spot_img
spot_img
27 C
Hubli
Wednesday, December 7, 2022
HomeKannadaಸುಮಾರು 21 ಸಾವಿರ ಹೆಕ್ಟೇರ್ ಕೃಷಿ ಬೆಳೆ ಜಲಾವೃತ, ಇಂದು ಒಂದೇ ದಿನ 191 ಮನೆಗಳು...

ಸುಮಾರು 21 ಸಾವಿರ ಹೆಕ್ಟೇರ್ ಕೃಷಿ ಬೆಳೆ ಜಲಾವೃತ, ಇಂದು ಒಂದೇ ದಿನ 191 ಮನೆಗಳು ಭಾಗಶ: ಹಾನಿ : ಜಿಲ್ಲಾಧಿಕಾರಿ ನಿತೇಶ ಪಾಟೀಲ

 

ಧಾರವಾಡ: ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದರಿಂದ ನಿರೀಕ್ಷೆಗಿಂತ ಹೆಚ್ಚು ಭೂಮಿಯಲ್ಲಿ ಬಿತ್ತನೆಯಾಗಿತ್ತು. ಆದರೆ ಈಗ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಇವತ್ತಿನವರೆಗೆ ಸುಮಾರು 21,732 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆ ಭಾಗಶ: ಜಲಾವೃತವಾಗಿದೆ. ಅದರಲ್ಲಿ ಮುಖ್ಯವಾಗಿ 1,675 ಹೆಕ್ಟೇರ್ ಸೋಯಾಬೀನ, 6,684 ಹೆಕ್ಟೇರ್ ಗೋವಿನಜೋಳ, 1,646 ಹೆಕ್ಟೇರ್ ಹೆಸರುಕಾಳು, 106 ಹೆಕ್ಟೇರ್ ಶೇಂಗಾ ಬೆಳೆ ಹಾಗೂ 813 ಹೆಕ್ಟೇರ್ ಹತ್ತಿಬೆಳೆ ಅತೀ ತೇವಾಂಶದಿಂದ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

 

16 ಸೇತುವೆ, 52 ಕಿ.ಮೀ ರಸ್ತೆ ಭಾಗಶ: ಹಾನಿ ಮತ್ತು 16 ರಸ್ತೆಗಳ ಸಂಪರ್ಕ ತಾತ್ಕಾಲಿಕ ಕಡಿತ : ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿರ್ವಹಣೆಯಲ್ಲಿರುವ ವಿವಿಧ ತಾಲೂಕುಗಳಲ್ಲಿನ ಸುಮಾರು 16 ಸೇತುವೆಗಳು ಭಾಗಶ: ಹಾನಿಯಾಗಿದ್ದು, ಸಂಚಾರಕ್ಕೆ ಮುಕ್ತವಾಗಿವೆ.   25 ಕಿ.ಮೀ. ರಾಜ್ಯ ರಸ್ತೆ ಹಾಗೂ 27 ಕಿ.ಮೀ. ಜಿಲ್ಲಾ ರಸ್ತೆ ಭಾಗಶ: ಹಾನಿಯಾಗಿದ್ದು, ಮಳೆ ನಿಂತ ನಂತರ ದುರಸ್ತಿ ಮಾಡಲಾಗುವುದೆಂದು ಅವರು ತಿಳಿಸಿದರು.

 

ವಿವಿಧ ತಾಲೂಕುಗಳಲ್ಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 16 ರಸ್ತೆಗಳು ಅತೀಯಾದ ಮಳೆಯಿಂದಾಗಿ ತಾತ್ಕಾಲಿಕವಾಗಿ ಬಂದ್ ಆಗಿವೆ. ಮಳೆ ಕಡಿಮೆಯಾದಂತೆ ರಸ್ತೆಯ ಮೇಲಿನ ನೀರು ಸರಿದು ಸಂಚಾರಕ್ಕೆ ಮುಕ್ತವಾಗಲಿದೆ. ಅಲ್ಲಿಯವರೆಗೆ ಸಾರ್ವಜನಿಕರು ಈ ಸ್ಥಳಗಳಲ್ಲಿ ಸಂಚರಿಸದಂತೆ ಜಾಗೃತಿ ಮೂಡಿಸಲಾಗಿದೆ ಎಂದು ಅವರು ಹೇಳಿದರು.

 

158 ಶಾಲೆ, 130 ಅಂಗನವಾಡಿ ಕೇಂದ್ರಗಳಲ್ಲಿ ಸೋರಿಕೆ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಸುಮಾರು 158 ಶಾಲೆಗಳ ಶಾಲಾ ಕಟ್ಟಡ ಹಾಗೂ 130 ಅಂಗನವಾಡಿ ಕೇಂದ್ರಗಳು ಅತೀ ತೇವಾಂಶದಿಂದಾಗಿ ಸೋರಿಕೆಯಾಗುತ್ತಿವೆ ಎಂದು ಅವರು ತಿಳಿದರು.

 

561 ಮನೆಗಳು ಭಾಗಶ: ಹಾನಿ :  ನಿರಂತರ ಮಳೆಯಿಂದಾಗಿ ಇಲ್ಲಿಯವರೆಗೆ ಜಿಲ್ಲೆಯ ಮಹಾನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಸುಮಾರು 561 ಮನೆಗಳು ಭಾಗಶ: ಹಾನಿಯಾಗಿವೆ. ಮತ್ತು ಇಂದು ಒಂದೇ ದಿನ 191 ಮನೆಗಳು ಭಾಗಶ: ಹಾನಿಯಾಗಿವೆ. ಒಂದು ಜಾನುವಾರು ಜೀವಹಾನಿಯಾಗಿದ್ದು, ಪರಿಹಾರ ನೀಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳೊಂದಿಗಿನ ಸಂವಾದ : ಮಾನ್ಯ ಮುಖ್ಯಮಂತ್ರಿಗಳು ನೆರೆಪೀಡಿತ 8 ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಓ ಅವರೊಂದಿಗೆ ನೆರೆ ಪ್ರವಾಹ ಕುರಿತು ವಿಡಿಯೋ ಸಂವಾದ ಜರುಗಿಸಿ ಮುಂದಿನ 24 ಗಂಟೆ ಮಳೆ ಕುರಿತು ಅಲರ್ಟ್ ಇರುವಂತೆ ನಿರ್ದೇಶನ ನೀಡಿದರು. ಯಾವುದೇ ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ರಸ್ತೆ, ಸೇತುವೆ, ಕಾಳಜಿ ಕೇಂದ್ರಗಳು ಅಗತ್ಯವಿದ್ದಲ್ಲಿ ತಕ್ಷಣ ಕ್ರಮವಹಿಸುವಂತೆ ಸೂಚಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ: ಸುಶೀಲಾ ಬಿ., ಮಹಾನಗರಪಾಲಿಕೆ ಆಯುಕ್ತ ಡಾ: ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ: ಗೋಪಾಲಕೃಷ್ಣ ಬಿ. ಉಪಸ್ಥಿತರಿದ್ದರು.

Accident: Sindagi CPI Ravi Ukkund, his wife died on the spot

Kalaburgi: Sindagi Circle Inspector Ravi Ukkund, 43, and his wife Madhu, 40, were killed on the spot after the car in which they were...

Akhil’s body found, postmortem is going on

Hubballi: Finally, the police have found the dead boy of Akhil Mahajanshet in a sugarcane field in Devikoppa, near Kalaghatagi, said local sources. And...

LEAVE A REPLY

Please enter your comment!
Please enter your name here

This is the title of the web page
This is the title of the web page