ಶಿರಸಿಯ ಸುಲೋಚನಾ ವಯಸ್ಸು 53(ಹೆಸರು ಬದಲಾಯಿಸಲಾಗಿದೆ) ಅವರು ಮನೆಯಲ್ಲಿ ಬಿದ್ದು ತಲೆಗೆ ಪಟ್ಟಾಗಿ ಬಂದು ಎಸ್ ಡಿ ಎಮ್ ಆಸ್ಪತ್ರೆಗೆ ದಿನಾಂಕ 23/6/21 ರಂದು ದಾಖಲಾಗಿದ್ದರು. 25/6/21ರಂದು ಮೆದಳು ನಿಶ್ಕೃಯ ಎಂದು ಘೋಶಿಸಲಾಗಿತ್ತು. ಕುಟುಂಬ ಸದಸ್ಯರ ಜೊತೆ ಚರ್ಚಿಸಿ ಒಪ್ಪಿಗೆ ಸೂಚಿಸಿದ ನಂತರ ಇಂದು ಬೆಳಗ್ಗೆ 9 ಗಂಟೆಯಿಂದ 11 ಗಂಟೆ ನಡುವೆ ಕಾನೂನಾತ್ಮಕವಾಗಿ ಅಂಗಾಂಗಳಾದ ಯಕೃತ, ಎರಡು ಕಿಡ್ನಿ, ಎರಡು ಕಣ್ಣುಗಳನ್ನು ಬೇರ್ಪಡಿಸಲಾಯಿತು. ಸರ್ಕಾರಿ ಸೌಮ್ಯದ ಸಂಸ್ಥೆಯಾದ ‘ಜೀವ ಸಾರ್ಥಕತೆ’ಯಲ್ಲಿ ನೋಂದಾಯಿತರಾದವರ ಅಂಗಾಂಗ ಕಸಿಗಾಗಿ ಜೀವನ್ಮರಣ ನಡುವೆ ಹೋರಾಟ ಮಾಡುತ್ತಿರುವ ಅದೇ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕಸಿ ಮಾಡಲು ಕಳುಹಿಸಲಾಯಿತು.
ಎರಡು ಕಣ್ಣು ಎರಡು ಕಿಡ್ನಿಗಳನ್ನು ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ,ನೋಂದಾಯಿತ ವ್ಯಕ್ತಿಗಳಿಗೆ ಕಸಿ ಮಾಡಲಾಯಿತು. ಯಕೃತನ್ನು ಬೆಂಗಳೂರಿನ ಆಸ್ಟರ್ ಆರ್ ವಿ ಆಸ್ಪತ್ರೆಗೆ, ಎಸ್ ಡಿ ಎಮ್ ಆಸ್ಪತ್ರೆಯಿಂದ ಹುಬ್ಬಳ್ಳಿಯ ವಿಮಾನ ನಿಲ್ದಾಣದವರೆಗೆ ಗ್ರೀನ್ ಕಾರಿಡಾರ ಝೀರೋ ಟ್ರಾಫಿಕ)ನಲ್ಲಿ ಒಯ್ಯಲಾಯಿತು.
ನೆಫ್ರೋಲಾಜಿ, ಯುರೋಲಾಜಿ, ಪ್ಲಾಸ್ಟಿಕ್ ಸರ್ಜರಿ, ಶಸ್ತ್ರಚಿಕಿತ್ಸಾ ವಿಭಾಗದ ಹಾಗೂ ಅರವಳಿಕೆ ವಿಭಾಗದ ವೈದ್ಯರ ತಂಡ ಅಂಗಾಂಗ ಕಸಿಯನ್ನು ಮಾಡಿದ್ದಾರೆ. ಎಸ್ ಡಿ ಎಮ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ ನಿರಂಜನ್ ಕುಮಾರ ಅವರು ಅಂಗಾಂಗ ದಾನ ಮಾಡಿದ ಕುಟುಂಬದ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಮತ್ತು ವೈದ್ಯರ ತಂಡಕ್ಕೆ ಹಾಗೂ ಈ ಸಮಯದಲ್ಲಿ ಸಹಕರಿಸಿದ ಇತರೆ ಸಿಬ್ಬಂದಿಗಳಿಗೆ, ಜೀವ ಸಾರ್ಥಕತೆ ಮತ್ತು ಮೋಹನ್ ಫೌಂಡೆಶನ್ ಅವರಿಗೆ ಅಭಿನಂದಿಸಿದ್ದಾರೆ.
ತುರ್ತು ಸಮಯದಲ್ಲಿ ಮಾಹಿತಿ ನೀಡಿದ ಮೇಲೆ ಗ್ರೀನ್ ಕಾರಿಡಾರ್ (ಝಿರೋ ಟ್ರಾಫಿಕ್) ಗೆ ಸಹಕರಿಸಿದ ಬಿಆರ್ ಟಿಎಸ್ ಪ್ರಾದೇಶಿಕ ವ್ಯವಸ್ಥಾಪಕರಾದ ಗಣೇಶ ರಾಠೋಡ ಹಾಗೂ ಎಲ್ಲ ಸಿಬ್ಬಂದಿ ಹಾಗೂ ಉಪ ಪೋಲೀಸ್ ಆಯುಕ್ತರಾದ ರಾಮರಾಜನ್ ಹಾಗೂ ಎಲ್ಲ ಪೋಲೀಸ್ ಸಿಬ್ಬಂದಿಗೆ, ಕುಟುಂಬ ಸದಸ್ಯರಿಗೆ ಉಪಕುಲಪತಿಗಳಾದ ಡಾ ನಿರಂಜನ್ ಕುಮಾರ ಅವರು ಕೃತಜ್ಞತೆ ತಿಳಿಸಿದ್ದಾರೆ.