Bengaluru: Health and Family Welfare Minister Dr. K Sudhakar said that 66% of the children in the 15-18 age group are now vaccinated with the first dose in the state.
He said vaccination drive progressing at a good speed. Gadag district achieved 99 percent in inoculating the kids with the vaccine. Kalaburgi is in the last spot in terms of vaccinating the children with the dose by inoculating only 51 % of the total targeted population, he said.
ರಾಜ್ಯದ ಶೇ. 66ರಷ್ಟು ಮಕ್ಕಳಿಗೆ ಮೊದಲ ಡೋಸ್ ಲಸಿಕೆ: ಸಚಿವ ಕೆ. ಸುಧಾಕರ್
ಬೆಂಗಳೂರು: ರಾಜ್ಯದ ಶೇ. 66ರಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಎಂದು ಅರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಕೂನಲ್ಲಿ ಲಸಿಕೆ ಕುರಿತು ವಿಷಯ ಹಂಚಿಕೊಂಡಿರುವ ಅವರು, ರಾಜ್ಯದಲ್ಲಿ 15 ರಿಂದ 18 ವರ್ಷ ವರ್ಗದ ಮಕ್ಕಳಲ್ಲಿ ಮೂರನೇ ಎರಡು ಭಾಗದಷ್ಟು ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದು ಕೊಂಡಿದ್ದಾರೆ ಎನ್ನುವ ಮಾಹಿತಿ ಜೊತೆಗೆ ಪ್ರತಿ ಜಿಲ್ಲೆಗಳಲ್ಲಿ ಎಷ್ಟು ಮಕ್ಕಳು ಲಸಿಕೆ ಪಡೆದಿದ್ದರೆ ಎನ್ನುವುದನ್ನು ತಿಳಿಸಿದ್ದಾರೆ.
ಇದರಲ್ಲಿ ಗದಗ ಜಿಲ್ಲೆ ಮಕ್ಕಳ ಲಸಿಕೆ ಅಭಿಯಾನದಲ್ಲಿ ಮೊದಲ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಈ ವರ್ಗದ ಶೇ 99 ಮಕ್ಕಳು ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ.
ಗುಲ್ಬರ್ಗ ಜಿಲ್ಲೆಯಲ್ಲಿ ಕೇವಲ ಶೇ 51ರಷ್ಟು ಮಕ್ಕಳು ಮಾತ್ರ ಮೊದಲ ಡೋಸ್ ಲಸಿಕೆ ಹೊಂದಿರುವುದರಿಂದ. ಜಿಲ್ಲೆ ಲಸಿಕೆ ಅಭಿಯಾನದಲ್ಲಿ ಕೊನೆಯ ಸ್ಥಾನವನ್ನು ಪಡೆದಿದೆ.
ಉಳಿದಂತೆ ಕೊಡಗು ಮತ್ತು ಉಡುಪಿಯಲ್ಲಿ ಶೇ 87, ಉತ್ತರ ಕನ್ನಡ ಶೇ 83, ಬೆಂಗಳೂರು ನಗರ, ದಕ್ಷಿಣ ಕನ್ನಡ ಶೇ 79, ಬಾಗಲಕೋಟೆ ಶೇ 77, ಶಿವಮೊಗ್ಗ ಶೇ 76, ಧಾರವಾಡ ಶೇ 75, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಶೇ 74, ಚಿಕ್ಕಮಗಳೂರು ಶೇ 73 ರಷ್ಟು ಲಸಿಕೆಯನ್ನು ನೀಡಿ ಮೊದಲ ಹತ್ತು ಸ್ಥಾನದಲ್ಲಿವೆ.
The Hubli Express is on WhatsApp now, you can join the WhatsApp group by clicking the link
https://chat.whatsapp.com/C6J8Tg5qnmn3zSkcEKOtAd
You can follow us on Facebook @HubliExpress