ಸೇರಿದಂತೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಔಷಧೋಪಕರಣ ಹಾಗೂ ಸಾಧನ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು ತಿಳಿಸಿದರು.

 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸೋಂಕು ಪತ್ಯೆಗಾಗಿ ಕೈಗೊಳ್ಳುತ್ತಿರುವ ಪರೀಕ್ಷೆಗಳನ್ನು ನಿರಂತರವಾಗಿ ಮುಂದುವರೆಸಬೇಕು. ಜಿಲ್ಲೆಯಲ್ಲಿರುವ ಆಕ್ಸಿಜನ್ ಉತ್ಪಾದನಾ ಕೇಂದ್ರಗಳ ಸ್ಥಿತಿಗಳ ಹಾಗೂ ಈಗಾಗಲೇ  ಆಸ್ಪತ್ರಗಳಿಗೆ ಒದಗಿಸಲಾದ  ಆಕ್ಸಿಜನ್ ಕಾನ್ಸನ್ಟೆçÃಟರ್ ಸೇರಿದಂತೆ ಆಕ್ಸಿಜನ್ ಸಿಲೆಂಡರ್‌ಗೆ ಅಗತ್ಯವಿರುವ ಆಕ್ಸಿಜನ್ ಪೂರೈಕೆಗೆ ಸಂಬAಧಿತ ಸರಬರಾಜುದಾರರ  ಜೊತೆಗೆ ಒಪ್ಪಂದ ಮಾಡಿಟ್ಟುಕೊಳ್ಳಬೇಕು. ಕೋವಿಡ್ ಸೊಂಕಿಗೆ ಅಗತ್ಯ ಔಷದಿ ಸಂಗ್ರಹಕ್ಕೆ ತಿಳಿಸಿದರು. ಗ್ರಾಮೀಣ ಬಾಗ ಸೇರಿದಂತೆ ಎಲ್ಲ ಕಡೆಗೂ ಅರ್ಹರಿಗೆ ಲಸಿಕೆ ನೀಡಲು ಕ್ರಮ ವಹಿಸಬೇಕು ಎಂದರು.

 

 

spot_img

Mayor’s gown engulfs HDMC meeting

Hubballi: Not a single issue was discussed at the Hubballi-Dharwad Municipal Corporation's (HDMC) general body meeting on Friday, owing to mayor Iresh Anchatgeri's refusal...

Mayor attend General Body meeting of HDMC without wearing gown,  Congress stage protest

Hubballi: Congress party workers raised a strong objection after Mayor Iresh Anchtageri tried to start the General Body meeting proceedings without wearing the traditional...

LEAVE A REPLY

Please enter your comment!
Please enter your name here

This is the title of the web page
This is the title of the web page