spot_img
spot_img
20.8 C
Hubli
Saturday, October 8, 2022
HomeNationalಹೈದರಾಬಾದ್ ಗೆ ಬಸ್ ಸಂಚಾರ ಆರಂಭ

ಹೈದರಾಬಾದ್ ಗೆ ಬಸ್ ಸಂಚಾರ ಆರಂಭ

ಹುಬ್ಬಳ್ಳಿ: ಅನ್ ಲಾಕ್ ಎರಡನೇ ದಿನ ಮಂಗಳವಾರ ಸಾರ್ವಜನಿಕ ಸಾರಿಗೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಗ್ರಾಮೀಣ ವಿಭಾಗದಿಂದ 192 ಬಸ್ಸುಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ. ಹೈದರಾಬಾದ್, ಬೆಂಗಳೂರು, ಕಲಬುರಗಿಗೆ ರಾತ್ರಿ ರಾಜಹಂಸ,‌ ಸ್ಲೀಪರ್ ಬಸ್ಸುಗಳನ್ನು ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

ಬೆಳಿಗ್ಗೆ6 ಗಂಟೆಯಿಂದಲೇ ಜನರು ಬಸ್ ನಿಲ್ದಾಣಗಳ ಕಡೆ ಬರತೊಡಗಿದರು. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳ ಸಂಖ್ಯೆಯನ್ನು 192ಕ್ಕೆ ಹೆಚ್ಚಿಸಲಾಯಿತು. ಮೊದಲ ದಿನ 127 ಬಸ್ಸುಗಳು ಕಾರ್ಯಾಚರಣೆಗೊಂಡವು. ಎರಡನೇ ದಿನ ಪ್ರಯಾಣಿಕ ಸಂಖ್ಯೆಯಲ್ಲಿ ಹೆಚ್ಚಳವಾದ ಕಾರಣ ಬಸ್ಸುಗಳನ್ನು ಹೆಚ್ಚಿಸಲಾಯಿತು.

ರಾಜ್ಯದಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಸಾರ್ವಜನಿಕ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಹೈದರಾಬಾದ್ ಗೆ ಹಗಲಿನಲ್ಲಿ ಎರಡು ವೇಗದೂತ ಮತ್ತು ರಾತ್ರಿ ಒಂದು ರಾಜಹಂಸ ಬಸ್ಸುಗಳ ಸಂಚಾರ ಆರಂಭಿಸಲಾಗಿದೆ. ಬೆ.7ಕ್ಕೆ ಹೊರಡುವ ವೇಗದೂತ ಬಸ್ಸು ಗದಗ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು, ಮಹಬೂಬನಗರ, ಜಡ್ ಚರ್ಲ ಮಾರ್ಗವಾಗಿ ಹೋಗುತ್ತವೆ.
ಬೆ.8ಕ್ಕೆ ಹೊರಡುವ ವೇಗದೂತ ಬಸ್ಸು ನವಲಗುಂದ, ರೋಣ, ಗಜೇಂದ್ರಗಡ, ಕುಷ್ಟಗಿ, ಸಿಂಧನೂರು, ರಾಯಚೂರು, ಮೆಹಬೂಬನಗರ, ಜಡ್ ಚರ್ಲ ಮಾರ್ಗವಾಗಿ ಹೋಗುತ್ತದೆ. ಈ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.
ರಾತ್ರಿ ಸಾರಿಗೆ ಐಶಾರಾಮಿ ಬಸ್ಸು
ಹೈದರಾಬಾದ್ ಗೆ ರಾತ್ರಿ 7-30ಕ್ಕೆ ರಾಜಹಂಸ ಬಸ್ ಸಂಚರಿಸುತ್ತದೆ. ಬೆಂಗಳೂರಿಗೆ ರಾತ್ರಿ 7-30ಕ್ಕೆ ರಾಜಹಂಸ ಮತ್ತು 8-30ಕ್ಕೆ ನಾನ್ ಎಸಿ ಸ್ಲೀಪರ ಹಾಗೂ ಕಲಬುರಗಿಗೆ ರಾತ್ರಿ 10-30ಕ್ಕೆ ನಾನ್ ಎಸಿ ಸ್ಲೀಪರ್ ಬಸ್ ಸಂಚರಿಸುತ್ತದೆ. ಈ ಬಸ್ಸುಗಳು ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ. ಐಶಾರಾಮಿ ಬಸ್ಸುಗಳಿಗೆ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಇಂದು ಜಿಲ್ಲೆಯೊಳಗೆ ತಾಲ್ಲೂಕು ಕೇಂದ್ರಗಳು ಮತ್ತು ಪ್ರಮುಖ ಸ್ಥಳಗಳು ಸೇರಿದಂತೆ ಹೊರಜಿಲ್ಲೆಗಳ ಸ್ಥಳಗಳಾದ ಬಾಗಲಕೋಟೆ,ಗದಗ, ಗಂಗಾವತಿ, ಕಲಬುರಗಿ, ಹಾವೇರಿ, ಇಲಕಲ್, ಬೆಳಗಾವಿ, ವಿಜಯಪುರ, ಹಾನಗಲ್, ಶಿವಮೊಗ್ಗ, ಲಕ್ಷ್ಮೇಶ್ವರ, ಶಿರಹಟ್ಟಿ, ಶಿರಸಿ, ಮಂಗಳೂರು ಮತ್ತಿತರ ಊರುಗಳಿಗೆ ಬಸ್ಸುಗಳು ಸಂಚರಿಸಿವೆ ಎಂದು ಅವರು ತಿಳಿಸಿದ್ದಾರೆ.

spot_img

SWR renames the Tipu Express 

Hubballi: The South Western Railway (SWR) on Friday stated that they have decided to rename the Mysuru-Bengaluru Tipu Express train and the Talaguppa-Mysuru Express...

Unanimous decision to hike reservation for Scheduled Castes to 17 per cent, Scheduled Tribes to 7 per cent: CM Bommai

Bengaluru, Oct.7:It has been unanimously decided to hike reservation for the Scheduled Castes from 15 per cent to 17 per cent and the Scheduled...

LEAVE A REPLY

Please enter your comment!
Please enter your name here

This is the title of the web page
This is the title of the web page