ಹುಬ್ಬಳ್ಳಿ- : ದೇಶದಲ್ಲಿ ಕೊರೊನಾ ಚಿಕಿತ್ಸೆಗೆ ರೆಮ್ಡಿಸಿವಿಯರ್ ಖರೀದಿಗೆ ಮುಕ್ತವಾಗಿರಿಸಿದೆ. ಅದೇ ರೀತಿ ಇನ್ನೆರಡು ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ಪೀಡಿತ ರೋಗಿಗಳಿಗೆ ಪೂರ್ಣ ಪ್ರಮಾಣದ ಔಷಧ ದೊರೆಯುವಂತೆ ಕೇಂದ್ರ ಸರಕಾರ ಕ್ರಮಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಕೇಂದ್ರ ಸರಕಾರ ಯಶಸ್ವಿ ಏಳು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
, ಎರಡನೇ ಭಾರಿ ಬಿಜೆಪಿ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷ ಆಯಿತು. ಆ ಹಿನ್ನಲೆ ವಿಜೃಂಭಣೆ ಸಂಭ್ರಮಾಚರಣೆ ಬಿಟ್ಟು. ಕೊರೊನಾ ನಿಯಂತ್ರಿಸಲು ಸರಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಜೂನ್ 7 ರ ನಂತರ ಜನತಾ ಕರ್ಪ್ಯೂ ಮುಂದುವರಿಸುವ ವಿಚಾರವಾಗಿ, ಈಗಲೆ ಹೇಳುವುದು ಹೇಳುವುದು ಸರಿಯಲ್ಲ. ಇಲ್ಲಿಯವರೆಗೆ ಮುಖ್ಯಮಂತ್ರಿ ಗಳ ನೇತೃತ್ವದಲ್ಲಿ ಸರಕಾರ ಉತ್ತಮ ನಿರ್ಧಾರವನ್ನ ತೆಗೆದುಕೊಂಡಿದೆ. ಮುಂದೆಯೂ ಒಳ್ಳೆಯ ನಿರ್ಧಾರವನ್ನು ಮುಖ್ಯಮಂತ್ರಿಗಳು ಕೈಗೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.