spot_img
spot_img
spot_img
spot_img
29 C
Hubli
Thursday, September 29, 2022
HomeHubballi / Dharwadಹುಬ್ಬಳ್ಳಿ ಹಳೇ ಬಸ್‌ ಸ್ಟ್ಯಾಂಡ್‌ ನ್ಯಾಗ್‌ ನಿಂತಿದ್ದೆ ಅನ್ನುವಂಗ ಇಲ್ಲ.. ಯಾಕಂದ್ರ..

ಹುಬ್ಬಳ್ಳಿ ಹಳೇ ಬಸ್‌ ಸ್ಟ್ಯಾಂಡ್‌ ನ್ಯಾಗ್‌ ನಿಂತಿದ್ದೆ ಅನ್ನುವಂಗ ಇಲ್ಲ.. ಯಾಕಂದ್ರ..

ಹುಬ್ಬಳ್ಳಿ: ಹುಬ್ಬಳ್ಳಿ ಹಳೇ ಬಸ್‌ಸ್ಟ್ಯಾಂಡ್‌ ಈಗ ನೆನಪು ಮಾತ್ರರೀ.. ಹಳೇ ಬಸ್‌ಸ್ಟ್ಯಾಂಡ್‌ ಹುಬ್ಬಳ್ಳಿ ಪ್ರಮುಖ ಜಾಗ.. ಯಾರಾದರೂ ಹೊಸಬರು ಊರಿಗೆ ಬಂದರೆ ಹಳೇ ಬಸ್‌ ಸ್ಟ್ಯಾಂಡ್‌ಗೆ ಇಳಿರಿ ಅಂತಿದ್ರೂ ಈಗ ಆ ಜಾಗಾನ ಇಲ್ಲ ಯಾಕಂದ್ರ ಆ ಜಾಗಾದಾಗ ಹೊಸ ಬಸ್‌ಸ್ಟ್ಯಾಂಡ್‌ ಬರಲಿದೆ.

ಇನ್ನೊಂದು ೧೮ ತಿಂಗಳಲ್ಲಿ ಈ ಬಸ್‌ಸ್ಟ್ಯಾಂಡ್‌ ರೆಡಿಯಾಗಲಿದೆ. ಸ್ಮಾಟ್‌೯ಸಿಟಿ ಯೋಜನೆಯ ಅಡಿಯಲ್ಲಿ ಸುಮಾರು ರೂ ೩೫,೫೮ ವೆಚ್ಚದಲ್ಲಿ ಈ ನಿಲ್ದಾಣ ನಿಮಾ೯ಣವಾಗಲಿದೆ.

ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅಂಗಡಿ ಮಳಿಗೆಗಳು, ತಿಂಡಿ ಪದಾರ್ಥಗಳು ಹಾಗೂ ಆಹಾರ ಸೌಲಭ್ಯ ದೊರೆಯುವಂತೆ ಮೂಲ ಸೌಕರ್ಯದಿಂದ ಕೂಡಿದ ಸುಸಜ್ಜಿತ ನೂತನ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿಯು 18 ತಿಂಗಳಾಗಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ ಅವರು ಹೇಳಿದರು.

ಹಳೇ ಬಸ್ ನಿಲ್ದಾಣದ ಬಳಿ  ನೂತನ ಬಸ್ ನಿಲ್ದಾಣದ ಭೂಮಿ ಪೂಜೆ ನೆರವೆರಿಸಿ ಅವರು ಮಾತನಾಡಿದ ಅವರು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಗುಣಮಟ್ಟದ ಕಾರ್ಯ ಮಾಡಲು ಗುತ್ತಿಗೆದಾರರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಪುನಃ ಕಟ್ಟಡದ ಪ್ರಗತಿ ಪರಿಶೀಲನೆ ಮಾಡಲಾಗುವುದು.

ಹೊಸೂರ ಬಸ್ ನಿಲ್ದಾಣ ನಾನು ಅಧಿಕಾರಕ್ಕೆ ಬರುವ ಮುಂಚೆಯೇ ನಿರ್ಮಿಸಲಾಗಿದ್ದು, ಅದರಂತೆ ಈ ನೂತನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ.

ಪಾಲಿಕೆ ಚುನಾವಣೆಗಾಗಿ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಧಿ ನೀಡಲಾಗಿದೆ. ಅವರು ನೀಡಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಪಾಲಿಕೆ ಚುನಾವಣೆಯಾಗುವುದು ಸರ್ಕಾರದ ಅಭಿಲಾಶೆಯಾಗಿದೆ. ಹಾಗಾಗಿ ಬೆಳಗಾವಿ, ಗುಲ್ಬರ್ಗ, ಬಿಜಾಪೂರ ಹಾಗೂ ಹುಬ್ಬಳ್ಳಿ ಈ ನಾಲ್ಕು ಮಹಾನಗರಗಳಲ್ಲಿ ಪಾಲಿಕೆ ಚುನಾವಣೆಯಾಗಲಿವೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಪ್ರದೀಪ್ ಶೆಟ್ಟರ್, ಅರವಿಂದ್ ಬೆಲ್ಲದ,  ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ವಾಯುವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

spot_img

Bommai says everyone know who is doing Bharat Jodo, and who is doing Bharat Todo

Haveri: All know who is doing 'Bharath Jodo' and who's doing 'Todo', said Chief Minister Basavaraj Bommai. Replying to a reporter on KPCC President D.K.Shivakumar's...

Dussehra festival: NWKRTC to run 500 additional buses

Hubballi: North Western Karnataka Road Transport Corporation (NWKRTC) is preparing to ensure that passengers have no problems ahead of the Dussehra festival by organising...

LEAVE A REPLY

Please enter your comment!
Please enter your name here

This is the title of the web page
This is the title of the web page