spot_img
spot_img
30 C
Hubli
Tuesday, October 4, 2022
HomeHubballi / Dharwadಹುಬ್ಬಳ್ಳಿ: ಬಸ್ ಟಿಕೆಟ್ ನಲ್ಲಿ ಕೊರೊನಾ ಲಸಿಕೆ ಜಾಗೃತಿ

ಹುಬ್ಬಳ್ಳಿ: ಬಸ್ ಟಿಕೆಟ್ ನಲ್ಲಿ ಕೊರೊನಾ ಲಸಿಕೆ ಜಾಗೃತಿ

ಹುಬ್ಬಳ್ಳಿ : ಸಾರ್ವಜನಿಕರಿಗೆ ಕೋವಿಡ್ ಲಸಿಕೆಯ ಮಹತ್ವ ಹಾಗೂ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ  ಬಗ್ಗೆ ಜಾಗೃತಿ ಮೂಡಿಸಲು ವಾಯವ್ಯ ಸಾರಿಗೆ ಸಂಸ್ಥೆ ಬಸ್ ಟಿಕೆಟ್ ನಲ್ಲಿ ಸಂದೇಶಗಳನ್ನು ಮುದ್ರಿಸಲಾಗುತ್ತಿದೆ.

ಸಾರ್ವಜನಿಕರಿಗೆ  ದೈನಂದಿನ ಅಗತ್ಯ ಸಾರಿಗೆ ಸೇವೆ  ಒದಗಿಸುತ್ತಿರುವ  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಯಲು ಪ್ರಾರಂಭದಿಂದಲೂ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸಿದೆ. ಇತ್ತೀಚೆಗೆ ಕೋವಿಡ್ ಮೂರನೆ ಅಲೆ ಭೀತಿ, ಡೆಲ್ಟಾ ಪ್ಲಸ್ ಆತಂಕದ ಹೆಚ್ಚುತ್ತಿದೆ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿಮೂಡಿಸಲು ಸಾರಿಗೆ ಸಂಸ್ಥೆ ಮುಂದಾಗಿದೆ. ಬಸ್ಸುಗಳಲ್ಲಿ ಪ್ರಯಾಣಿಕರಿಗೆ ನೀಡುವ ಟಿಕೆಟ್ ಗಳಲ್ಲಿ ಕೊರೊನಾ ಜಾಗೃತಿ ಸಂದೇಶಗಳನ್ನು ಮುದ್ರಿಸಲಾಗುತ್ತಿದೆ.

“ಕೊರೊನಾ ಅಪಾಯ ತಡೆಯಲು ತಪ್ಪದೆ ಲಸಿಕೆ ಪಡೆಯಿರಿ”

“ಕೊರೊನಾದಿಂದ ರಕ್ಷಿಸಿಕೊಳ್ಳಲು ತಪ್ಪದೆ ಲಸಿಕೆ ಪಡೆಯಿರಿ”

“ಬಸ್ ಮತ್ತು ನಿಲ್ದಾಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ”

” ಕೊರೊನಾದಿಂದ ರಕ್ಷಿಸಿಕೊಳ್ಳಲು ತಪ್ಪದೆ ಮಾಸ್ಕ್ ಧರಿಸಿರಿ”

ಮುಂತಾದ ಸಂದೇಶಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ. ಸಾರಿಗೆ ಸಂಸ್ಥೆಯ ಈ ಕ್ರಮಕ್ಕೆ ಸಾರ್ವಜನಿಕರು   ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯೊಳಗೆ,  ಹೊರ ಜಿಲ್ಲೆಗಳು, ಅಂತರರಾಜ್ಯ ಗಳು ಸೇರಿದಂತೆ ಸಾವಿರಾರು ಊರುಗಳಿಗೆ ನಮ್ಮ ಬಸ್ ಗಳು ಸಂಚರಿಸುತ್ತವೆ. ಈ ಬಸ್ಸುಗಳಲ್ಲಿ ಪ್ರತಿದಿನ ವಿವಿಧ ಸ್ತರದ  40 ರಿಂದ  50 ಸಾವಿರ ಜನರು ಪ್ರಯಾಣ ಮಾಡುತ್ತಾರೆ. ಅವರಿಗೆ  ಲಸಿಕೆ ಮತ್ತು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಹೊಸದಾಗಿ ಏನನ್ನಾದರೂ ಮಾಡಬೇಕು ಎಂದು ಆಲೋಚಿಸುತ್ತಿರುವಾಗ ಈ ಯೋಚನೆ ಹೊಳೆಯಿತು.ಬಸ್ ಟಿಕೆಟ್ ಗಳಲ್ಲಿ ಲಸಿಕೆ ಮಹತ್ವ ಮತ್ತು ಕೊರೊನಾ ಜಾಗೃತಿ ಸಂದೇಶಗಳನ್ನು ಮುದ್ರಿಸಿದರೆ ಸುಲಭವಾಗಿ ಪ್ರತಿದಿನ ಸಾವಿರಾರು ಜನಕ್ಕೆ  ತಲುಪಿಸಬಹುದು. ಪ್ರತಿಯೊಬ್ಬರೂ ಟಿಕೆಟ್ ಪಡೆದ ಕೂಡಲೆ ಅದರಲ್ಲಿ ಮುದ್ರಿಸಿರುವ ಊರು,ಪ್ರಯಾಣ ದರ ಪರಿಶೀಲಿಸುತ್ತಾರೆ‌.ಆಗ  ಸಂದೇಶ ಗಮನಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ  ಎಂಬ ಅಭಿಪ್ರಾಯಕ್ಕೆ ಬಂದು ಈ ಪ್ರಯೋಗಕ್ಕೆ ಕೈ ಹಾಕಿದೆವು.ಇದನ್ನು ಪ್ರಯಾಣಿಕರು ಸ್ವಾಗತಿಸಿ ಮೆಚ್ಚುಗೆ ಸೂಚಿಸಿರುವುದು  ಖುಷಿ ತಂದಿದೆ  ಎಂದು  ಹುಬ್ಬಳ್ಳಿ ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದರು.

 

 

spot_img

Son dies at Garba event, shocked dad passes away hours later

A 35-year-old man died of a heart attack while attending a Garba event in Maharashtra. His dad, who had rushed him to the hospital,...

Keshwapur police nab two accused, seize two bikes

Hubballi: The Keshwapur police have nabbed two accused on charges of lifting bikes. The police seized one Splendor and one Hero Honda Hunk from...

LEAVE A REPLY

Please enter your comment!
Please enter your name here

This is the title of the web page
This is the title of the web page